ಬ್ರೇಕಿಂಗ್ ನ್ಯೂಸ್
15-07-23 01:48 pm HK News Desk ದೇಶ - ವಿದೇಶ
ಪುಣೆ, ಜುಲೈ 15: ಮರಾಠಿ ಚಿತ್ರರಂಗದ ಹಿರಿಯ ನಟ ರವೀಂದ್ರ ಮಹಾಜನಿ ಕೊನೆಯುಸಿರೆಳೆದಿದ್ದಾರೆ. ಪುಣೆ ಜಿಲ್ಲೆಯ ಮಾವಲ್ ತಾಲೂಕಿನ ಅಂಬಿ ಗ್ರಾಮದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಬಾಡಿಗೆ ಮನೆಯ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ, ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ಸಂಜೆ ಪುಣೆ ನಗರದ ಸಮೀಪದ ತಾಲೆಗಾಂವ್ ದಭಾಡೆ ಪ್ರದೇಶದಲ್ಲಿರುವ ಫ್ಲ್ಯಾಟ್ ವೊಂದರಲ್ಲಿ ರವೀಂದ್ರ ಮಹಾಜನಿ ಅವರ ಮೃತದೇಹ ಪತ್ತೆಯಾಗಿದೆ. ಮೂರು ದಿನಗಳ ಹಿಂದೆಯೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ರವೀಂದ್ರ ಮಹಾಜನಿ ಅವರು ಕಳೆದ ಎಂಟು ತಿಂಗಳಿನಿಂದ ಒಂಟಿಯಾಗಿ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದರು. ನಮಗೆ ನೆರೆಹೊರೆಯವರಿಂದ ಕರೆಬಂತು. ಅವರ ನಿವಾಸದಿಂದ ದುರ್ವಾಸನೆ ಬರುತ್ತಿರುವುದರಿಂದ ಅಲ್ಲಿನ ಸ್ಥಳೀಯರು ನಮಗೆ ಮಾಹಿತಿ ನೀಡಿದ್ದಾರೆ. ನಾವು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ತಾಳೆಗಾಂವ್ ದಭಾಡೆ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮರಾಠಿ ಸಿನಿಮಾರಂಗದಲ್ಲಿ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರವೀಂದ್ರ ಮಹಾಜನಿ ಅವರು, 1970 ರ ದಶಕದ ಅಂತ್ಯದಿಂದ 1980 ರ ದಶಕದ ಮಧ್ಯಭಾಗದವರೆಗೆ ಹಲವಾರು ಮರಾಠಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಟನಾಗಿ ‘ಮುಂಬೈಚಾ ಫೌಜ್ದರ್’, ‘ಜುಂಜ್’ ಮತ್ತು ‘ಕಲತ್ ನಕಲತ್’ ಸಿನಿಮಾದಲ್ಲಿ ನಟಿಸಿದ್ದರು.
ಬೆಳಗಾವಿಯಲ್ಲಿ ಜನನ:
1949ರಲ್ಲಿ ರವೀಂದ್ರ ಮಹಾಜನಿ ಅವರು ಬೆಳಗಾವಿಯಲ್ಲಿ ಜನಿಸಿದ್ದರು. ಅವರ ತಂದೆ ಹೆಚ್.ಆರ್ ಮಹಾಜನಿ ಪ್ರಸಿದ್ಧ ಪತ್ರಕರ್ತರಾಗಿದ್ದರು. ಅವರು ಬೆಳಗಾವಿಯಿಂದ ಮುಂಬೈಗೆ ವಲಸೆ ಬಂದ ಕಾರಣ, ರವೀಂದ್ರ ಮಹಾಜನಿ ತಮ್ಮ ಬಾಲ್ಯವನ್ನು ಮುಂಬೈನಲ್ಲಿ ಕಳೆದರು. ರವೀಂದ್ರ ಅವರು ನಟನೆಯ ಬಗ್ಗೆ ಒಲವು ಹೊಂದಿದ್ದರಿಂದ ಶಾಲಾ ಕಾರ್ಯಕ್ರಮಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಮೂರು ವರ್ಷಗಳ ಕಾಲ ಮುಂಬೈನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದ್ದರು. ರಾತ್ರಿ ಟ್ಯಾಕ್ಸಿ ಓಡಿಸುತ್ತ, ಸಿನಿರಂಗದಲ್ಲಿ ಅವಕಾಶ ಹುಡುಕುತ್ತಿದ್ದರು. ಕೆಲಸಕ್ಕಾಗಿ ಅವರು ಪ್ರತಿದಿನ ವಿವಿಧ ನಿರ್ದೇಶಕರನ್ನು ಭೇಟಿಯಾಗುತ್ತಿದ್ದರು. ಅಂತಿಮವಾಗಿ, ಮಧುಸೂದನ್ ಕಾಲೇಲ್ಕರ್ ಅವರ ಜನತಾ ಅಜಾನತಾ ಮರಾಠಿ ನಾಟಕದಲ್ಲಿ ಕೆಲಸ ಪಡೆದರು. ನಂತರ ಅವರು ಮರಾಠಿ ಚಲನಚಿತ್ರ ಜುಂಜ್ ನಲ್ಲಿ ಕಾಣಿಸಿಕೊಂಡರು. ಈ ಜುಂಜ್ ಚಿತ್ರವು ರವೀಂದ್ರ ಅವರಿಗೆ ಮರಾಠಿ ಚಿತ್ರರಂಗದಲ್ಲಿ ಜನಪ್ರಿಯತೆ ತಂದುಕೊಟ್ಟಿತು. ಆ ನಂತರ ಅವರು ನಟರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದರು.
Ravindra Mahajani (77), a veteran Marathi actor, was found dead on Friday in his rented flat in Ambi village, Maval taluka, near Talegaon Dabhade. For a long period, the actor lived alone. Neighbours who detected a foul odour coming from the flat contacted the Talegaon MIDC police station at about 4.30 p.m. on Friday. A police team arrived soon after and discovered the flat locked from the inside.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 07:31 pm
HK News Desk
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm