ಕೇರಳ ಪ್ರಾಚ್ಯವಸ್ತು ಹಗರಣ ಕೇಸ್ ;  ತನಿಖೆಯಿಂದ ತಪ್ಪಿಸಿಕೊಳ್ಳಲು ಆರೋಪಿಗೆ ಅಧಿಕಾರಿಯ ಮಾಸ್ಟರ್ ಪ್ಲಾನ್ , ಕೇರಳ ಕ್ರೈಂ ಬ್ರಾಂಚ್ ನಿಂದ ಐಜಿ ಲಕ್ಷ್ಮಣ್ ಬಂಧನ

24-08-23 03:06 pm       HK News Desk   ದೇಶ - ವಿದೇಶ

ಮಾನ್ಸನ್ ಮಾವುಂಕಲ್ ಪ್ರಾಚ್ಯವಸ್ತು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಐಜಿ ಗುಗುಲೋತ್ ಲಕ್ಷ್ಮಣ್ ಅವರನ್ನು ಕೇರಳ ಅಪರಾಧ ವಿಭಾಗ ಬಂಧಿಸಿದೆ.

ಕೊಚ್ಚಿ, ಆಗಸ್ಟ್ 24: ಮಾನ್ಸನ್ ಮಾವುಂಕಲ್ ಪ್ರಾಚ್ಯವಸ್ತು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಐಜಿ ಗುಗುಲೋತ್ ಲಕ್ಷ್ಮಣ್ ಅವರನ್ನು ಕೇರಳ ಅಪರಾಧ ವಿಭಾಗ ಬಂಧಿಸಿದೆ. ಕ್ರೈಂ ಬ್ರಾಂಚ್ ವಿಚಾರಣೆ ವೇಳೆ ಸೂಕ್ತ ಉತ್ತರ ನೀಡಲು ವಿಫಲರಾದ ಕಾರಣ ಐಜಿ ಲಕ್ಷ್ಮಣ್​​ರನ್ನು ಬಂಧಿಸಲಾಗಿದ್ದು, ಅಧಿಕಾರಿಗಳಿಗೆ ಫೋನ್ ದಾಖಲೆಗಳು ಸೇರಿದಂತೆ ಬಲವಾದ ಡಿಜಿಟಲ್ ಸಾಕ್ಷ್ಯಗಳು ಲಭಿಸಿವೆ ಎಂದು ತಿಳಿದುಬಂದಿದೆ.

ಅಪರಾಧ ವಿಭಾಗದ ಸೂಚನೆಯಂತೆ ಐಜಿ ಲಕ್ಷ್ಮಣ್ ನಿನ್ನೆ ಬೆಳಗ್ಗೆ 11.30 ರ ಸುಮಾರಿಗೆ ಕಲಮಶ್ಶೇರಿ ಅಪರಾಧ ವಿಭಾಗದ ಕಚೇರಿಗೆ ವಿಚಾರಣೆಗೆಂದು ಆಗಮಿಸಿದ್ದರು. ಇದೇ ಮೊದಲ ಬಾರಿಗೆ ತನಿಖಾ ತಂಡದ ಮುಂದೆ ಹಾಜರಾಗಿದ್ದ ಆರೋಪಿ ಐಜಿ ಲಕ್ಷ್ಮಣ್​ಗೆ ಈ ಹಿಂದೆ ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ಕೇರಳ ಹೈಕೋರ್ಟ್ ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿತ್ತು. ಆದರೆ, ಎರಡು ಬಾರಿ ನೋಟಿಸ್ ಮೂಲಕ ಸಮನ್ಸ್ ನೀಡಿದರೂ ಲಕ್ಷ್ಮಣ್ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ಬೆನ್ನಲ್ಲೇ, ತನಿಖಾ ತಂಡವು ಲಕ್ಷ್ಮಣ್ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು.

ಅಪರಾಧ ವಿಭಾಗದ ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, "ಪುರಾತನ ವಸ್ತುಗಳು (ಪ್ರಾಚ್ಯವಸ್ತು) ವಂಚನೆಗೆ ಸಂಬಂಧಿಸಿದ ಪ್ರಕರಣದ ಮಾಸ್ಟರ್ ಮೈಂಡ್​ ಐಜಿ ಲಕ್ಷ್ಮಣ್ ಎಂದು ಅಪರಾಧ ವಿಭಾಗ ಹೇಳಿದೆ. ಅಷ್ಟೇ ಅಲ್ಲದೆ, ಕ್ರೈಂ ಬ್ರಾಂಚ್ ಐಜಿ ಲಕ್ಷ್ಮಣ್ ವಿರುದ್ಧ ಪಿತೂರಿ ಆರೋಪ ಸಹ ಹೊರಿಸಿತ್ತು. ಸದ್ಯಕ್ಕೆ ನಡೆಯುತ್ತಿರುವ ತನಿಖೆಯಲ್ಲಿ ಆರೋಪಿ ವಿರುದ್ಧ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಹೀಗಿದ್ದರೂ, ಐಜಿ ಲಕ್ಷ್ಮಣ್ ತನಿಖೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದು, ಬಂಧನದ ಭೀತಿಯಿಂದ ವಿಚಾರಣೆಗೆ ಹಾಜರಾಗಿಲ್ಲ" ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಜೊತೆಗೆ, ಕ್ರೈಂ ಬ್ರಾಂಚ್ ಅಧಿಕಾರಿಗಳು ಐಜಿ ಲಕ್ಷ್ಮಣ್ ಜೊತೆಗೆ ಇರುವ ಮಾನ್ಸನ್ ಮಾವುಂಕಲ್​ನ ಹಲವು ಫೋಟೋಗಳನ್ನು ಪಡೆದುಕೊಂಡಿದ್ದರು. ಮಾನ್ಸನ್ ಜತೆ ಐಜಿ ಮಾಡಿರುವ ದೂರವಾಣಿ ಕರೆಗಳು ಹಾಗೂ ಟವರ್ ಲೊಕೇಶನ್ ಮಾಹಿತಿಯನ್ನು ಸಹ ತನಿಖಾ ತಂಡ ಸಂಗ್ರಹಿಸಿದೆ.

Doctor who examined girl abused by Monson approaches High Court seeking  security

ಮಾನ್ಸನ್ ಮಾವುಂಕಲ್‌ ಯಾರು? ;

ಪ್ರಾಚ್ಯ ವಸ್ತುಗಳ ವ್ಯಾಪಾರಿ ಹಾಗೂ ಹಲವಾರು ಗಣ್ಯ ವ್ಯಕ್ತಿಗಳ ಪರಿಚಯವಿದೆ ಎಂದು ಕೋಟಿಗಟ್ಟಲೇ ಹಣವನ್ನು ಲಪಟಾಯಿಸಿದ್ದ ಕೇರಳದ ನಕಲಿ ಪ್ರಾಚೀನ ವಸ್ತುಗಳ ವ್ಯಾಪಾರಿ. ಈತನನ್ನು ಸೆಪ್ಟೆಂಬರ್ 26 ರಂದು ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದರು. ಮಾನ್ಸನ್ ಮಾವುಂಕಲ್‌ ವಿರುದ್ಧ 10 ಕೋಟಿ ರೂಪಾಯಿಗಳ ವಂಚನೆ ಪ್ರಕರಣ ದಾಖಲಿಸಲಾಯಿತು. ಇತ್ತೀಚೆಗಷ್ಟೇ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

Inspector General of Police G Lakshman was on Wednesday arrested by the Crime Branch on charges of conspiracy in a cheating case connected to controversial antiques dealer Monson Mavunkal. He was later released as the High Court had granted him interim bail.