ಬ್ರೇಕಿಂಗ್ ನ್ಯೂಸ್
30-06-23 11:26 am HK News Desk ದೇಶ - ವಿದೇಶ
ನವದೆಹಲಿ, ಜೂನ್ 29: ದೆಹಲಿಯ ಆಸ್ಪತ್ರೆ ಒಂದಕ್ಕೆ ಗ್ರಾಹಕರ ನ್ಯಾಯಾಲಯ ಒಂದೂವರೆ ಕೋಟಿ ದಂಡ ಹಾಕಿದೆ. 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಕೋರ್ಟ್ ಜಟಾಪಟಿ ಬಳಿಕ ನ್ಯಾಯಾಧೀಶರು ಆಸ್ಪತ್ರೆಗೆ ಭಾರೀ ದಂಡ ವಿಧಿಸಿದ್ದಾರೆ.
ಐವಿಎಫ್ ಪದ್ಧತಿಯಲ್ಲಿ ಕೃತಕ ಗರ್ಭಧಾರಣೆಯಿಂದ ಮಗು ಪಡೆದಿದ್ದ ದಂಪತಿಗೆ ವಂಚನೆ ಆಗಿತ್ತು. ವೈದ್ಯರ ನಿರ್ಲಕ್ಷ್ಯದಿಂದ ಪತ್ನಿಗೆ ಗಂಡನ ವೀರ್ಯ ಬದಲು ಬೇರೆಯವರ ವೀರ್ಯ ಕೊಟ್ಟು ಎಡವಟ್ಟು ಆಗಿದ್ದನ್ನು ದಂಪತಿ ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಪಶ್ಚಿಮ ದೆಹಲಿಯ ಭಾಟಿಯಾ ಗ್ಲೋಬಲ್ ಹಾಸ್ಪಿಟಲ್ ಮತ್ತು ಎಂಡೋಸರ್ಜರಿ ಇನ್ಸ್ ಟಿಟ್ಯೂಟ್ ಸಂಸ್ಥೆಯಿಂದ ದಂಪತಿಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶ ಮಾಡಿದೆ.
ಇದಲ್ಲದೆ, 20 ಲಕ್ಷ ರೂ. ಮೊತ್ತವನ್ನು ಗ್ರಾಹಕ ನ್ಯಾಯಾಲಯದ ಕನ್ಸ್ಯೂಮರ್ ಅಸಿಸ್ಟೆಂಟ್ ಫಂಡ್ ಹೆಸರಲ್ಲಿ ಡಿಪಾಸಿಟ್ ಮಾಡಲು ನಿರ್ದೇಶನ ನೀಡಿದೆ. ಆಸ್ಪತ್ರೆಯ ವೈದ್ಯರು ಸೇರಿ ಇನ್ನಿತರ ಮೂವರು ಆರೋಪ ಎದುರಿಸಿದ್ದು, ಅವರು ತಲಾ ಹತ್ತು ಲಕ್ಷ ರೂ.ನಂತೆ ಪ್ರಕರಣದ ದೂರುದಾರ ದಂಪತಿಗೆ ನೀಡುವಂತೆ ಕೋರ್ಟ್ ಹೇಳಿದೆ. ಈ ಮೊತ್ತವನ್ನು ಆರು ತಿಂಗಳ ಒಳಗೆ ಪಾವತಿ ಮಾಡಬೇಕು. ಇಲ್ಲದಿದ್ದಲ್ಲಿ ಒಟ್ಟು ಮೊತ್ತಕ್ಕೆ ವರ್ಷಕ್ಕೆ ಎಂಟು ಪರ್ಸೆಂಟ್ ಬಡ್ಡಿ ನೀಡಬೇಕಾಗುತ್ತದೆ ಎಂದೂ ಕೋರ್ಟ್ ಎಚ್ಚರಿಸಿದೆ.
2008-09ರಲ್ಲಿ ದಂಪತಿ ಐವಿಎಫ್ ಮೂಲಕ ಮಗು ಪಡೆಯಲು ಮುಂದಾಗಿತ್ತು. ಅದರಂತೆ, ದಂಪತಿಗೆ ಅವಳಿ ಮಕ್ಕಳಾಗಿತ್ತು. ಒಂದು ಮಗುವಿನ ರಕ್ತದ ಗುಂಪು ಎಬಿ ಪಾಸಿಟಿವ್ ಇದ್ದುದರಿಂದ ಶಂಕೆಯಾಗಿತ್ತು. ಹೆತ್ತವರಿಗೆ ಬಿ ಪಾಸಿಟಿವ್ ಮತ್ತು ಓ ನೆಗೆಟಿವ್ ರಕ್ತದ ಗುಂಪು ಇತ್ತು. ಡಿಎನ್ಎ ಟೆಸ್ಟ್ ಮಾಡಿದಾಗ, ಮಗುವಿನ ಡಿಎನ್ಎ ತಂದೆಗೆ ತಾಳೆಯಾಗಲಿಲ್ಲ. ಹೀಗಾಗಿ ಆಸ್ಪತ್ರೆ ವೈದ್ಯರು ತಪ್ಪು ಮಾಡಿದ್ದಾರೆ, ವೀರ್ಯವನ್ನೇ ಬದಲಿಸಿದ್ದಾರೆಂದು ದಂಪತಿ ಆಸ್ಪತ್ರೆ ವಿರುದ್ಧವೇ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ತಮಗೆ ಮಾನಸಿಕ ಕಿರುಕುಳ, ಮಕ್ಕಳಿಗೂ ಜೀವನ ಪರ್ಯಂತ ಕಿರುಕುಳ ಆಗುವಂತೆ ಮಾಡಿದ ಆಸ್ಪತ್ರೆ ವೈದ್ಯರು ನಮ್ಮನ್ನು ಮೆಂಟಲೀ ಡಿಸ್ಟರ್ಬ್ ಮಾಡಿದ್ದಾರೆ. ಎರಡು ಕೋಟಿ ಪರಿಹಾರ ನೀಡಬೇಕೆಂದು ಕೋರ್ಟಿನಲ್ಲಿ ಕೇಳಿಕೊಂಡಿದ್ದರು. ಕೋರ್ಟ್ ತನ್ನ ತೀರ್ಪಿನಲ್ಲಿ ಒಂದೂವರೆ ಕೋಟಿ ಹಣವನ್ನು ಇಬ್ಬರು ಮಕ್ಕಳ ಹೆಸರಲ್ಲಿ ಸಮಾನವಾಗಿ ಹಂಚಿಕೆ ಮಾಡಿ, ಡಿಪಾಸಿಟ್ ಮಾಡುವಂತೆ ನಿರ್ದೇಶನ ನೀಡಿದೆ.
A hospital in West Delhi has been fined Rs 1.5 crore in a 15-year-old case when an in-vitro fertilization (IVF) process was performed on a woman using sperm that did not belong to her husband. The husband approached the National Consumer Disputes Redressal Commission (NCDRC) after finding out about the negligence. The court, hearing the parents’ plea, directed Bhatia Global Hospital and Endosurgery Institute, its chairman and director to collectively pay Rs 1 crore to the family.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm