ಹಿಮಾಚಲದಲ್ಲಿ ಮೇಘಸ್ಫೋಟ ;  ಶಿಮ್ಲಾದಲ್ಲಿ ದೇಗುಲ ಕುಸಿತ, 9 ಮಂದಿ ಸಾವು, ಕನಿಷ್ಟ 20 ಮಂದಿ ಅವಶೇಷಗಳಡಿ 

14-08-23 06:13 pm       HK News Desk   ದೇಶ - ವಿದೇಶ

ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರಾವಾತಾರ ಮುಂದುವರೆದಿದ್ದು, ಮೇಘಸ್ಫೋಟದ ಹಿನ್ನಲೆಯಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಸೋಮವಾರ ಶಿಮ್ಲಾದಲ್ಲಿ ಶಿವನ ದೇವಾಲಯ ಕುಸಿದು ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶಿಮ್ಲಾ, ಆಗಸ್ಟ್14: ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರಾವಾತಾರ ಮುಂದುವರೆದಿದ್ದು, ಮೇಘಸ್ಫೋಟದ ಹಿನ್ನಲೆಯಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಸೋಮವಾರ ಶಿಮ್ಲಾದಲ್ಲಿ ಶಿವನ ದೇವಾಲಯ ಕುಸಿದು ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶಿಮ್ಲಾ ಜಿಲ್ಲೆಯ ಸಮ್ಮರ್ ಹಿಲ್ ಪ್ರದೇಶದಲ್ಲಿರುವ ಶಿವ ದೇವಸ್ಥಾನದಲ್ಲಿ ಭೂಕುಸಿತ ಸಂಭವಿಸಿ ಇಡೀ ದೇಗುಲ ಕುಸಿದಿದೆ. ಈ ವೇಳೆ 20ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕನಿಷ್ಟ 9 ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

9 Dead, 20 Feared Trapped as Temple Collapses Due To Landslide in Shimla

Shimla: 9 dead, over 20 feared trapped as landslide hits Shiv temple -  Hindustan Times

ಪೊಲೀಸ್ ಮೂಲಗಳ ಪ್ರಕಾರ ಭೂ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಶಿವನ ದೇವಸ್ಥಾನದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಇದ್ದರು. ಶ್ರಾವಣವಾದ್ದರಿಂದ ಭಕ್ತರು ವಿಶೇಷ ಪೂಜೆ ಸಲ್ಲಿಸಲು ದೇಗುಲದಲ್ಲಿ ಸೇರಿದ್ದರು ಎನ್ನಲಾಗಿದೆ.

ಘಟನಾ ಸ್ಥಳದಲ್ಲಿ ರಕ್ಷಣಾ ತಂಡದಿಂದ ಮಣ್ಣಿನಡಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಹಿಮಾಚಲ ಪ್ರದೇಶದ ಸೋಲಾನ್ ಜಿಲ್ಲೆಯಲ್ಲಿ ಈಗಾಗಲೇ ಮೇಘ ಸ್ಫೋಟ ಸಂಭವಿಸಿ ಏಳು ಮಂದಿ ಮೃತಪಟ್ಟಿದ್ದಾರೆ, ಈ ಘಟನೆಯಲ್ಲಿ ಐವರನ್ನು ರಕ್ಷಣೆ ಮಾಡಲಾಗಿದ್ದು ಓರ್ವ ಕಾಣೆಯಾಗಿದ್ದಾನೆ ಎನ್ನಲಾಗಿದೆ.

Rain fury: Nine dead in Shimla temple collapse, several feared trapped - The  New Indian Express

Himachal Pradesh: Nine dead, dozens trapped in India temple collapse - BBC  News

ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಅವರು, 'ಶಿಮ್ಲಾದಿಂದ ದುಃಖದ ಸುದ್ದಿ ಹೊರಬಿದ್ದಿದ್ದು, ಭಾರೀ ಮಳೆಯ ಪರಿಣಾಮವಾಗಿ ಸಮ್ಮರ್ ಹಿಲ್‌ನಲ್ಲಿರುವ "ಶಿವ ಮಂದಿರ" ಕುಸಿದು ಬಿದ್ದಿದ್ದು, ಹೊಮ್ಮಿದೆ. ಸದ್ಯಕ್ಕೆ ಒಂಬತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಸಿಲುಕಿರುವ ವ್ಯಕ್ತಿಗಳನ್ನು ರಕ್ಷಿಸುವ ಸಲುವಾಗಿ ಸ್ಥಳೀಯ ಆಡಳಿತವು ಅವಶೇಷಗಳನ್ನು ತೆರವುಗೊಳಿಸಲು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

Monsoon furry has claimed at least 29 lives in Himachal Pradesh in two days, with nine of them buried under the rubble of a temple in Shimla. The weather office has predicted heavy rain for the state over the next couple of days.