ಬ್ರೇಕಿಂಗ್ ನ್ಯೂಸ್
08-11-20 03:49 pm Political News Correspondant ದೇಶ - ವಿದೇಶ
ಚೆನ್ನೈ, ನವೆಂಬರ್ 8: ಅತ್ತ ಜಗತ್ತಿನ ದೊಡ್ಡಣ್ಣ ಅಮೆರಿಕದಲ್ಲಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಇತ್ತ ತಮಿಳುನಾಡಿನ ಸಣ್ಣ ಹಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ. ಜೋ ಬಿಡೆನ್ ಜೊತೆಗೆ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದು ಆ ಹಳ್ಳಿಯ ಜನರನ್ನು ಹುಚ್ಚೆಬ್ಬಿಸಿತ್ತು.. ಪಟಾಕಿ ಸಿಡಿಸಿ, ಸಿಹಿ ತಿಂಡಿಗಳನ್ನು ಹಂಚಿಕೊಂಡರು. ದೇವಸ್ಥಾನಕ್ಕೆ ತೆರಳಿ ಜನರು ದೇವರಿಗೆ ತಲೆಬಾಗಿ ಅಡ್ಡಬಿದ್ದರು.. ನಮ್ಮ ಪೂಜೆ, ಪುರಸ್ಕಾರಕ್ಕೆ ದೇವರು ಕೃಪೆ ತೋರಿದ್ದಾನೆಂದು ಕೈಮುಗಿದರು..
ಹೌದು.. ಆ ಹಳ್ಳಿ ಇರುವುದು ತಮಿಳರ ರಾಜಧಾನಿ ಚೆನ್ನೈನಿಂದ 350 ಕಿಮೀ ದೂರದಲ್ಲಿ. ತುಳಸೇಂದ್ರಪುರಂ ಎನ್ನುವ ಹಳ್ಳಿ.. ಸುತ್ತ ಹಸಿರ ಸಿರಿಯನ್ನು ಹೊದ್ದು ನಿಂತಿರುವ ಆ ಊರಿನಲ್ಲಿ 350 ರಷ್ಟು ಜನರಿದ್ದಾರೆ. ಆ ಹಳ್ಳಿಯ ಜನರು ಕಳೆದ ಮೂರು ದಿನಗಳಿಂದ ಪ್ರಾರ್ಥನೆಯಲ್ಲಿ ತೊಡಗಿದ್ದರು. ನಿನ್ನೆ ಸಂಜೆಯಾಗುತ್ತಲೇ ಸಂಭ್ರಮದಲ್ಲಿ ತೊಡಗಿದ್ದಾರೆ. ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ದಾರೆ. ಕೆಲವು ಮಹಿಳೆಯರಂತೂ ತಮ್ಮ ಮನೆಯ ಅಂಗಳದಲ್ಲಿ "ಅಭಿನಂದನೆಗಳು.. ಕಮಲಾ ಹ್ಯಾರಿಸ್ ನಮ್ಮೂರಿನ ಹುಡುಗಿ. ನಮ್ಮ ಊರಿನ ಹೆಮ್ಮೆ. ವನಕ್ಕಂ" ಎಂದು ದೊಡ್ಡದಾಗಿ ರಂಗೋಲಿ ಹುಡಿ ಬಳಸಿ ಬರೆದು ಶುಭಕೋರಿದ್ದರು. ಫಲಿತಾಂಶ ವಿಳಂಬ ಆಗಿದ್ದರಿಂದ ಎರಡು ದಿನಗಳಿಂದ ತುದಿಗಾಲಲ್ಲಿ ನಿಲ್ಲುವಂತಾಗಿತ್ತು. ಆದರೆ, ಈಗ ಸಂಭ್ರಮಿಸುವ ಸಮಯ ಬಂದಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ಹಂಚಿಕೊಂಡಿದ್ದೇವೆ. ನಮ್ಮ ಕೂಗು ಆಕೆಗೆ ಕೇಳಬೇಕು. ಕಮಲಾ ನಮ್ಮ ಊರಿಗೆ ಬರುವುದನ್ನು ನಿರೀಕ್ಷೆ ಮಾಡುತ್ತೇವೆ ಎಂದು ಊರಿನ ಪ್ರಮುಖರಾದ ಕಾಳಿದಾಸ್ ವಾಮದಯಾರ್ ಹೇಳುತ್ತಾರೆ.
ತಮಿಳುನಾಡಿನ ಆಹಾರ ಸಚಿವ ಆರ್.ಕಾಮರಾಜ್ ನೇತೃತ್ವದಲ್ಲಿ ಊರಿನ 100 ರಷ್ಟು ಜನ ಸೇರಿ ತುಳಸೇಂದ್ರಪುರಂನ ಧರ್ಮಶಾಸ್ತ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವನ ಸ್ವರೂಪದ ತಮಿಳರು ಆರಾಧಿಸುವ ಅಯ್ಯನಾರ್ ದೇವರ ವಿಗ್ರಹಕ್ಕೆ ಹಾಲಿನ ಅಭಿಷೇಕ ನೆರವೇರಿಸಿ, ದೇವರನ್ನು ಹೂಗಳಿಂದ ಅಲಂಕರಿಸಿದ್ದರು. ಎಳ್ಳೆಣ್ಣೆ ದೀಪ ಹಚ್ಚಿ ದೇವರಿಗೆ ಶಿರಬಾಗಿ ನಮಸ್ಕರಿಸಿದರು. ಕಮಲಾ ನಮ್ಮೂರಿನ ಮಗಳು. ಮಕ್ಕಳಿಂದ ತೊಡಗಿ ವೃದ್ಧರ ತನಕ ಕಮಲಾ ಅಮೆರಿಕದಲ್ಲಿ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದು ಈ ವೇಳೆ ಊರಿನ ಪಂಚಾಯತ್ ಸದಸ್ಯ ಅಲುಮೊಝಿ ಸುಧಾಕರ್ ಹೇಳಿದರು. ಇದೇ ಸುಧಾಕರ್ ನೇತೃತ್ವದಲ್ಲಿ ಮೊನ್ನೆ ಅಮೆರಿಕದಲ್ಲಿ ಚುನಾವಣೆ ನಡೆದಾಗ, ಊರಿನ ಜನರನ್ನು ಸೇರಿಸಿ ಕಮಲಾ ಗೆಲುವಿಗಾಗಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು. ಕಮಲಾ ಪರವಾಗಿ ಅಲ್ಲಲ್ಲಿ ಬೃಹತ್ ಕಟೌಟ್, ಬ್ಯಾನರ್ ಹಾಕಿ ಶುಭ ಹಾರೈಸಿದ್ದರು.
ಇಲ್ಲೇ ಹುಟ್ಟಿ ಬೆಳೆದಿದ್ದರು ಕಮಲಾ ತಾಯಿ..!
ಅಂದಹಾಗೆ, ತುಳಸೇಂದ್ರಪುರಂ ಕಮಲಾ ಹ್ಯಾರಿಸ್ ಪೂರ್ವಜರಿದ್ದ ಊರು. ಇದೇ ಊರಲ್ಲಿ ಆಕೆಯ ಅಜ್ಜ ಟಿ.ವಿ ಗೋಪಾಲನ್ ಮನೆ ಇತ್ತು. ಗೋಪಾಲನ್, ಸ್ವಾತಂತ್ರ್ಯ ಪೂರ್ವ ಕಾಲದಲ್ಲೇ ಅಧಿಕಾರಿಯಾಗಿದ್ದರು. ಜಾಂಬಿಯಾ ದೇಶದಲ್ಲಿ ಭಾರತದ ಅಧಿಕಾರಿಯಾಗಿ ಹೆಸರು ಮಾಡಿ, ನಿವೃತ್ತಿ ಬಳಿಕ ಊರಲ್ಲೇ ಇದ್ದರು. ಅಜ್ಜ, ಅಜ್ಜಿ ಮತ್ತು ಸಂಬಂಧಿಕರು ಇದೇ ಊರಲ್ಲಿ ನೆಲೆಸಿದ್ದರು. ಹತ್ತು ವರ್ಷಗಳ ಹಿಂದೆ ಅಜ್ಜನ ಮನೆಯವರು ತಮ್ಮ ವಾಸವನ್ನು ಚೆನ್ನೈಗೆ ಸ್ಥಳಾಂತರಿಸಿದ್ದರು. ಕಮಲಾ ತಾಯಿ ಶ್ಯಾಮಲಾ ಗೋಪಾಲನ್ ಕೂಡ ಇದೇ ಊರಲ್ಲಿ ಹುಟ್ಟಿ ಬೆಳೆದವರು. ಶ್ಯಾಮಲಾ ತನ್ನ 19ರ ಹರೆಯದಲ್ಲಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಆದರೆ, ಆಕೆ ವಿದ್ಯಾಭ್ಯಾಸದ ಬಳಿಕ ಅಲ್ಲಿಯೇ ಉದ್ಯೋಗಕ್ಕೆ ಸೇರಿ ಆಫ್ರಿಕಾ ಮೂಲದ ಜಮೈಕಾದ ಡೊನಾಲ್ಡ್ ಹ್ಯಾರಿಸ್ ಎಂಬ ಪ್ರೊಫೆಸರ್ ಒಬ್ಬರನ್ನು ಮದುವೆಯಾಗಿದ್ದರು. ಈ ದಂಪತಿ ತಮಗೆ ಹುಟ್ಟಿದ ಮಗಳಿಗೆ ಕಮಲಾ ಎಂದು ಹೆಸರಿಟ್ಟಿದ್ದರು. ಕಮಲ ಎಂದರೆ ಸಂಸ್ಕೃತ ಭಾಷೆಯಲ್ಲಿ ತಾವರೆ ಎಂದರ್ಥ. ಇವರ ಇನ್ನೊಬ್ಬ ಮಗಳು ಮಾಯಾ..
ಟ್ರಂಪ್ ಪರ ಇದ್ದ ಮೋದಿಯಿಂದ ಕಮಲಾ ಗುಣಗಾನ !
ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದು ಕಮಲಾ ಹ್ಯಾರಿಸ್ ಯಶಸ್ಸು ದೊಡ್ಡ ಮೈಲಿಗಲ್ಲು. ಇದರಿಂದ ಆಕೆಯ ಕುಟುಂಬಸ್ಥರಿಗಷ್ಟೇ ಹೆಮ್ಮೆ ಆಗಿದ್ದಲ್ಲ. ಭಾರತ ಮತ್ತು ಅಮೆರಿಕದ ಎಲ್ಲರಿಗೂ ಹೆಮ್ಮೆಯ ವಿಷಯ. ಭವಿಷ್ಯದಲ್ಲಿ ಭಾರತ - ಅಮೆರಿಕದ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುವ ವಿಶ್ವಾಸವಿದೆ ಎಂದಿದ್ದಾರೆ. ಆದರೆ, ಚುನಾವಣೆಗೂ ಮುನ್ನ ಮೋದಿಯ ಒಲವು ಟ್ರಂಪ್ ಪರವಾಗಿತ್ತು. ಟ್ರಂಪ್ ಕಳೆದ ಫೆಬ್ರವರಿಯಲ್ಲಿ ಭಾರತಕ್ಕೆ ಬಂದು ತನ್ನ ಪರವಾಗಿ ಮತ ಚಲಾಯಿಸುವಂತೆ ಭಾರತ ಮೂಲದ ಅಮೆರಿಕನ್ನರಲ್ಲಿ ಕೇಳಿಕೊಂಡಿದ್ದರು. ಮೋದಿ ಕೂಡ ಟ್ರಂಪ್ ಮತ್ತೆ ಗೆದ್ದು ಬರಲೆಂದು ಹಾರೈಸಿದ್ದರು.
Heartiest congratulations @KamalaHarris! Your success is pathbreaking, and a matter of immense pride not just for your chittis, but also for all Indian-Americans. I am confident that the vibrant India-US ties will get even stronger with your support and leadership.
— Narendra Modi (@narendramodi) November 7, 2020
ಇದಲ್ಲದೆ, ಕಳೆದ ಬಾರಿ ಕಾಶ್ಮೀರದ ಸ್ವಾಯತ್ತೆಯನ್ನು ಕೇಂದ್ರ ಸರಕಾರ ತೆಗೆದುಹಾಕಿದ್ದ ವಿಚಾರದಲ್ಲಿ ಕಮಲಾ ಹ್ಯಾರಿಸ್ ಟೀಕೆ ಮಾಡಿದ್ದು ಮೋದಿ ಪರವಾದ ಬಲಪಂಥೀಯರನ್ನು ಕೆರಳಿಸಿತ್ತು. ಇದೇನೇ ಇದ್ದರೂ ಭಾರತ ಮೂಲದ ಮಹಿಳೆಯೊಬ್ಬಳು ಜಗತ್ತಿನ ದೊಡ್ಡಣ್ಣ ಅಮೆರಿಕದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದು ಭಾರತೀಯರಿಗೆಲ್ಲ ಹೆಮ್ಮಯ ವಿಚಾರವೇ ಸರಿ.. ಕಮಲಾ ಹ್ಯಾರಿಸ್, ಅಮೆರಿಕದಲ್ಲಿ ಉಪಾಧ್ಯಕ್ಷ ಹುದ್ದೆಗೇರಿದ ಮೊದಲ ಮಹಿಳೆಯೂ ಹೌದು. ಅಲ್ಲದೆ, ಉಪಾಧ್ಯಕ್ಷ ಹುದ್ದೇಗೇರಿದ ಮೊದಲ ಏಶ್ಯನ್, ಮೊದಲ ಕಪ್ಪು ವರ್ಣೀಯ ಮಹಿಳೆ, ಮೊದಲ ಭಾರತ- ಅಮೆರಿಕನ್ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Thulasendrapuram, US vice-presidential elect Kamala Harris’s ancestral village in Tamil Nadu, is celebrating Diwali early. Villagers were in a festive mood, drawing rangolis in front of their houses and wishing Kamala success, as Biden clinched the US presidential election on Friday.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm