ಪಾಕಿಸ್ತಾನದಲ್ಲಿ ಹಳಿ ತಪ್ಪಿದ ಎಕ್ಸ್‌ಪ್ರೆಸ್ ಟ್ರೈನ್ ; ಕನಿಷ್ಟ 15 ಮಂದಿ ಸಾವು, 45 ಜನರಿಗೆ ಗಾಯ

06-08-23 10:05 pm       HK News Desk   ದೇಶ - ವಿದೇಶ

ದಕ್ಷಿಣ ಪಾಕಿಸ್ತಾನದಲ್ಲಿ ರೈಲು ಹಳಿ ತಪ್ಪಿದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ರೈಲ್ವೆ ಇಲಾಖೆ ತಿಳಿಸಿದೆ.

ಪಾಕಿಸ್ತಾನ, ಆಗಸ್ಟ್ 6: ದಕ್ಷಿಣ ಪಾಕಿಸ್ತಾನದಲ್ಲಿ ರೈಲು ಹಳಿ ತಪ್ಪಿದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ರೈಲ್ವೆ ಇಲಾಖೆ ತಿಳಿಸಿದೆ.

ಇದು ಅತಿ ದೊಡ್ಡ ಅಪಘಾತ ಎಂದಿರುವ ಪಾಕಿಸ್ತಾನದ ರೈಲ್ವೆ ಸಚಿವ ಖ್ವಾಜಾ ಸಾದ್ ರಫೀಕ್, ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ ಎಂದು ಮಾಹಿತಿ ನೀಡಿದ್ದಾರೆ. ಕನಿಷ್ಟ 15 ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ಧಾರೆ ಎಂದು ಅವರು ತಿಳಿಸಿದ್ದಾರೆ. ರೈಲು ಅಪಘಾತದ ತೀವ್ರತೆ ಆಧರಿಸಿ ಹೆಚ್ಚಿನ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ರವಾನೆ ಮಾಡೋದಾಗಿ ಹೇಳಿದ್ದಾರೆ.

Pakistan's railway minister says Nawabshah train accident could be  deliberately caused

At least 28 killed after train derails in southern Pakistan | News | Al  Jazeera

A train derailment has killed at least 30 and injured dozens more in  Pakistan | Georgia Public Broadcasting

ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದ ನವಾಬ್‌ಷಾ ನಗರದ ಸಹರಾ ರೈಲು ನಿಲ್ದಾಣದ ಬಳಿ ಈ ರೈಲು ಹಳಿ ತಪ್ಪಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕರಾಚಿಯಿಂದ ಅಬೋಟಾಬಾದ್‌ಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿ ಮೊಹ್ಸಿನ್ ಸಯಾಲ್ ಅವರು ಸುದ್ದಿ

Death toll from train derailment in Pakistan rises to 30 with 60 others  injured, officials say | The Peninsula Qatar

15 killed, nearly 50 injured in train accident in Pakistan | Pakistan News  - The Indian Express

At least 15 people killed, over 40 injured after train derails in southern  Pakistan: Report | DH Latest News, DH NEWS, Latest News, NEWS,  International , Death, train derailed, southern Pakistan, Hazara Express

ಈ ಕುರಿತಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್‌ಪಿಗೆ ಮಾಹಿತಿ ನೀಡಿರುವ ಸಿಂಧ್ ಪ್ರಾಂತ್ಯದ ರೈಲ್ವೆ ಅಧಿಕಾರಿ ಇಜಾಜ್ ಷಾ, ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸ್ಥಳಕ್ಕೆ ಹೆಚ್ಚುವರಿ ರೈಲುಗಳನ್ನು ರವಾನೆ ಮಾಡಿರೋದಾಗಿ ತಿಳಿಸಿದ್ದಾರೆ.

ಸಿಂಧ್ ಪ್ರಾಂತ್ಯದ ಸ್ಥಳೀಯ ಸುದ್ದಿ ವಾಹಿನಿಗಳು ಅಪಘಾತದ ಫೋಟೋ, ವಿಡಿಯೋಗಳನ್ನು ಪ್ರಸಾರ ಮಾಡುತ್ತಿವೆ. ನೂರಾರು ಜನರು ಘಟನಾ ಸ್ಥಳದಲ್ಲಿ ಸೇರಿದ್ಧಾರೆ. ರೈಲಿನ ಬೋಗಿಗಳ ಗಾಜನ್ನು ಒಡೆದು ಗಾಯಾಳುಗಳನ್ನು ಹೊರಗೆ ತೆಗೆಯಲಾಗುತ್ತಿದೆ. ಕೆಲವು ಪ್ರಯಾಣಿಕರು ಹಳಿ ತಪ್ಪಿ ಉರುಳಿ ಬಿದ್ದ ರೈಲಿನ ಬೋಗಿಗಳ ಒಳಗಿನಿಂದ ತಾವಾಗೇ ಹೊರಗೆ ಬರುತ್ತಿದ್ದಾರೆ. ಹಲವು ಕೋಚ್‌ಗಳು ಹಳಿಯಿಂದ ಉರುಳಿ ಬಿದ್ದಿವೆ.

A train derailed in southern Pakistan on Sunday, killing at least 30 people and injuring at least 60 others, officials said. Rescue operations were underway. Ten cars of a Rawalpindi-bound train derailed and some overturned, near the Pakistani town of Nawabshah, trapping many passengers, said senior railway officer Mahmoodur Rehman Lakho.