ಬ್ರೇಕಿಂಗ್ ನ್ಯೂಸ್
06-11-20 01:34 pm Headline Karnataka News Network ದೇಶ - ವಿದೇಶ
ನವದೆಹಲಿ, ನವೆಂಬರ್ 06: ಕೊರೊನಾ ವೈರಸ್ ಪುನುಗು ಬೆಕ್ಕಿನ ಜಾತಿಯ ಪ್ರಾಣಿಗಳಿಂದ ಹರಡುತ್ತಿದೆ ಎನ್ನುವ ಗುಮಾನಿ ವಿಜ್ಞಾನಿಗಳಲ್ಲಿದೆ. ಈಗಾಗ್ಲೇ ಸ್ಪೇನ್, ನೆದರ್ಲೇಂಡ್ ದೇಶಗಳಲ್ಲಿ ಲಕ್ಷಾಂತರ ಮುಂಗುಸಿ ಅಥವಾ ಪುನುಗು ಜಾತಿಯ ಅಲ್ಲಿನ ಜನ ಇಂಗ್ಲಿಷ್ ಭಾಷೆಯಲ್ಲಿ ಮಿಂಕ್ ಎಂದು ಕರೆಯುವ ಪ್ರಾಣಿಗಳನ್ನು ಕೊಂದು ಹಾಕಿದ್ದಾರೆ.
ಇದೇ ವೇಳೆ, ಯುರೋಪ್ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಮಿಂಕ್ ಪ್ರಾಣಿಗಳನ್ನು ಹೊಂದಿರುವ ಡೆನ್ಮಾರ್ಕ್ ತನ್ನ ದೇಶದಲ್ಲಿರುವ ಎಲ್ಲ ಪ್ರಾಣಿಗಳನ್ನು ಕೊಲ್ಲುವಂತೆ ಆದೇಶ ಮಾಡಿದೆ. ಅಲ್ಲಿ ಸರಿಸುಮಾರು 17 ಮಿಲಿಯನ್ ಮುಂಗುಸಿ ಜಾತಿಯ ಮಿಂಕ್ ಪ್ರಾಣಿಗಳಿದ್ದು ಅವುಗಳನ್ನು ಪೂರ್ತಿ ಕೊಂದು ಹಾಕುವುದೇ ಅಲ್ಲಿನ ಸರಕಾರಕ್ಕೆ ಚಿಂತೆಯಾಗಿದೆ.
17 ಮಿಲಿಯನ್ ಅಂದರೆ, ಸಾಮಾನ್ಯ ಲೆಕ್ಕದಲ್ಲಿ ಲೆಕ್ಕ ಹಾಕುವುದಾದರೆ 1.70 ಕೋಟಿ ಮಿಂಕ್ ಪ್ರಾಣಿಗಳಿದ್ದು, ಅವುಗಳೆಲ್ಲವನ್ನೂ ಕೊಲ್ಲಲು ಡೆನ್ಮಾರ್ಕ್ ಪ್ರಧಾನಿ ಮೀಟ್ ಪ್ರೆಡರಿಕ್ಸನ್ ಆದೇಶ ಮಾಡಿದ್ದಾರೆ. ಪ್ರತಿ ದಿನವೂ ಮಿಂಕ್ ಫಾರ್ಮ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಅದರ ಮಾಲೀಕರಿಗೆ ಕೊರೊನಾ ಸೋಂಕು ಕಂಡುಬರುತ್ತಿರುವುದನ್ನು ಅಲ್ಲಿನ ಸರಕಾರ ಪತ್ತೆ ಮಾಡಿದೆ. ಆದರೆ, ಸೋಂಕು ಮಾನವನಿಂದ ಪ್ರಾಣಿಗಳಿಗೆ ಹರಡಿದೆಯೇ ಅಥವಾ ಪ್ರಾಣಿಗಳ ಮೂಲಕ ಮಾನವನಿಗೆ ಹರಡುತ್ತಿದೆಯೇ ಎನ್ನುವುದು ದೃಢಪಟ್ಟಿಲ್ಲ.



ಪ್ರಾಣಿಗಳನ್ನು ತಪಾಸಣೆ ಮಾಡುವಾಗ ಅದರಲ್ಲೂ ಕೊರೊನಾ ವೈರಸ್ ಇರುವುದು ಕಂಡುಬಂದಿದೆ. ಹೀಗಾಗಿ ನಮ್ಮ ಜನರ ಹಿತವನ್ನು ಕಾಪಾಡುವುದು ಮುಖ್ಯ. ಆದ್ದರಿಂದ ಈ ಪ್ರಾಣಿಗಳನ್ನು ಕೊಂದು ಇನ್ನಿಲ್ಲವಾಗಿಸುವುದೇ ಸದ್ಯದ ದೊಡ್ಡ ಜವಾಬ್ದಾರಿ ಎಂದಿದ್ದಾರೆ ಅಲ್ಲಿನ ಪ್ರಧಾನಿ.
ಈ ನಡುವೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪ್ಯಾರಿಸ್ ಮೂಲದ ವಿಜ್ಞಾನಿಗಳು ಮಿಂಕ್ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸೋಂಕು ಹರಡುತ್ತಿದೆಯೇ ಅನ್ನುವ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ.
The world’s largest mink producer, Denmark, says it plans to cull more than 15 million of the animals, due to fears that a Covid-19 mutation moving from mink to humans could jeopardise future vaccines.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm