ಬ್ರೇಕಿಂಗ್ ನ್ಯೂಸ್
25-07-23 03:00 pm HK News Desk ದೇಶ - ವಿದೇಶ
ಭೋಪಾಲ್, ಜುಲೈ 25: ಮಧ್ಯಪ್ರದೇಶದಲ್ಲಿ ಕಂದಾಯ ಅಧಿಕಾರಿಯೊಬ್ಬರು ಲಂಚದ ಹಣವನ್ನು ಅಕ್ಷರಶಃ ತಿಂದು ತೇಗಿದ್ದಾರೆ.
ಮಧ್ಯಪ್ರದೇಶದ ಕಟ್ನಿಯಲ್ಲಿ ಜಬಲ್ಪುರ ಲೋಕಾಯುಕ್ತದ ವಿಶೇಷ ಪೊಲೀಸ್ ಘಟಕವು (ಎಸ್‌ಪಿಇ) ಲಂಚ ತೆಗೆದುಕೊಳ್ಳುತ್ತಿದ್ದ ಕಂದಾಯ ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಕೂಡಲೇ ಆತ ಕರೆನ್ಸಿ ನೋಟುಗಳನ್ನು ಬಾಯಿಗೆ ತುರುಕಿಕೊಂಡು ಜಗಿದು ಗಬಗಬನೆ ನುಂಗಿದ್ದಾನೆ.
ಪಟ್ವಾರಿಯಾಗಿರುವ ಗಜೇಂದ್ರ ಸಿಂಗ್ ಎಂಬ ಅಧಿಕಾರಿ, ಜಮೀನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರ ಚಂದನ್ ಸಿಂಗ್ ಲೋಧಿಯಿಂದ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಲೋಧಿ ಅವರು ಜಬಲ್ಪುರ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು.
ತನಿಖೆ ನಡೆಸಿದ ಬಳಿಕ ಲೋಕಾಯುಕ್ತ ಪೊಲೀಸರಿಗೆ ಈ ದೂರಿನಲ್ಲಿ ಸತ್ಯಾಂಶ ಇರುವುದು ಖಚಿತವಾಗಿತ್ತು. ಜಬಲ್ಪುರ ಲೋಕಾಯುಕ್ತರ ತಂಡವೊಂದು ಬಿಲ್ಹಾರಿಗೆ ತೆರಳಿ, ಗಜೇಂದ್ರ ಸಿಂಗ್‌ರನ್ನು ಸಾಕ್ಷಿ ಸಮೇತ ಹಿಡಿಯಲು ಯೋಜನೆ ರೂಪಿಸಿದ್ದರು. ತಮ್ಮ ಖಾಸಗಿ ಕಚೇರಿಯಲ್ಲಿ 5000.ರೂ ಪಡೆದುಕೊಳ್ಳುವಾಗ ಅವರನ್ನು ಹಿಡಿದರು.
ಬಂಧಿಸಿದ ಕೂಡಲೇ ಗಜೇಂದ್ರ ಸಿಂಗ್, ತಾವು ಪಡೆದ ಲಂಚದ ಹಣವನ್ನು ಒಂದೇ ಸಮನೆಗೆ ಬಾಯಿಗೆ ತುರುಕಿಸಿಕೊಂಡು ನುಂಗಿಬಿಟ್ಟರು. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಸಾಕಷ್ಟು ಪ್ರಯತ್ನ ನಡೆಸಿದ ಬಳಿಕ ಕೊನೆಗೂ ಅವರ ಬಾಯಿಯಿಂದ ಕರೆನ್ಸಿ ನೋಟುಗಳ ಮುದ್ದೆಯನ್ನು ಹೊರಗೆ ಕಕ್ಕಿಸುವಲ್ಲಿ ಪೊಲೀಸರು ಮತ್ತು ವೈದ್ಯರು ಸಫಲರಾಗಿದ್ದಾರೆ.
ಗಜೇಂದ್ರ ಸಿಂಗ್ ಅವರು ತಮ್ಮ ಬಳಿ ಲಂಚ ಕೇಳುತ್ತಿದ್ದಾರೆ ಎಂದು ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಹಣ ಪಡೆದುಕೊಂಡ ಬಳಿಕ ಸಿಂಗ್ ಅವರು ಎಸ್‌ಪಿಇ ತಂಡವನ್ನು ಕಂಡಿದ್ದರು. ಕೂಡಲೇ ಹಣವನ್ನು ನುಂಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದರು" ಎಂಬುದಾಗಿ ಎಸ್‌ಪಿಇ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.
ಕಂದಾಯ ಅಧಿಕಾರಿ ಗಜೇಂದ್ರ ಸಿಂಗ್ ವಿರುದ್ಧ ಲಂಚ ತೆಗೆದುಕೊಂಡ ಆರೋಪದಡಿ ಪ್ರಕರಣ ದಾಖಲಾಗಿದೆ. ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#Watch : मध्य प्रदेश के कटनी में एक घूसखोर पटवारी ने लोकायुक्त पुलिस द्वारा रिश्वत लेते हुए रंगे हाथ पकड़े जाने पर कार्रवाई से बचने के लिए रिश्वत की रकम निगली। इस घटना का वीडियो सोशल मीडिया में खूब वायरल हो रहा है।#MadhyaPradesh #viralvideo pic.twitter.com/vl9Sx2CtpN
— Hindustan (@Live_Hindustan) July 25, 2023
A patwari of the revenue department in Madhya Pradesh's Katni on Monday swallowed currency notes he had taken as bribe, after being caught red-handed by a team of Jabalpur Lokayukta's Special Police Establishment (SPE).
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm