ಧಾರಾವಾಹಿ ಡಬ್ಬಿಂಗ್‌ ವೇಳೆಯೇ ಹೃದಯಾಘಾತ ; ಜೈಲರ್ ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ನಟ ನಿಧನ 

08-09-23 01:57 pm       HK News Desk   ದೇಶ - ವಿದೇಶ

ತಮಿಳಿನ ಖ್ಯಾತ ನಿರ್ದೇಶಕ ಹಾಗೂ ನಟ ಮಾರಿಮುತ್ತು ಇಂದು ಬೆಳಗ್ಗೆ ಹಠಾತ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 57ರ ಹರೆಯದ ಮಾರಿಮುತ್ತು ಕಣ್ಣುಮ್ ಕಣ್ಣುಮ್ ಮತ್ತು ಪುಲಿವಾಲ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಚೆನ್ನೈ, ಸೆ 07:  ತಮಿಳಿನ ಖ್ಯಾತ ನಿರ್ದೇಶಕ ಹಾಗೂ ನಟ ಮಾರಿಮುತ್ತು ಇಂದು ಬೆಳಗ್ಗೆ ಹಠಾತ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 57ರ ಹರೆಯದ ಮಾರಿಮುತ್ತು ಕಣ್ಣುಮ್ ಕಣ್ಣುಮ್ ಮತ್ತು ಪುಲಿವಾಲ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾದ ಜೈಲರ್ ಸಿನಿಮಾದಲ್ಲಿ ಖಳನಟನಾಗಿಯೂ ನಟಿಸಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ

ಎದುರ್ ನೀಚಲ್‌ ಧಾರಾವಾಹಿ ಡಬ್ಬಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾದರೂ, ಜೀವ ಉಳಿಯಲಿಲ್ಲ. ಜೈಲರ್‌ ಸಿನಿಮಾದಲ್ಲಿ ನಟಿಸಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ ಮಾರಿಮುತ್ತು ಅವರ ನಿಧನಕ್ಕೆ ತಮಿಳು ಸಿನಿಮಾ ಮಂದಿ ಕಂಬನಿ ಮಿಡಿದಿದ್ದಾರೆ.

Tamil actor-director Marimuthu passes away | Onmanorama

ಮಾರಿಮುತ್ತು ಎಂದಿನಂತೆ ಶುಕ್ರವಾರ ಬೆಳಗ್ಗೆ ಚೆನ್ನೈನ ಸ್ಟುಡಿಯೊದಲ್ಲಿ ತನ್ನ ಸಹನಟ ಕಮಲೇಶ್ ಜೊತೆಗೆ ಸೀರಿಯಲ್‌ ಡಬ್ಬಿಂಗ್‌ನಲ್ಲಿ ಭಾಗವಹಿಸಿದ್ದರು. ಡಬ್ಬಿಂಗ್‌ ವೇಳೆಯೇ ಸ್ಟುಡಿಯೋದಲ್ಲಿಯೇ ಹಠಾತ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ವಡಪಳನಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ನಿರ್ದೇಶಕರಾಗಿ ಮಿಂಚಲು ಸಾಧ್ಯವಾಗದ ಮಾರಿಮುತ್ತು ಹಲವು ಪ್ರಮುಖ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದಾದ ಬಳಿಕ ಸಿನಿಮಾದಲ್ಲಿ ನಟನೆಯ ಅವಕಾಶಗಳೂ ಸಿಕ್ಕವು. ಇತ್ತೀಚಿನ ದಿನಗಳಲ್ಲಿ ನಟನೆಯತ್ತಲೇ ಗಮನ ಹರಿಸಿದ್ದರು. ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಪೊಲೀಸ್ ಪಾತ್ರ, ಖಳನಟನಾಗಿಯೇ ಕಾಣಿಸಿಕೊಂಡಿದ್ದು ಹೆಚ್ಚು.

G Marimuthu died of a heart attack. The Tamil actor-director was seen in the recent Rajinikanth blockbuster Jailer. Film trade analyst and industry insider Ramesh Bala confirmed the news on X (earlier known as Twitter) on Friday, adding G Marimuthu was 57. He was known for his role in the Tamil television series Ethirneechal. He has also worked with filmmaker Mani Ratnam, among others, as an assistant director.