ಮಥುರಾ ; ದೇವಸ್ಥಾನದ ಒಳಬಂದು ಇಬ್ಬರಿಂದ ನಮಾಜ್, ಹೊಸ ವಿವಾದ

02-11-20 07:46 pm       Headline Karnataka News Network   ದೇಶ - ವಿದೇಶ

ಉತ್ತರ ಪ್ರದೇಶದ ಮಥುರಾದ ದೇವಾಲಯವೊಂದರಲ್ಲಿ ಇಬ್ಬರು ನಮಾಜ್ ಮಾಡಿದ್ದಾರೆ ಎಂದು ಆರೋಪಿಸಿ ನಾಲ್ವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಮಥುರಾ, ನವೆಂಬರ್ 2 : ಒಂದೆಡೆ ಅಯೋಧ್ಯೆ ರಾಮ ಮಂದಿರದ ಮುಕ್ತಿಯ ಬಳಿಕ ಮುಂದಿನ ಚಳವಳಿ ಮಥುರಾದೆಡೆಗೆ ಎನ್ನುವ ಅಭಿಯಾನ ಕೇಳಿಬರುತ್ತಿದೆ. ಅಲ್ಲಿ ಮಸೀದಿ ಆಗಿ ಪರಿವರ್ತನೆಗೊಂಡಿರುವ ಕೃಷ್ಣನ ಮಂದಿರಗಳನ್ನು ಪುನರ್ ವಶಕ್ಕೆ ಪಡೆದು ದೇವಸ್ಥಾನ ಮಾಡಬೇಕೆಂಬ ಹೋರಾಟದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇದೇ ವೇಳೆ, ಮಥುರಾದಲ್ಲಿರುವ ನಂದಬಾಬಾ ದೇವಸ್ಥಾನಕ್ಕೆ ಬಂದಿದ್ದ ಇಬ್ಬರು ಮುಸ್ಲಿಮರು ನಮಾಜ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿವಾದಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಮಥುರಾ ಪಟ್ಟಣದ ನಂದಗಾಂವ್ ಪ್ರದೇಶದಲ್ಲಿರುವ ನಂದಬಾಬಾ ಮಂದಿರದಲ್ಲಿ ನಮಾಜ್ ಮಾಡಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಫೈಜಲ್ ಖಾನ್ ಮತ್ತು ಮೊಹಮ್ಮದ್ ಚಾಂದ್ ಎಂದು ಗುರುತಿಸಲಾಗಿದೆ. ಅಲ್ಲಿನವರ ಮಾಹಿತಿ ಪ್ರಕಾರ, ಇವರಿಬ್ಬರು ಗುರುತು ಮರೆ ಮಾಚಿಕೊಂಡು ದೇವಸ್ಥಾನದ ಒಳ ಪ್ರವೇಶಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ವಿಚಾರ ಗೊತ್ತಾಗುತ್ತಲೇ ಅಲ್ಲಿನ ಅರ್ಚಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಆರೋಪಿಗಳ ವಿರುದ್ಧ ಮಾಹಿತಿ ಕಲೆಹಾಕಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಆರೋಪಿಗಳಿಗೆ ದೇವಸ್ಥಾನಕ್ಕೆ ಬರಲು ಸಹಕರಿಸಿದ ಮುಕೇಶ್ ಗೋಸ್ವಾಮಿ ಮತ್ತು ಶಿವಹರಿ ಗೋಸ್ವಾಮಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ, ದೇವಸ್ಥಾನ ಸೇರಿದಂತೆ ಸುತ್ತಮುತ್ತಲಲ್ಲಿ ಪೊಲೀಸರು ಭದ್ರತೆ ಏರ್ಪಡಿಸಿದ್ದಾರೆ.

Two individuals have been booked by the Uttar Pradesh police after they allegedly offered namaz at a Hindu temple in Mathura on Thursday.Two individuals have been booked by the Uttar Pradesh police after they allegedly offered namaz at a Hindu temple in Mathura on Thursday.