ಅತ್ತಿಬೆಲೆ ಬೆನ್ನಲ್ಲೇ ತಮಿಳುನಾಡಿನಲ್ಲಿ ಎರಡು ಪಟಾಕಿ ಕಾರ್ಖಾನೆಗಳ ಸ್ಫೋಟ ; 10 ಮಂದಿ ಸಜೀವ ದಹನ, 15ಕ್ಕೂ ಅಧಿಕ ಕಾರ್ಮಿಕರಿಗೆ ಗಾಯ 

17-10-23 08:33 pm       HK News Desk   ದೇಶ - ವಿದೇಶ

ಪಟಾಕಿ ತಯಾರಿಕೆಗೆ ಖ್ಯಾತಿಯಾಗಿರುವ ತಮಿಳುನಾಡಿನ ಶಿವಕಾಶಿಯ ಎರಡು ಕಾರ್ಖಾನೆಗಳಲ್ಲಿ ಮಂಗಳವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಮಂದಿ ಸುಟ್ಟು ಕರಕಲಾಗಿದ್ದಾರೆ.

ಶಿವಕಾಶಿ, ಅ.17: ಪಟಾಕಿ ತಯಾರಿಕೆಗೆ ಖ್ಯಾತಿಯಾಗಿರುವ ತಮಿಳುನಾಡಿನ ಶಿವಕಾಶಿಯ ಎರಡು ಕಾರ್ಖಾನೆಗಳಲ್ಲಿ ಮಂಗಳವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಮಂದಿ ಸುಟ್ಟು ಕರಕಲಾಗಿದ್ದಾರೆ. 15ಕ್ಕೂ ಅಧಿಕ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿಜಯದಶಮಿ ಮತ್ತು ದೀಪಾವಳಿಯ ಸಂಭ್ರಮದ ಹೊತ್ತಲ್ಲೇ ದುರಂತ ಸಂಭವಿಸಿದೆ.

ವಿರುಧುನಗರ ಸಮೀಪದ ಶಿವಕಾಶಿಯಲ್ಲಿ ಎರಡು ಪ್ರತ್ಯೇಕ ಸ್ಫೋಟಗಳು ಸಂಭವಿಸಿವೆ. ಬೂದುಪಟ್ಟಿ ರೆಂಗಪಾಳ್ಯಂ ಪ್ರದೇಶದಲ್ಲಿರುವ ಕಾನಿಷ್ಕರ್ ಪಟಾಕಿ ಕಾರ್ಖಾನೆಯಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ 9 ಮಂದಿ ಬೆಂಕಿಗೆ ಆಹುತಿಯಾದರು. ಘಟನೆಯ ಪ್ರದೇಶ ಸುತ್ತ ದೊಡ್ಡ ಸ್ಫೋಟಕ ಸದ್ದು ಕೇಳಿಬಂದಿತು. ಬೆಂಕಿಗೆ ಕೆನ್ನಾಲಿಗೆಗೆ ಸಿಲುಕಿದ ಕೆಲ ಕಾರ್ಮಿಕರು ಸುಟ್ಟ ಗಾಯಕ್ಕೀಡಾಗಿದ್ದಾರೆ. ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

11 killed in blasts at two firecracker units in Tamil Nadu's Virudhunagar -  India Today

At least eight dead in two cracker-related fire accidents at Sivakasi,  Srivilliputtur of Virudhunagar district - The Hindu

11 killed in explosions at two firecracker units in Tamil Nadu- The New  Indian Express

ಇನ್ನೊಂದು ಸ್ಫೋಟವು ರೆಡ್ಡಿಪಟ್ಟಿ ಪ್ರದೇಶದಲ್ಲಿರುವ ಮುತ್ತು ವಿಜಯನ್ ಒಡೆತನದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿತು. ಇಲ್ಲಿ ಓರ್ವ ಕಾರ್ಮಿಕ ಬೆಂಕಿಗೆ ಬಲಿಯಾಗಿದ್ದಾನೆ. ಹಲವು ತೀವ್ರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಗ್ರಾಮಾಂತರದ ಆನೇಕಲ್‌ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿರುವ ಬಾಲಾಜಿ ಟ್ರೇಡರ್ಸ್‌ನಲ್ಲಿ ಅಕ್ಟೋಬರ್‌ 7ರಂದು ನಡೆದ ಅಗ್ನಿ ದುರಂತದಲ್ಲಿ 14 ಮಂದಿ ಮೃತಪಟ್ಟಿದ್ದರು. ಅತ್ತಿಬೆಲೆ ಬಾರ್ಡರ್ ಬಳಿ ಇರುವ ಶ್ರೀಬಾಲಾಜಿ ಟ್ರೇಡರ್ಸ್‌ ಮಾಲೀಕ ನವೀನ್‌ ರೆಡ್ಡಿ ಅನತಿ ಮೇರೆಗೆ ಸೇಲ್ಸ್ ಮ್ಯಾನ್ ಕೆಲಸಕ್ಕೆ ಬಂದಿದ್ದರು. ವಾಣಿಯಾಂಬಾಡಿಯಿಂದ 12 ಮಂದಿ, ಕಲ್ಲಕುರ್ಚಿಯಿಂದ 15 ಮಂದಿ ಜತೆಗೆ 9 ಮಂದಿ ಬಂದು ಕೆಲಸ ಮಾಡುತ್ತಿದ್ದರು. ಇವರೆಲ್ಲರು ಉಳಿದುಕೊಳ್ಳಲು ಪಟಾಕಿ ಅಂಗಡಿಯ ಮುಂಭಾಗವೇ ರೂಂವೊಂದನ್ನು ಮಾಡಿಕೊಟ್ಟಿದ್ದರು. ಸೇಲ್ಸ್ ಪರ್ಸನ್‌ಗೆ ಪ್ರತಿ ದಿನ 600 ರಿಂದ 700 ರೂಪಾಯಿ ಸಂಬಳ ನೀಡುತ್ತಿದ್ದರು.

In a major fire accident at least 10 lives including eight women workers, who were working in a private fireworks unit at Rengapalayam in Virudhunagar district were killed on October 17.