ಶ್ರೀರಾಮನೇ ನನಗೆ ಆದರ್ಶ, ಪ್ರಧಾನಿಯಾಗಿ ಇಲ್ಲಿ ಬಂದಿಲ್ಲ, ಹಿಂದುವಾಗಿ ಬಂದಿದ್ದೇನೆ ; ಕೇಂಬ್ರಿಡ್ಜ್ ವಿವಿಯಲ್ಲಿ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮಾತು

16-08-23 01:57 pm       HK News Desk   ದೇಶ - ವಿದೇಶ

ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನಡೆದ 'ರಾಮ ಕಥಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್, 'ನಾನು ಇಲ್ಲಿಗೆ ಪ್ರಧಾನಿಯಾಗಿ ಬಂದಿಲ್ಲ. ಒಬ್ಬ ಹಿಂದೂವಾಗಿ ಬಂದಿದ್ದೇನೆ' ಎಂದು ಹೇಳಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

ನವದೆಹಲಿ, ಆಗಸ್ಟ್ 16: ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನಡೆದ 'ರಾಮ ಕಥಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್, 'ನಾನು ಇಲ್ಲಿಗೆ ಪ್ರಧಾನಿಯಾಗಿ ಬಂದಿಲ್ಲ. ಒಬ್ಬ ಹಿಂದೂವಾಗಿ ಬಂದಿದ್ದೇನೆ' ಎಂದು ಹೇಳಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

'ಜೈ ಸೀತಾ ರಾಮ್' ಎಂದು ಭಾಷಣ ಆರಂಭಿಸಿದ ಪ್ರಧಾನಿ ರಿಷಿ ಸುನಕ್‌, ಶ್ರೀರಾಮನೇ ನನಗೆ ಆದರ್ಶ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ ಎಂದಿದ್ದಾರೆ. ಭಾರತದ ಸ್ವಾತಂತ್ರ್ಯ ದಿನದಂದು ಮೊರಾರಿ ಬಾಪು ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಿಷಿ ಸುನಕ್ ಭಾಗವಹಿಸಿದ್ದರು. ಬಾಪು ಅವರೇ ನಾನು ಇಂದು ಪ್ರಧಾನಿಯಾಗಿ ಇಲ್ಲಿಗೆ ಬಂದಿಲ್ಲ. ಒಬ್ಬ ಹಿಂದೂ ಆಗಿ ಬಂದಿದ್ದೇನೆ ಎಂದಿದ್ದಾರೆ.

Rishi Sunak: My Hindu faith guides me as PM: Rishi Sunak at Morari Bapu 'Ram  Katha' in UK - Times of India

I'm here as Hindu': UK PM Rishi Sunak attends Ram Katha at Cambridge -  BusinessToday

Rishi Sunak attends 'Ram Katha' at Cambridge: 'I'm here as a Hindu'

Who is Morari Bapu, Whose Ram Katha Was Attended by UK PM Rishi Sunak |  Explained - News18

British PM Rishi Sunak attends Ram Katha at Cambridge, says 'here as Hindu'  - India Today

ನಂಬಿಕೆ ಎನ್ನುವುದು ವೈಯಕ್ತಿಕ ವಿಷಯವಾಗಿದೆ. ನನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ನಾನಿಟ್ಟಿರುವ ನಂಬಿಕೆ ನನಗೆ ಮಾರ್ಗದರ್ಶನ ನೀಡಿದೆ. ಪ್ರಧಾನಿಯಾಗುವುದು ದೊಡ್ಡ ಗೌರವ, ಆದರೆ ಅದಕ್ಕೆ ಅನೇಕ ಕಷ್ಟಗಳನ್ನು ಎದುರಿಸಬೇಕು. ನಂಬಿಕೆ ನನಗೆ ಆ ಧೈರ್ಯ, ಶಕ್ತಿ ನೀಡಿದೆ ಎಂದು ಸುನಕ್ ಹೇಳಿದ್ದಾರೆ. ರಾಮಾಯಣ, ಭಗವದ್ಗೀತೆ ಮತ್ತು ಹನುಮಾನ್‌ ಚಾಲೀಸಾ ನೆನಪಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಲು, ದೇಶದ ಆಡಳಿತವನ್ನು ಸುಗಮವಾಗಿ ನಡೆಸಲು ನನಗೆ ಶ್ರೀರಾಮನು ಸ್ಫೂರ್ತಿ ನೀಡಿದ್ದಾನೆ ಎಂದರು. ರಿಷಿ ಸುನಕ್ 'ರಾಮ ಕಥಾ' ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

British Prime Minister Rishi Sunak, who met renowned Ramayan ‘kathakar’ Morari Bapu at Cambridge University on Tuesday on the Indian Independence Day, said he was there “not as prime minister but as a Hindu”.