ಚೆಸ್ ವಿಶ್ವಕಪ್ ಫೈನಲ್ ; ಟೈ ಬ್ರೇಕರ್ ಪಂದ್ಯದಲ್ಲಿ ಸೋಲು ಕಂಡ ಪ್ರಜ್ಞಾನಂದ, ಮ್ಯಾಗ್ನಸ್ ಕಾರ್ಲ್ಸನ್ ವಿಶ್ವ ಚಾಂಪ್ಯನ್ 

24-08-23 08:52 pm       HK News Desk   ದೇಶ - ವಿದೇಶ

ಭಾರೀ ಕುತೂಹಲ ಮೂಡಿಸಿದ್ದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ವೀರೋಚಿತ ಸೋಲು ಅನುಭವಿಸಿದ್ದಾರೆ. 

ನವದೆಹಲಿ, ಆಗಸ್ಟ್ 24: ಭಾರೀ ಕುತೂಹಲ ಮೂಡಿಸಿದ್ದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ವೀರೋಚಿತ ಸೋಲು ಅನುಭವಿಸಿದ್ದಾರೆ. 

ಭಾರತದ ಉದಯೋನ್ಮುಖ ಆಟಗಾರ ಆರ್. ಪ್ರಜ್ಞಾನಂದ ಅವರು ಫೈನಲ್ ಕೂಟದ ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರು. ಹೀಗಾಗಿ ಇಂದು ಟೈ ಬ್ರೇಕರ್​ ಪಂದ್ಯ ನಡೆದಿದ್ದು ಇದರಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್​​ಸನ್ ಅವರು ಗೆಲುವು ದಾಖಲಿಸಿದ್ದಾರೆ. 

ಮೊದಲ ಟೈ-ಬ್ರೇಕರ್‌ನಲ್ಲಿ ಜಯ ಸಾಧಿಸಿದ ಕಾರ್ಲ್‌ಸನ್ 1-0 ಮುನ್ನಡೆ ಸಾಧಿಸಿದರು. ನಂತರ ಎರಡನೇ ಪಂದ್ಯವನ್ನೂ ಡ್ರಾ ಮಾಡುವುದರೊಂದಿಗೆ ವಿಶ್ವ ಕಪ್ ಗೆಲುವು ಅವರ ಪಾಲಾಯಿತು. ಈ ಮೂಲಕ ಕಾರ್ಲ್‌ಸನ್ ಚೊಚ್ಚಲ ಫಿಡೆ ವಿಶ್ವಕಪ್​ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಚಾಂಪಿಯನ್​ ಪಟ್ಟ ಅಲಂಕರಿಸಿದ ಕಾರ್ಲ್‌ಸನ್‌ ಅವರು ಸುಮಾರು 90,93,551 ಲಕ್ಷ ರೂಪಾಯಿ ಬಹುಮಾನ ಪಡೆಯಲಿದ್ದಾರೆ. ದ್ವಿತೀಯ ಸ್ಥಾನ ಪಡೆದ ಪ್ರಜ್ಞಾನಂದ 66,13,444 ರೂ. ನಗದು ಬಹುಮಾನ ಪಡೆಯಲಿದ್ದಾರೆ. ಫ್ಯಾಬಿಯಾನೋ ಕರುವಾನಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Magnus Carlsen won his maiden World Cup crown after beating India’s teenage sensation Rameshbabu Praggnanandhaa in the tie-breakers of the final in Baku, the capital of Azerbaijan on 24 August. The 32-year-old Norweigien won the first of two tiebreak games before drawing in the second after the two players drew the first two games of the championship match.