ಬ್ರೇಕಿಂಗ್ ನ್ಯೂಸ್
29-10-23 08:28 pm HK News Desk ದೇಶ - ವಿದೇಶ
ಚೆನ್ನೈ, ಅ.29: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಪ್ಯಾಲೆಸ್ತೀನ್ ಪರ ನಡೆದ ಪ್ರತಿಭಟನಾ ಸಭೆಯಲ್ಲಿ ಇಸ್ರೇಲ್ ಬಿಟ್ಟರೆ ಭಾರತವೇ ಮತ್ತೊಂದು ಭಯೋತ್ಪಾದಕ ರಾಷ್ಟ್ರ ಎಂಬುದಾಗಿ ಮೌಲ್ವಿಯೊಬ್ಬ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಅ.24ರಂದು ಕೊಯಂಬತ್ತೂರು ನಗರದ ಉಕ್ಕಡಂ ಎಂಬಲ್ಲಿ ಈ ಘಟನೆ ನಡೆದಿದ್ದು, ಅಲ್ ಜಮಾತ್ ಮತ್ತು ಇತರ ಇಸ್ಲಾಮಿಕ್ ಗುಂಪುಗಳು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಮಾವೇಶದಲ್ಲಿ ಮುಸ್ಲಿಂ ಇಮಾಂ ಆಗಿರುವ ಇಲ್ಯಾಸಿ ರಿಯಾಜಿ ಎನ್ನುವಾತ ಭಾರತವನ್ನು ಭಯೋತ್ಪಾದಕ ರಾಷ್ಟ್ರ ಎಂದು ಕರೆದಿದ್ದಾನೆ. ಹಾಗಿದ್ದರೂ, ತಮಿಳುನಾಡು ಸರಕಾರ ಮುಸ್ಲಿಮರ ಪರವಾಗಿ ನಿಂತಿದ್ದು, ಯಾವುದೇ ಪ್ರಕರಣ ದಾಖಲಿಸದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಜಗತ್ತಿನಲ್ಲಿ ಎರಡು ಭಯೋತ್ಪಾದಕ ರಾಷ್ಟ್ರಗಳಿವೆ. ಅದರಲ್ಲಿ ಇಸ್ರೇಲ್ ಮೊದಲಾಗಿದ್ದರೆ, ಎರಡನೇ ರಾಷ್ಟ್ರ ನಾವು ಬದುಕುತ್ತಿರುವಂಥದ್ದು. ನಾವದನ್ನು ಇಂಡಿಯಾ ಎಂದು ಹೇಳಲು ಬಯಸುವುದಿಲ್ಲ. ಇಂಡಿಯಾ ಎಂದರೆ ಯಾವತ್ತೂ ಶಾಂತಿಯನ್ನು ಹೇಳಿಕೊಂಡು ಬಂದಿರುವ ರಾಷ್ಟ್ರ. ನೆಹರು ಕಾಲದಿಂದ ಮನಮೋಹನ್ ಸಿಂಗ್ ವರೆಗೂ ನಮ್ಮಲ್ಲಿ ಪ್ರಧಾನಿ ಆಗಿದ್ದವರು ಶಾಂತಿಯನ್ನೇ ಪಾಲಿಸಿದ್ದರು. ಆ ಪೈಕಿ ಯಾರು ಕೂಡ ಇಸ್ರೇಲ್ ಪ್ರವಾಸ ಹೋಗಿರಲಿಲ್ಲ. ಮೋದಿ ಮಾತ್ರ ಇಸ್ರೇಲ್ ಪ್ರವಾಸ ಹೋಗಿ ಅಪವಾದ ಆಗಿದ್ದಾರೆ. ಆಗ ಇಸ್ರೇಲ್ ಪ್ರಧಾನಿ ನೆತನ್ಯಾಹು, ನಾವು ಭಾರತದ ಪ್ರಧಾನಿಯ ಆಗಮನಕ್ಕಾಗಿ 70 ವರ್ಷದಿಂದ ಕಾಯುತ್ತಿದ್ದೆವು ಎಂದು ಹೇಳುತ್ತಾರೆ. 70 ವರ್ಷದ ಇಸ್ರೇಲ್ ಕಾಯುವಿಕೆಯನ್ನು ಮೋದಿ ಪೂರ್ತಿಗೊಳಿಸಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಇಲ್ಯಾಜಿ ಹೇಳುವ ವಿಡಿಯೋ ವೈರಲ್ ಆಗಿದೆ.
ಸಮಾವೇಶದಲ್ಲಿ ಭಾರತವು ಇಸ್ರೇಲ್ ಪರ ನಿಂತಿದ್ದನ್ನು ಖಂಡಿಸಿ, ಸ್ಥಳದಲ್ಲಿ ಸೇರಿದ್ದ ಸಾವಿರಾರು ಮಂದಿ ಪ್ಯಾಲೆಸ್ತೀನ್ ಪರ ಘೋಷಣೆ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಅಲ್ ಜಮಾತ್ ಫೆಡರೇಶನ್ ಕೋಆರ್ಡಿನೇಟರ್ ಎ.ಸಾದಿಕ್ ಆಲಿ, ಕೋಆರ್ಟಿನೇಟರ್ ಇನಾಯತುಲ್ಲಾ, ಎಸ್ಡಿಪಿಐ ರಾಜ್ಯ ಸೆಕ್ರಟರಿ ರಾಜಾ ಹುಸೇನ್, ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಝಗಂ ರಾಜ್ಯ ವಕ್ತಾರ ರೆಕ್ಸ್ ರಫಿ ಮತ್ತಿತರ ಮುಸ್ಲಿಂ ಸಂಘಟನೆಗಳ ನಾಯಕರು ಪಾಲ್ಗೊಂಡು ಪ್ಯಾಲೆಸ್ತೀನ್ ಪರವಾಗಿ ಮಾತನಾಡಿದ್ದಾರೆ. ಇಂಕ್ವಿಲಾಬ್ ಇಂಕ್ವಿಲಾಬ್, ಪ್ಯಾಲೆಸ್ತೀನ್ ಇಂಕ್ವಿಲಾಬ್, ಲಾಲ್ ಸಲಾಂ ಅಸ್ಸಲಾಂ ಇಂತಿಫಾದ್ ಇಂಕ್ವಿಲಾಬ್ ರೀತಿಯ ಘೋಷಣೆಗಳನ್ನು ಹಾಕಿದ್ದಾರೆ. ಕಳೆದ ಬಾರಿ ದೆಹಲಿ ಜೆಎನ್ ಯು ಯುನಿವರ್ಸಿಟಿಯಲ್ಲೂ ಇದೇ ರೀತಿಯ ಘೋಷಣೆಗಳನ್ನು ಹಾಕಲಾಗಿತ್ತು. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮತ್ತು ಪುತ್ರ ಸಚಿವ ಉದಯನಿಧಿ ಸ್ಟಾಲಿನ್ ಬಹಿರಂಗವಾಗಿಯೇ ಪ್ಯಾಲೆಸ್ತೀನ್ ಮತ್ತು ಹಮಾಸ್ ಉಗ್ರರ ಪರ ನಿಂತಿದ್ದು ಚುನಾವಣೆ ಕಾರಣಕ್ಕೆ ಮುಸ್ಲಿಮರ ಪರ ತಾವಿದ್ದೇವೆಂದು ಹೇಳುತ್ತಿದ್ದಾರೆ.
Islamist leader #IlyazRiyaji spews venom against India calls #India and #Israel #terrorist state in #Tamilnadu pic.twitter.com/MW6ogUIUCX
— Headline Karnataka (@hknewsonline) October 29, 2023
The magnitude of the minority appeasement is clearly visible when the Tamil Nadu government failed to take any action against those who branded India as one of the two terrorist nations in the world”.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 04:21 pm
HK News Staffer
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm