ಬ್ರೇಕಿಂಗ್ ನ್ಯೂಸ್
27-08-23 01:36 pm HK News Desk ದೇಶ - ವಿದೇಶ
ವಿಶಾಖಪಟ್ಟಣ, ಆಗಸ್ಟ್ 27: 100 ಕೋಟಿ ರೂ ಎಂದು ಬರೆದಿದ್ದ ಚೆಕ್ ಅನ್ನು ಹುಂಡಿಯಲ್ಲಿ ಕಂಡ ದೇವಸ್ಥಾನದ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದರು. ಇಷ್ಟು ದೊಡ್ಡ ಉದಾರಿ, ದಾನಿ ಇರುವುದು ಅಸಂಭವ ಎಂದು ಅವರು ಪರಿಶೀಲನೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.
ಆಂಧ್ರಪ್ರದೇಶದ ಸಿಂಹಾಚಲಂನಲ್ಲಿ ಇರುವ ವರಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣದ ಲೆಕ್ಕ ಹಾಕುವ ಕಾರ್ಯವನ್ನು ಸಿಬ್ಬಂದಿ ನಡೆಸಿದ್ದರು. ಅದರಲ್ಲಿ ಭಕ್ತರೊಬ್ಬರು ಹಾಕಿದ್ದ ಬರೋಬ್ಬರಿ 100 ಕೋಟಿ ರೂ ಮೊತ್ತದ ಚೆಕ್ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಅದರ ಬಗ್ಗೆ ಪರಿಶೀಲನೆ ನಡೆಸಿದ ಬ್ಯಾಂಕ್ ಸಿಬ್ಬಂದಿ, ಆ ಮಹಾಭಕ್ತನ ಖಾತೆಯಲ್ಲಿ ಇದ್ದ ಹಣದ ಮೊತ್ತ ಕೇಳಿ ನಗುವುದೋ, ಅಳುವುದೋ ತಿಳಿಯದೆ ಪೇಚಾಗಿದ್ದಾರೆ. 100 ಕೋಟಿ ರೂ ಮೊತ್ತದ ಚೆಕ್ ಕೊಟ್ಟವನ ಖಾತೆಯಲ್ಲಿ ಇದ್ದಿದ್ದು ಕೇವಲ 17 ರೂ.
ಚೆಕ್‌ನಲ್ಲಿ ದೊಡ್ಡ ಮೊತ್ತ ನಮೂದಾಗಿರುವುದನ್ನು ಗಮನಿಸಿದ ದೇಗುಲ ಸಿಬ್ಬಂದಿ, ಅದನ್ನು ಆಡಳಿತಾಧಿಕಾರಿ ತ್ರಿನಾದ್ ರಾವ್ ಅವರ ಗಮನಕ್ಕೆ ತಂದಿದ್ದರು. ಅವರು ಬ್ಯಾಂಕ್ ಅಧಿಕಾರಿಗಳ ಬಳಿ ಚೆಕ್‌ನ ವಿವರಗಳನ್ನು ಪರಿಶೀಲಿಸುವಂತೆ ಸೂಚಿಸಿದ್ದರು. ದೇವಸ್ಥಾನದ ಮನವಿಯಂತೆ ಚೆಕ್ ನೀಡಿದ ರಾಧಾಕೃಷ್ಣ ಎಂಬುವವರ ಖಾತೆ ಪರಿಶೀಲನೆ ನಡೆಸಿದ ಬ್ಯಾಂಕ್ ಅಧಿಕಾರಿಗಳು, ಅದರಲ್ಲಿ ಇರುವುದು 17 ರೂ ಮಾತ್ರ ಎಂದು ತಿಳಿಸಿದ್ದಾರೆ
ವಿಶಾಖಪಟ್ಟಣದ ಎಂವಿಪಿ ಡಬಲ್ ರೋಡ್‌ನಲ್ಲಿರುವ ಕೊಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯ ವಿವರಗಳು ಈ ಚೆಕ್‌ನಲ್ಲಿ ಪತ್ತೆಯಾಗಿತ್ತು. ಹೀಗಾಗಿ ದೇವಸ್ಥಾನದ ಸಿಬ್ಬಂದಿ ಅಲ್ಲಿನ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಈ ಚೆಕ್‌ನ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಬೊಡ್ಡೆಪಲ್ಲಿ ರಾಧಾಕೃಷ್ಣ ಎಂಬುವವರು ಸಹಿ ಹಾಕಿರುವ ಚೆಕ್‌ನಲ್ಲಿ ದಿನಾಂಕ ನಮೂದಿಸಿರಲಿಲ್ಲ. ಈ ಚೆಕ್ ನೀಡಿದ ಖಾತೆದಾರನ ಸಂಪರ್ಕ ವಿವರಗಳನ್ನು ನೀಡುವಂತೆ ದೇವಸ್ಥಾನದ ಸಿಬ್ಬಂದಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ದೇಣಿಗೆ ನೀಡಿದವರು 'ಕೆಟ್ಟ ಉದ್ದೇಶ' ಹೊಂದಿದ್ದರೆ, ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲು ದೇವಸ್ಥಾನ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. "ಅವರ ವಿರುದ್ಧ ಕ್ರಮ ಕೈಗೊಳ್ಳಬೇಡಿ. ಅವರು ದೇವರಿಂದ ಸಾಲ ಕೇಳಿರಬೇಕು. ಅದರ ಕಂತಿಗಾಗಿ ದಿನಾಂಕವಿಲ್ಲದ ಚೆಕ್ (ಯುಡಿಸಿ) ನೀಡಿರಬೇಕು. ರಾಜಕಾರಣಿಗಳು ಮತ್ತು ಇತರರಂತೆ ಸಾಮಾನ್ಯ ನಾಗರಿಕರು ಹಗರಣಗಳ ಮೂಲಕ ಹಣ ವಂಚನೆ ಮಾಡಲು ಸಾಧ್ಯವಿಲ್ಲ" ಎಂದು ಟ್ವಿಟ್ಟರ್ ಬಳಕೆದಾರರು ತಮಾಷೆಯಾಗಿಯೇ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ಆ ವ್ಯಕ್ತಿಯನ್ನು ಬಂಧಿಸಬೇಕು. ದೇವರ ವಿಚಾರದಲ್ಲಿ ಇಂತಹ ಹುಚ್ಚಾಟಗಳನ್ನು ಸಹಿಸಬಾರದು ಎಂದು ಒತ್ತಾಯಿಸಿದ್ದಾರೆ.
In a baffling incident, a mysterious cheque with a value of Rs 100 crore was found at the Sri Varaha Lakshmi Narasimha Swamy temple in Visakhapatnam, Andhra Pradesh. The cheque was discovered by temple authorities during the counting of the hundi collections on August 23 this year.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm