ಬ್ರೇಕಿಂಗ್ ನ್ಯೂಸ್
09-07-23 05:38 pm H K News Desk ದೇಶ - ವಿದೇಶ
ನೋಯ್ಡಾ, ಜುಲೈ 9: ಪ್ರೀತಿಸಿದ ಹುಡುಗನಿಗಾಗಿ ಪಾಕಿಸ್ತಾನ ಬಿಟ್ಟು ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದು ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಮಹಿಳೆ ಸೀಮಾಗೆ ಜಾಮೀನು ದೊರಕಿದ್ದು, ಪ್ರಿಯಕರ ಸಚಿನ್ ಮೀನಾ ಅವರೊಂದಿಗೆ ಹೊಸ ಜೀವನ ಆರಂಭಿಸಲು ಉತ್ಸುಕರಾಗಿದ್ದಾರೆ.
ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಸೀಮಾ, ನನ್ನ ಪತಿ ಹಿಂದು, ನಾನೂ ಹಿಂದು, ನಾನೀಗ ಭಾರತೀಯಳೆಂಬ ಭಾವನೆ ಮೂಡುತ್ತಿದೆ ಎಂದಿದ್ದಾರೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಪಬ್ಜಿ ಆನ್ಲೈನ್ ಗೇಮ್ ಆಡುತ್ತಿದ್ದಾಗ ಇವರ ಪರಿಚಯವಾಗಿತ್ತು. ಬಳಿಕ 30 ವರ್ಷದ ಸೀಮಾ ಮತ್ತು 25 ವರ್ಷದ ಸಚಿನ್ ನಡುವೆ ಪ್ರೀತಿ ಚಿಗುರಿತ್ತು. 2022ರ ಮಾರ್ಚ್ ತಿಂಗಳಲ್ಲಿ ಇವರು ಮೊದಲ ಭೇಟಿಯಲ್ಲೇ ಮದುವೆಯೂ ಆಗಿದ್ದರು. 'ಸಚಿನ್ ಅವರನ್ನು ಮೊದಲು ಭೇಟಿಯಾಗುವ ಪ್ರಯಾಣ ಕಷ್ಟಕರವಾಗಿತ್ತು, ಆಗ ನಾನು ಬಹಳ ಹೆದರಿದ್ದೆ. ಮೊದಲು ಕರಾಚಿಯಿಂದ ದುಬೈಗೆ ತೆರಳಿ 11 ಗಂಟೆಗಳ ಬಳಿಕ ನೇಪಾಳಕ್ಕೆ ಬಂದು, ಅಲ್ಲಿಂದ ಪೊಖರಾಗೆ ತಲುಪಿ ಸಚಿನ್ ಅವರನ್ನು ಸೇರಿಕೊಂಡಿದ್ದೆ ಎನ್ನುತ್ತಾರೆ ಸೀಮಾ.
ರಹಸ್ಯ ಮದುವೆ ಬಳಿಕ ಸೀಮಾ ಪಾಕಿಸ್ತಾನಕ್ಕೆ ತೆರಳಿದ್ದು, ಸಚಿನ್ ನೇಪಾಳ ಗಡಿಯಿಂದ ನೋಯ್ಡಾಕ್ಕೆ ವಾಪಸ್ಸಾಗಿದ್ದರು. ದುಬೈನಲ್ಲಿದ್ದ ಪತಿಯೊಂದಿಗೆ ವೈಮನಸ್ಸು ಹೊಂದಿದ್ದ ಸೀಮಾ, ₹12 ಲಕ್ಷಕ್ಕೆ ತನ್ನ ನಿವೇಶನವನ್ನು ಮಾರಿ ತನಗೆ ಮತ್ತು ನಾಲ್ಕು ಮಕ್ಕಳಿಗೆ ನೇಪಾಳಕ್ಕೆ ವಿಮಾನದ ಟಿಕೆಟ್ ಮತ್ತು ವೀಸಾವನ್ನು ಪಡೆದಿದ್ದರು.
ಆದರೆ, ಕಠ್ಮಂಡುವಿನಿಂದ ದೆಹಲಿಗೆ ಬಂದಿದ್ದ ಸೀಮಾ ಹಾಗೂ ಮಕ್ಕಳಿಗೆ ನೋಯ್ಡಾದಲ್ಲಿ ಉಳಿದುಕೊಳ್ಳಲು ಸಚಿನ್ ವ್ಯವಸ್ಥೆ ಮಾಡಿದ್ದ. ಆದರೆ ಜುಲೈ 4 ರಂದು ಮದುವೆ ರಿಜಿಸ್ಟರ್ ಮಾಡಲು ಹೋಗಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದು ಹೊರಜಗತ್ತಿಗೆ ತಿಳಿಯುತ್ತಲೇ ಸೀಮಾ ಅವರನ್ನು ಪೊಲೀಸರು ಬಂಧಿಸಿದ್ದರು. ವಲಸಿಗರಿಗೆ ಅಕ್ರಮವಾಗಿ ವಸತಿ ನೀಡಿದ್ದಕ್ಕೆ ಸಚಿನ್ ಅವರ ಮೇಲೂ ಪ್ರಕರಣ ದಾಖಲಿಸಿದ್ದರು.
ಇದೀಗ ಸೀಮಾ ಅವರಿಗೆ ಕೋರ್ಟ್ ಜಾಮೀನು ನೀಡಿದೆ. ಈ ಬಗ್ಗೆ ಮಾತನಾಡಿದ ಸೀಮಾ, 'ತಿಂಗಳ ಕಾಲ ಜೈಲಿನಲ್ಲಿಯೇ ಇರುತ್ತೇನೆಂದು ಭಾವಿಸಿದ್ದೆ, ಜಾಮೀನು ಸಿಕ್ಕಿದ್ದನ್ನು ಕೇಳಿ ಸಂತೋಷದಿಂದ ಕಿರುಚಿದೆ' ಎಂದು ಖುಷಿ ಹಂಚಿಕೊಂಡಿದ್ದಾರೆ.
ಅತ್ತ ಸೀಮಾ ಅವರ ಪತಿ ಗುಲ್ಹಾಮ್ ಹೈದರ್, ಹೆಂಡತಿಯನ್ನು ಸೇರಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ. ಆದರೆ ಸೀಮಾ, ವಾಪಸ್ ಗುಲ್ಹಾಮ್ ಹೈದರ್ ಬಳಿ ಹೋಗುವುದಿಲ್ಲ, ಮತ್ತೆ ಪಾಕಿಸ್ತಾನಕ್ಕೆ ಹೋದರೆ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ
India's Sachin Meena and Pakistan's Seema Haider are looking to start a new chapter as they walk out of prison in New Delhi on a rain-soaked day after getting bail. Seema was arrested on July 4 for illegally entering India without a visa via Nepal with her four children, all aged below seven years, while Sachin was put behind bars for sheltering the illegal immigrants.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm