ಬ್ರೇಕಿಂಗ್ ನ್ಯೂಸ್
14-08-23 02:03 pm HK News Desk ದೇಶ - ವಿದೇಶ
ಚೆನ್ನೈ, ಆಗಸ್ಟ್ 14: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಂತರ 19 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ನಂತರ, ಯುವಕನ ತಂದೆ ಕೂಡ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ತಮಿಳುನಾಡಿನ ಚೆನ್ನೈನಲ್ಲಿರುವ ತನ್ನ ಮನೆಯಲ್ಲಿ ತಂದೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ 2022 ರಲ್ಲಿ 12 ನೇ ತರಗತಿಯಲ್ಲಿ 427 ಅಂಕಗಳೊಂದಿಗೆ ಪಾಸಾಗಿದ್ದ ಜಗದೀಶ್ವರನ್ ಎಂಬ ವಿದ್ಯಾರ್ಥಿ ಸತತ ಎರಡು ಪ್ರಯತ್ನಗಳಲ್ಲಿ ನೀಟ್ ಪ್ರವೇಶ ಪರೀಕ್ಷೆಯನ್ನು ಪಾಸಾಗಲು ಸಾಧ್ಯವಾಗಲಿಲ್ಲ. ಇತ್ತೀಚಿನ ಫಲಿತಾಂಶದಿಂದ ತೀವ್ರ ನೊಂದಿದ್ದ ಜಗದೀಶ್ವರನ್ ಶನಿವಾರ ತಂದೆ ಕರೆ ಮಾಡಿದರೂ ಸ್ಪಂದಿಸಿರಲಿಲ್ಲ. ನಂತರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಗದೀಶ್ವರನ್ ಆತ್ಮಹತ್ಯೆಗೆ ತುತ್ತಾಗಿದ್ದರು. ಆದರೆ ಇದೇ ನೋವಲ್ಲಿದ್ದ ತಂದೆ ಸೆಲ್ವಶೇಖರ್ ಅವರೂ ಕೂಡ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಮಗ ಜಗದೀಶ್ವರನ್ ಸಾವನ್ನಪ್ಪಿದ ಮಾರನೇ ದಿನವೇ ತಂದೆ ಸೆಲ್ವಶೇಖರ್ ಶವವಾಗಿ ಪತ್ತೆಯಾಗಿದ್ದರು. ಮಗನ ಸಾವಿನ ದುಃಖ ತಾಳಲಾರದೆ ಸೆಲ್ವಶೇಖರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ .ಸ್ಟಾಲಿನ್ ಅವರು ಸಾವಿಗೆ ಸಂತಾಪ ಸೂಚಿಸಿದ್ದು, "ಆತ್ಮಹತ್ಯೆಯ ಆಲೋಚನೆಗಳನ್ನು ಮಾಡಬೇಡಿ. ಆತ್ಮ ವಿಶ್ವಾಸವನ್ನು ಹೊಂದಲು ಹಾಗೂ ಬದುಕಲು ಕಲಿಯಿರಿ" ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ನಿಮ್ಮ ಗುರಿಗೆ ತೊಡಕಾಗಿರುವ ನೀಟ್ ಪರೀಕ್ಷೆಯನ್ನು ನಾವು ಖಂಡಿತವಾಗಿಯೂ ತೆಗೆದು ಹಾಕುತ್ತೇವೆ. ಯಾರೂ ಕೂಡ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನಾನು ವಿದ್ಯಾರ್ಥಿಗಳೊಂದಿಗೆ ಮನವಿ ಮಾಡುತ್ತೇನೆ. ನಿಮ್ಮ ಗುರಿಗೆ ತೊಡಕಾಗಿರುವ ನೀಟ್ ಪರೀಕ್ಷೆಯನ್ನು ನಾವು ಖಂಡಿತವಾಗಿಯೂ ತೆಗೆದುಹಾಕುತ್ತೇವೆ. ತಮಿಳುನಾಡು ಸರ್ಕಾರ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದೆ ಎಂದು ಹೇಳಿದ್ದಾರೆ.
ನೀಟ್ ಅಭ್ಯರ್ಥಿ ಜಗದೀಶ್ವರನ್, ಆತ್ಮಹತ್ಯೆ ಮಾಡಿಕೊಂಡಿದ್ದು ಕೇಳಿ ನನಗೆ ಆಘಾತವಾಯಿತು. ಅವರ ಪೋಷಕರನ್ನು ಸಮಾಧಾನ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ಅವರ ತಂದೆ ಸೆಲ್ವಶೇಖರ್ ಕೂಡ ಆತ್ಮಹತ್ಯೆ ಮಾಡಿಕೊಂಡರು. ಜಗದೀಶ್ವರನ್ ಅವರ ಕುಟುಂಬ, ಸ್ನೇಹಿತ ವರ್ಗ ಹಾಗೂ ಬಂಧು ಬಳಗಕ್ಕೆ ಹೇಗೆ ಸಾಂತ್ವನ ಹೇಳುವುದು ಎಂದು ನನಗೆ ತಿಳಿಯತ್ತಿಲ್ಲ. ವೈದ್ಯನಾಗುವ ಆಸೆ ಕಂಡಿದ್ದ ಬುದ್ದಿವಂತ ವಿದ್ಯಾರ್ಥಿಯೊಬ್ಬ ನೀಟ್ನಿಂದ ಆತ್ಮಹತ್ಯೆ ಮಾಡಿಕೊಂಡವರ ಸಾಲಿಗೆ ಸೇರಿದ್ದು ದುರಂತ’ ಎಂದು ಅವರು ಹೇಳಿದ್ದಾರೆ.
A 19-year-old medical aspirant died by suicide in Chennai after he failed to clear the NEET exam twice. He was found hanging in his room. He was rushed to a hospital where he was declared brought dead.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 01:32 pm
Mangalore Correspondent
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm