ಬ್ರೇಕಿಂಗ್ ನ್ಯೂಸ್
06-11-20 06:08 pm Headline Karnataka News Network ದೇಶ - ವಿದೇಶ
ನವದೆಹಲಿ, ನವೆಂಬರ್ 06: ಗೂಗಲ್ ಪೇ, ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುವುದು ಗೊತ್ತು. ಏಪ್ ಅಳವಡಿಸಿಕೊಂಡು ಜನರು ಬಳಕೆ ಕೂಡ ಮಾಡುತ್ತಿದ್ದಾರೆ. ಆದರೆ, ಭಾರತದಲ್ಲಿ ಅದಕ್ಕಿಂತಲೂ ಹೆಚ್ಚು ಜನ ಬಳಸುತ್ತಿರುವ ಏಪ್ ಅಂದರೆ ಅದು ವಾಟ್ಸ್ ಏಪ್. ಸಿಹಿಸುದ್ದಿ ಅಂದ್ರೆ ಇನ್ನು ವಾಟ್ಸಪ್ ನಲ್ಲಿಯೂ ಹಣ ವರ್ಗಾವಣೆಯ ಸೌಲಭ್ಯ ಸಿಗಲಿದೆ.
ಎರಡು ವರ್ಷಗಳ ಹಿಂದೆ ವಾಟ್ಸ್ ಏಪ್ ಅನ್ನು ಫೇಸ್ಬುಕ್ ಸಂಸ್ಥೆ ಖರೀದಿಸಿದ ಕೂಡಲೇ ಹಣ ಪಾವತಿ ವ್ಯವಸ್ಥೆಯನ್ನೂ ಮಾಡಲು ಮುಂದಾಗಿತ್ತು. ಆದರೆ, ರಾಷ್ಟ್ರೀಯ ಪಾವತಿ ನಿಗಮದಿಂದ ಅದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಗ್ರಾಹಕರ ಖಾಸಗಿತನ ರಕ್ಷಿಸುವ ಸಲುವಾಗಿ ಸ್ಥಳೀಯ ದತ್ತಾಂಶ ಕೇಂದ್ರ ಸ್ಥಾಪಿಸುವಂತೆ ಫೇಸ್ ಬುಕ್ ಸಂಸ್ಥೆಗೆ ಸೂಚಿಸಲಾಗಿತ್ತು.
ಈಗ ಎನ್ ಸಿಪಿಐ ಅನುಮತಿ ದೊರೆತಿದ್ದು, ನ.6ರಿಂದಲೇ ಹೊಸ ಯೋಜನೆ ಜಾರಿಗೆ ತರುತ್ತಿರುವುದಾಗಿ ಫೇಸ್ಬುಕ್ ಹೇಳಿದೆ. ಆಂಡ್ರಾಯ್ಡ್ ಮತ್ತು ಸ್ಮಾರ್ಟ್ ಫೋನ್ ಸೌಲಭ್ಯ ಇರುವ ಫೋನ್ ಗಳಲ್ಲಿ ವಾಟ್ಸಪ್ ಪೇ ಸೌಲಭ್ಯ ಪಡೆಯಬಹುದಾಗಿದೆ. ಗೂಗಲ್ ಪೇ, ಫೋನ್ ಪೇ ರೀತಿಯಲ್ಲೇ ಇದು ಕೂಡ ಕಾರ್ಯ ನಿರ್ವಹಿಸಲಿದೆ. ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಂಡರೆ ವಾಟ್ಸಪ್ ಚಾಟ್ ಲಿಸ್ಟ್ ಮೂಲಕವೇ ಹಣ ವರ್ಗಾವಣೆ ಮಾಡಬಹುದು ಎಂದು ಫೇಸ್ಬುಕ್ ಹೇಳಿದೆ.
ವಾಟ್ಸಪ್ ಮೆಸೇಜಿಂಗ್ ಸೇವೆಯು ಭಾರತದಲ್ಲಿ ಜನಪ್ರಿಯವಾಗಿದ್ದು, ಅತಿ ಹೆಚ್ಚು ಜನ ಬಳಕೆ ಮಾಡುತ್ತಾರೆ. ಹೀಗಾಗಿ ಗರಿಷ್ಠ ಬಳಕೆದಾರರನ್ನು ಪಡೆಯಲು ಫೇಸ್ಬುಕ್ ಸಂಸ್ಥೆ ಗುರಿ ಇರಿಸಿಕೊಂಡಿದ್ದು ಈಗಾಗ್ಲೇ ಜನಪ್ರಿಯವಾಗಿರುವ ಗೂಗಲ್ ಪೇ ಮತ್ತು ಫೋನ್ ಪೇಗಳಿಗೆ ಪೈಪೋಟಿ ನೀಡಲಿದೆ.
WhatsApp on Friday said it is rolling out its payments services in India after receiving a nod from the National Payments Corporation of India (NPCI).
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 11:08 pm
Mangalore Correspondent
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
ಕೊಲ್ಲೂರು ; ನದಿಯಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ...
30-08-25 09:16 pm
Talapady Accident, Mangalore, Ksrtc Bus: ತಲಪಾ...
30-08-25 04:23 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm