ಬ್ರೇಕಿಂಗ್ ನ್ಯೂಸ್
23-07-23 02:34 pm HK News Desk ದೇಶ - ವಿದೇಶ
ಭೋಪಾಲ್, ಜುಲೈ 23: ಮಧ್ಯಪ್ರದೇಶದಲ್ಲಿ ದಲಿತ ವ್ಯಕ್ತಿಯ ಮುಖ ಮತ್ತು ದೇಹಕ್ಕೆ ಮನುಷ್ಯನ ಮಲವನ್ನು ಬಳಿದ ಅಸಹ್ಯಕರ ಹಾಗೂ ಅಮಾನುಷ ಘಟನೆ ವರದಿಯಾಗಿದೆ. ಈ ಘಟನೆ ಸಂಬಂಧ ಛತಾರ್ಪುರದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವ್ಯಕ್ತಿಯು ಗ್ರೀಸ್ ಮೆತ್ತಿದ ಕೈಯಿಂದ ಆರೋಪಿಯನ್ನು ಸ್ಪರ್ಶಿಸಿದ್ದೇ ಈ ಹೇಯ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಇಂತಹ ಅಮಾನವೀಯ ಘಟನೆಗಳು ಸಾಲು ಸಾಲಾಗಿ ವರದಿಯಾಗುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿತ್ತು.
ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಆರೋಪಿ ರಾಮಕೃಪಾಲ್ ಪಟೇಲ್ನನ್ನು ಬಂಧಿಸಲಾಗಿದೆ. ಪಟೇಲ್ ವಿರುದ್ಧ ಐಪಿಸಿ ಸಂಬಂಧಿತ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಛತಾರ್ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿ ಇರುವ ಬಿಕೌರಾ ಗ್ರಾಮದಲ್ಲಿ ಚರಂಡಿಯೊಂದರ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ದಶರಥ್ ಅಹಿರ್ವಾರ್, ಶನಿವಾರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಆರೋಪಿಯು ಸಮೀಪದ ಹ್ಯಾಂಡ್ ಪಂಪ್ ಬಳಿ ಸ್ನಾನ ಮಾಡುತ್ತಿದ್ದ. ಚರಂಡಿ ನಿರ್ಮಾಣ ಕಾರ್ಯಕ್ಕೆ ಬಳಸುತ್ತಿದ್ದ ಗ್ರೀಸ್ ಮೆತ್ತಿದ್ದ ಕೈಯನ್ನು ಸಂತ್ರಸ್ತ ಆಕಸ್ಮಿಕವಾಗಿ ಆರೋಪಿ ಪಟೇಲ್ಗೆ ಮುಟ್ಟಿಸಿದ್ದಾಗಿ ಅಹಿರ್ವಾರ್ ತಿಳಿಸಿದ್ದಾರೆ.
ಇದರ ಬಳಿಕ ರಾಮಕೃಪಾಲ್ ಪಟೇಲ್, ತಾನು ಸ್ನಾನ ಮಾಡಲು ಬಳಸುತ್ತಿದ್ದ ಮಗ್ನಲ್ಲಿ ಮನುಷ್ಯನ ಮಲವನ್ನು ತಂದು ನನ್ನ ದೇಹ, ತಲೆ ಹಾಗೂ ಮುಖಕ್ಕೆ ಬಳಿದಿದ್ದಾನೆ. ಇಷ್ಟಲ್ಲದೆ ನನ್ನ ಜಾತಿ ಪ್ರಸ್ತಾಪಿಸಿ ಅವಮಾನಕರವಾಗಿ ನಿಂದಿಸಿದ್ದಾನೆ ಎಂದು ಸುದ್ದಿಗಾರರ ಮುಂದೆ ಸಂತ್ರಸ್ತ ಅಲವತ್ತುಕೊಂಡಿದ್ದಾರೆ.
ನಾನು ಈ ವಿಚಾರವನ್ನು ಪಂಚಾಯತಿ ಮುಂದೆ ಪ್ರಸ್ತಾಪಿಸಿದ್ದೆ. ಸಭೆಯನ್ನೂ ಕರೆದಿದ್ದೆ. ಆದರೆ ಪಟೇಲ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನನಗೇ 600 ರೂ ದಂಡ ವಿಧಿಸಿದ್ದರು ಎಂದು ಆರೋಪಿಸಿದ್ದಾರೆ.
ಕೆಲಸ ನಡೆಯುತ್ತಿದ್ದ ಸ್ಥಳದ ಸಮೀಪ ಸ್ನಾನ ಮಾಡುತ್ತಿದ್ದ ಪಟೇಲ್ ಜತೆ ದಶರಥ್ ಅಹಿರ್ವಾರ್ ಮತ್ತು ಇತರೆ ಕೆಲಸಗಾರರು ತಮಾಷೆ ಮಾಡುತ್ತಿದ್ದರು. ಮೋಜಿಗಾಗಿ ಮಾಡುತ್ತಿದ್ದ ತಮಾಷೆಯು ವಿಕೋಪಕ್ಕೆ ತೆರಳಿದೆ.
A Dalit man has alleged that his face and body were smeared with human excreta by a man from another caste after the former accidentally touched him with grease in Chhatarpur district of Madhya Pradesh. The accused has been detained based on the complaint, a police official said on July 22.
22-07-25 11:10 pm
Bangalore Correspondent
GST Notices: ಜಿಎಸ್ಟಿ ತೆರಿಗೆ ನೋಟಿಸ್ ; ವ್ಯಾಪಾರಸ...
22-07-25 10:41 pm
GST Notice, Union Minister Pralhad Joshi: ರಾಜ...
22-07-25 10:30 pm
Mandya Bakery, Cake, Sealed: ಕಲರ್ ಫುಲ್ ಕೇಕ್ ನ...
22-07-25 03:02 pm
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
22-07-25 11:13 pm
Mangalore Correspondent
ಧರ್ಮಸ್ಥಳ ಕೇಸ್ ; ಸಹಾಯವಾಣಿ ಆರಂಭಿಸುವಂತೆ ರಾಜ್ಯ ಸರ...
22-07-25 10:57 pm
Mangalore Yathicorp AI: ಯತಿಕಾರ್ಪ್ ಸಂಸ್ಥೆಯಿಂದ...
22-07-25 09:42 pm
Mangalore Hotel Kodakkene Owner Suicide: ಹೊಟೇ...
22-07-25 01:27 pm
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
22-07-25 09:45 pm
Mangalore Correspondent
Kalaburagi Jewellery Robbery, Arrest: ಕಲಬುರಗಿ...
22-07-25 12:38 pm
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm