ಬ್ರೇಕಿಂಗ್ ನ್ಯೂಸ್
28-06-23 11:08 pm HK News Desk ದೇಶ - ವಿದೇಶ
ತೆಲಂಗಾಣ, ಜೂನ್ 29: ಆನ್ಲೈನ್ ಗೇಮಿಂಗ್ನಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಮಹಿಳೆಯೊಬ್ಬರು ತನ್ನಿಬ್ಬರು ಚಿಕ್ಕ ಮಕ್ಕಳಸಮೇತ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ.
ಆನ್ಲೈನ್ ಗೇಮಿಂಗ್ಗಾಗಿ ಮಹಿಳೆ ಸುಮಾರು 8 ಲಕ್ಷ ರೂಪಾಯಿ ಹಣವನ್ನು ಸಂಬಂಧಿಕರಿಂದ ಸಾಲದ ರೂಪದಲ್ಲಿ ತೆಗೆದುಕೊಂಡಿದ್ದರು. ಇದನ್ನು ಮರಳಿಸುವಂತೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ನಗರದ ನಿವಾಸಿ, 28 ವರ್ಷದ ರಾಜೇಶ್ವರಿ ಎಂಬಾಕೆ ಮೃತಪಟ್ಟಿದ್ದು, ತನ್ನ 5 ಮತ್ತು 3 ವರ್ಷದ ಗಂಡು ಮಕ್ಕಳೊಂದಿಗೆ ತನ್ನ ಮನೆಯ ಆವರಣದಲ್ಲಿದ್ದ ನೀರಿನ ಟ್ಯಾಂಕ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಜೇಶ್ವರಿ ಪತಿ ಲಾರಿ ಚಾಲಕನಾಗಿದ್ದಾನೆ. ಮತ್ತೊಂದೆಡೆ, ಈಕೆ ಮೊಬೈಲ್ನಲ್ಲಿ ಗೇಮ್ಗಳಿಗೆ ಅಂಟಿಕೊಂಡಿದ್ದಳು. ಇದಕ್ಕಾಗಿ ಸಂಬಂಧಿಕರ ಬಳಿ ಅಂದಾಜು 8 ಲಕ್ಷ ರೂಪಾಯಿ ಸಾಲ ಮಾಡಿದ್ದಳು. ಸಾಲದಾತರಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದಳು. ಮಂಗಳವಾರ ಸಂಜೆ ಕೂಡ ಹಣ ನೀಡಿದ್ದ ಸಂಬಂಧಿಕರೊಬ್ಬರು ಆಕೆಯ ಮನೆಗೆ ಬಂದು ಸಾಲವನ್ನು ಮರುಪಾವತಿಸುವಂತೆ ಕೇಳಿದ್ದಾರೆ. ಇದೇ ವಿಷಯವಾಗಿ ರಾಜೇಶ್ವರಿ ದಂಪತಿ ಸಾಲ ನೀಡಿದವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಆಗ ಜಮೀನು ಮಾರಾಟ ಮಾಡಿ ಹಣ ಪಾವತಿಸುವುದಾಗಿ ದಂಪತಿ ತಿಳಿಸಿದ್ದಾರೆ. ಆದರೆ, ಸುಮಾರು ಹೊತ್ತು ಗಲಾಟೆ ಮುಂದುವರೆದಿದೆ. ಸಂಜೆ ಏಳು ಗಂಟೆ ಸುಮಾರಿಗೆ ಪತಿ ಮನೆಗೆ ಹಿಂತಿರುಗಿದ್ದಾನೆ. ಆಗ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಕಾಣದೆ ಗಾಬರಿಗೊಂಡಿದ್ದಾನೆ. ಮನೆ ಹಾಗೂ ಸುತ್ತ-ಮುತ್ತ ಅವರಿಗಾಗಿ ಹುಡುಕಾಟ ನಡೆಸಿದ್ದಾನೆ. ಆದರೆ, ಎಲ್ಲೂ ಕಾಣಿಸಿಲ್ಲ. ಕೊನೆಗೆ ಅನುಮಾನಗೊಂಡು ನೀರಿನ ಟ್ಯಾಂಕ್ ನೋಡಿದಾಗ ಇಬ್ಬರು ಮಕ್ಕಳು ಹಾಗೂ ರಾಜೇಶ್ವರಿ ಬಿದ್ದಿರುವುದು ಪತ್ತೆಯಾಗಿದೆ.
ತಕ್ಷಣವೇ ಮೂವರನ್ನು ಟ್ಯಾಂಕ್ನಿಂದ ಹೊರತೆಗೆದು ಚೌಟುಪ್ಪಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲೇ ಮೂವರು ಸಾವನ್ನಪ್ಪಿರುವುದು ವೈದ್ಯರು ಖಚಿತಪಡಿಸಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
A woman in Andhra Pradesh’s Nellore died by allegedly consuming pesticides after falling prey to scammers and losing Rs 8 lakh in online games. According to the police, the victim, Kavitha, had added Rs 8 lakh to her online gaming wallet from her mobile phone for some easy money.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm