ಬ್ರೇಕಿಂಗ್ ನ್ಯೂಸ್
19-06-23 12:40 pm HK News Desk ದೇಶ - ವಿದೇಶ
ವಾಷಿಂಗ್ಟನ್, ಜೂನ್ 19: ಮೂರು ದಿನ ಅಮೆರಿಕಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಜೂನ್ 23ರಂದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಾಷಿಂಗ್ಟನ್‌ನಲ್ಲಿರುವ ಅಂತರಾಷ್ಟ್ರೀಯ ವಹಿವಾಟು ಕೇಂದ್ರದ ರೊನಾಲ್ಡ್ ರೇಗನ್ ಕಟ್ಟಡದಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟಿ ಫೌಂಡೇಷನ್( ಯುಎಸ್‌ಐಸಿಎಫ್) ಆಯೋಜಿಸಿರುವ ಸಮಾವೇಶದಲ್ಲಿಒಂದು ಸಾವಿರ ಆಹ್ವಾನಿತ ಭಾರತೀಯರ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಒಂದು ಸಾವಿರ ಆಹ್ವಾನಿತರಿಗೆ ಸೀಮಿತವಾಗಿ ಆಹ್ವಾನಪತ್ರ ನೀಡಲಾಗಿದೆ. ಅವರು ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಮೋದಿ ಅವರು ಅಂದು ಸಂಜೆ 7ರಿಂದ 9 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಭಾರತದ ಪ್ರಗತಿಯ ಕಥೆ ಕುರಿತು ಮಾತನಾಡುವರು.
ಅಂದು ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಗಾಯಕಿ ಮೇರಿ ಮಿಲ್‌ಬೆನ್ ಅವರು ಮೋದಿಗೋಸ್ಕರ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮೋದಿ ಕಾರ್ಯಕ್ರಮ ಸಂಘಟನೆ ನೇತೃತ್ವ ವಹಿಸಿರುವ ಭಾರತೀಯ ಮೂಲದ ಡಾ.ಭರತ್ ಬರೈ ಅವರು, ಅಮೆರಿಕಾದಲ್ಲೂ ಮೋದಿ ಅತ್ಯಂತ ಜನಪ್ರಿಯ ನಾಯಕ. ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳು ಮೋದಿ ಅವರ ನಾಯಕತ್ವ ಮೆಚ್ಚಿಕೊಂಡಿವೆ. ಅವರ ಕಡಿಮೆ ಸಮಯದ ಕಾರ್ಯಕ್ರಮಗಳ ನಡುವೆಯು ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ಮೋದಿ ಅವರು ಒಪ್ಪಿಕೊಂಡಿದ್ದಾರೆ. ಇದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಲ್ಲಿ ಉತ್ಸಾಹ ತಂದಿದೆ ಎಂದು ಹೇಳಿದ್ದಾರೆ.
ಅಮೆರಿಕಾದ ಪ್ರಮುಖ ನಗರಗಳೂ ಸೇರಿದಂತೆ ಇಡೀ ಉಪಖಂಡದಲ್ಲಿ ಒಟ್ಟು 4.5 ಮಿಲಿಯನ್ ಭಾರತೀಯರು ನೆಲೆಸಿದ್ದಾರೆ. ಹಿಂದೆಲ್ಲಾ ಬೇರೆ ನಗರಗಳಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಿದ್ದು, ಈ ಬಾರಿ ವಾಷಿಂಗ್ಟನ್‌ನಲ್ಲಿ ಕಾಯ್ರಕ್ರಮವಿದೆ. ಇದೇ ಸಂಘಟನೆಯು 2014ರಲ್ಲಿ ಚಿಕಾಗೋ ಹಾಗೂ 2019ರಲ್ಲಿ ಹ್ಯೂಸ್ಟನ್‌ನಲ್ಲಿ ಮೋದಿ ಅವರ ಸಮಾವೇಶವನ್ನು ಆಯೋಜಿಸಿತ್ತು. ಆಗಲೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಜೂನ್ 21ರಿಂದ ನಾಲ್ಕು ದಿನಗಳ ಪ್ರವಾಸವನ್ನು ಅಮೆರಿಕಾದಲ್ಲಿ ಕೈಗೊಂಡಿದ್ದಾರೆ. ಜೂನ್ 21ರಂದು ನ್ಯೂಯಾರ್ಕ್‌ನ ವಿಶ್ವ ಸಂಸ್ಥೆ ಆವರಣದಲ್ಲಿ ಯೋಗ ದಿನದಲ್ಲಿ ಪಾಲ್ಗೊಳ್ಳುವರು. ಜೂನ್ 22ರಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಪತ್ನಿ ಆಯೋಜಿಸಿರುವ ಆತಿಥ್ಯ ಕಾರ್ಯಕ್ರಮದಲ್ಲಿ ಭಾಗಿಯಾವರು. ಜತೆಗೆ ಅಮೆರಿಕಾದ ಜಂಟಿ ಅಧಿವೇಶನದಲ್ಲಿ ಅಮೆರಿಕಾದ ಪ್ರತಿನಿಧಿಗಳನ್ನು ಉದ್ದೇಶಿಸಿ ಮೋದಿ ಮಾತನಾಡುವರು. ಅಂದು ಅಮೆರಿಕಾ ಅಧ್ಯಕ್ಷರು, ಪ್ರಮುಖರೊಂದಿಗೆ ಮಾತುಕತೆ ನಡೆಸಿ ಹಲವು ಒಪ್ಪಂದಗಳಿಗೂ ಸಹಿ ಹಾಕುವರು. ವಿಶೇಷವಾಗಿ ರಕ್ಷಣಾ ವಲಯದ ತಂತ್ರಜ್ಞಾನ ಹಾಗೂ ಉಪಕರಣ ಖರೀದಿ ವಿಚಾರವಾಗಿ ಮಹತ್ವದ ಘೋಷಣೆಗಳನ್ನು ಮೋದಿ ಮಾಡುವ ಸಾಧ್ಯತೆಯಿದೆ.
ಅಮೆರಿಕಾ ಪ್ರವಾಸ ವಿರೋಧಿಸಲು ಪಾಕಿಸ್ತಾನ ಪಿತೂರಿ;
ಮೂಲಗಳ ಪ್ರಕಾರ, ಪ್ರಧಾನಮಂತ್ರಿ ಮೋದಿ ಅವರ ಅಮೆರಿಕ ಭೇಟಿಯನ್ನು ವಿರೋಧಿಸಲು ಪಾಕಿಸ್ತಾನದ ಐಎಸ್‌ಐ ಕಳೆದ ಹಲವು ದಿನಗಳಿಂದ ಅಮೆರಿಕದಲ್ಲಿ ಸಕ್ರಿಯವಾಗಿದೆ. ಕೆಲವು ಗುಂಪುಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಜೊತೆಗೆ ಮೇಲಿಂದ ಮೇಲೆ ಸಭೆ ನಡೆಸಿದೆ. ಈ ಮೂಲಕ ಭಾರತದ ವಿರುದ್ಧದ ಪಿತೂರಿ ನಡೆಸಲು ಒಂದಷ್ಟು ಗುಂಪು/ಸಂಸ್ಥೆಗಳಿಗೆ ಹಣ ಸಹ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಭಾರತದ ಪ್ರಧಾನಿ ಮೋದಿ ಅವರ ಜೊತೆಗೆ ಅಮೆರಿಕಾ ದೇಶದ ಅಧ್ಯಕ್ಷರು ಯಾವ ವಿಚಾರ ಚರ್ಚಿಸಲಿದ್ದಾರೆ. ಭೇಟಿ ವೇಳೆ ಏನೆಲ್ಲ ಕಾರ್ಯಕ್ರಮ ನಡೆಯಲಿವೆ. ಜೊತೆಗೆ ಯುಸ್ ಮೋದಿ ಸ್ವಾಗತಿಸಲು ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂಬ ಅಂಶಗಳ ಬಗ್ಗೆ ವಿರೋಧಿ ಪಾಕಿಸ್ತಾನ ಸಾಕಷ್ಟು ಚಿಂತೆ ಮಾಡುತ್ತಿದೆ. ಎರಡು ದೇಶಗಳ ಚಲನವನಗಳ ಮೇಲೆ ನಿಗಾ ಇಡುತ್ತಿದೆ ಎಂದು ವರದಿ ಯಾಗಿದೆ.
ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶ್ವಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗುತ್ತಿದೆ. ಇದು ಪಾಪಿ ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ. ಈ ಕಾರಣಕ್ಕಾಗಿ ಭಾರತದ ಪ್ರಧಾನಿಯನ್ನು ವಿರೋಧಿಸಲು ಟೂಲ್‌ಕಿಟ್ ಅನ್ನು ಸಹ ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
Prime Minister Narendra Modi is visiting the US from June 21-24 at the invitation of US President Joe Biden and First Lady Jill Biden. They will host Modi at a state dinner on June 22. The visit also includes an address to the Joint Session of the Congress on June 22.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm