ಹಿಂದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ; ದೆಹಲಿ ಅಕ್ಷರಧಾಮ ದೇಗುಲ ಭೇಟಿ ಬಳಿಕ ಋಷಿ ಸುನಕ್ ಹೇಳಿಕೆ 

10-09-23 12:12 pm       HK News Desk   ದೇಶ - ವಿದೇಶ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. 

ನವದೆಹಲಿ, ಸೆ.10: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. 

ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಸುನಕ್ ಅವರು ದೆಹಲಿಗೆ ಆಗಮಿಸಿದ್ದಾರೆ. ಬ್ರಿಟನ್ ಪ್ರಧಾನಿಯಾದ ನಂತರ ರಿಷಿ ಸುನಕ್ ಅವರ ಮೊದಲ ಅಧಿಕೃತ ಭಾರತ ಭೇಟಿ ಇದಾಗಿದೆ. 

Delhi: ಹಿಂದೂ ಎನ್ನಲು ಹೆಮ್ಮೆಯಾಗುತ್ತಿದೆ; ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ರಿಷಿ ದಂಪತಿ

In Pics: Rishi Sunak, wife Akshata Murthy offer prayers at Akshardham Temple  | Latest News India - Hindustan Times

ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಹಿಂದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ತನ್ನ ದೆಹಲಿ ಭೇಟಿ ಮಹತ್ವದ್ದಾಗಿದೆ. ಸಮಯಾವಕಾಶ ಹೊಂದಿಸಿಕೊಂಡು ಇಲ್ಲಿನ ದೇಗುಲಗಳಿಗೆ ಭೇಟಿ ನೀಡುವ ಇಂಗಿತ ಇದೆ ಎಂದು ಹೇಳಿಕೊಂಡಿದ್ದಾರೆ.

G20 Summit: UK PM Sunak with his wife Akshata visit Swaminarayan Akshardham  temple in Delhi | Zee Business

On G20 visit, UK PM Rishi Sunak, wife Akshata Murthy offer prayers at Akshardham  Temple in Delhi | India News - The Indian Express

ದೇವಾಲಯದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಇದ್ದ ಸುನಕ್ ದಂಪತಿಗೆ ದೇವಾಲಯದ ಸುತ್ತ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಮೊನ್ನೆ ಶುಕ್ರವಾರ, ಸುನಕ್ ಅವರು ರಕ್ಷಾ ಬಂಧನ ಆಚರಿಸಿಕೊಂಡಿದ್ದರು. ಆದರೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಅವಕಾಶ ಸಿಗಲಿಲ್ಲ‌. ಆದ ಕಾರಣ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ 'ಅದನ್ನು ಸರಿದೂಗಿಸಲು' ಆಶಿಸಿದ್ದರು ಎಂದು ಹೇಳಲಾಗಿದೆ.

ರಿಷಿ ಸುನಕ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅಕ್ಷರಧಾಮ ದೇವಸ್ಥಾನದ ಪ್ರಮುಖರಾದ ಜ್ಯೋತೀಂದ್ರ ದವೆ, ಸುನಕ್ ಭೇಟಿ ವಿಶೇಷವಾಗಿತ್ತು. ತುಂಬ ಭಕ್ತಿಯಿಂದ ದೇವಸ್ಥಾನದಲ್ಲಿ ಆರತಿ, ಪೂಜೆ ನೆರವೇರಿಸಿದ್ದಾರೆ. ಅವರಿಗೆ ದೇವಸ್ಥಾನದ ಮಾದರಿಯನ್ನು ಗಿಫ್ಟ್ ನೀಡಿದ್ದೇವೆ, ಪ್ರತಿ ನಿಮಿಷವನ್ನೂ ಅವರಿಲ್ಲಿ ಆನಂದಿಸಿದ್ದಾರೆ ಎಂದರು..

Prime Minister of the United Kingdom (UK), Rishi Sunak, offered prayers at Akshardham Temple on Sunday morning. After offering prayers, Sunak left the Akshardham Temple premises to accompany world leaders at Rajghat.