ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ; ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಒಂದೇ ಹಂತ, ಛತ್ತೀಸ್ಗಢದಲ್ಲಿ ಎರಡು ಹಂತ, ಡಿ.3ರಂದು ಫಲಿತಾಂಶ 

09-10-23 05:52 pm       HK News Desk   ದೇಶ - ವಿದೇಶ

ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. 

ನವದೆಹಲಿ, ಅ.9: ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. 

ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ದಿನಾಂಕ ಪ್ರಕಟ ಮಾಡಿದ್ದಾರೆ. ಮಿಜೋರಾಂ ವಿಧಾನಸಭೆಗೆ ನವೆಂಬರ್‌ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.‌ ಛತ್ತೀಸ್‌ಗಢದಲ್ಲಿ ಎರಡು ಹಂತದಲ್ಲಿ ನವೆಂಬರ್‌ 7 ಹಾಗೂ 17 ರಂದು ನಡೆಯಲಿದೆ. ಮಧ್ಯಪ್ರದೇಶದಲ್ಲಿ ನವೆಂಬರ್‌ 17ರಂದು ಮತ್ತು ರಾಜಸ್ಥಾನದಲ್ಲಿ ನವೆಂಬರ್ 23 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ತೆಲಂಗಾಣದಲ್ಲಿ ನವೆಂಬರ್‌ 30 ರಂದು ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್‌ 3 ರಂದು ಪ್ರಕಟಗೊಳ್ಳಲಿದೆ.

MP, Rajasthan, Telangana, Chhattisgarh, Mizoram to go to polls between Nov  7-30 | Latest News India - Hindustan Times

Assembly Elections 2023 LIVE | EC announces schedule for five States - The  Hindu

ಒಟ್ಟು ಐದು ರಾಜ್ಯಗಳಲ್ಲಿ 679 ವಿಧಾನಸಭಾ ಕ್ಷೇತ್ರಗಳಿದ್ದು ನವೆಂಬರ್ ತಿಂಗಳಲ್ಲಿ ಚುನಾವಣೆ ಕಾವೇರಲಿದೆ. ಐದು ರಾಜ್ಯಗಳಲ್ಲಿ ಒಟ್ಟು 16.14 ಕೋಟಿ ಮತದಾರರು ಇದ್ದಾರೆ. ಮಿಜೋರಾಮ್‌ನಲ್ಲಿ 8.52 ಲಕ್ಷ, ಛತ್ತೀಸ್‌ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಹಾಗೂ ತೆಲಂಗಾಣದಲ್ಲಿ 3.17 ಕೋಟಿ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಐದೂ ರಾಜ್ಯಗಳಲ್ಲಿ 60.2 ಲಕ್ಷ ಹೊಸ ಮತದಾರರು ಇದ್ದಾರೆ. ಮುಂಬರುವ 5 ರಾಜ್ಯಗಳಲ್ಲಿ 7.8 ಕೋಟಿ ಮಹಿಳೆಯರು ಮತ ಚಲಾವಣೆ ಮಾಡಲಿದ್ದಾರೆ.

Chhattisgarh, Madhya Pradesh, Rajasthan, Telangana and Mizoram will go to polls on different days from November 7-30 and votes will be counted for the five States on December 3, the Election Commission of India (ECI) said on October 9, setting the stage for the 2024 Lok Sabha polls semi-finals.