ಅಮೆಜಾನ್ ಅರಣ್ಯದಲ್ಲಿ ವಿಮಾನ ಪತನ ; ಮಗು ಸೇರಿ 10 ಮಂದಿ ಪ್ರಯಾಣಿಕರ ಸಾವು 

30-10-23 01:23 pm       HK News Desk   ದೇಶ - ವಿದೇಶ

ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ 12 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಪೈಲಟ್‌ಗಳು ಸೇರಿದ್ದಾರೆ.

ರಿಯೊ ಬ್ರಾಂಕೊ, ಅ 30: ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ 12 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಪೈಲಟ್‌ಗಳು ಸೇರಿದ್ದಾರೆ. ವಿಮಾನದಲ್ಲಿ ಶಿಶು ಸೇರಿದಂತೆ 10 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ.

ಸಿಂಗಲ್​ - ಎಂಜಿನ್ ಸೆಸ್ನಾ ಕಾರವಾನ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ರಿಯೊ ಬ್ರಾಂಕೊದ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು ಎಂದು ಎಕ್ರೆ​ ರಾಜ್ಯ ಸರ್ಕಾರ ಘೋಷಿಸಿತು. ವಿಮಾನ ಪತನಗೊಂಡ ಸ್ಥಳದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

Tragic Plane Crash in Rio Branco, Brazil: 12 Lives Lost

Twelve dead after plane crashes in Brazil's Acre state | Mint

12 people including an infant killed in plane crash in Brazil's Amazon  Region

ರಾಜ್ಯದ ರಾಜಧಾನಿ ರಿಯೊ ಬ್ರಾಂಕೊದ ಮುಖ್ಯ ವಿಮಾನ ನಿಲ್ದಾಣದ ಬಳಿ ವಿಮಾನವು ಪತನಗೊಂಡಿದೆ ಎಂದು ಎಕ್ರೆ ಗವರ್ನರ್ ಗ್ಲಾಡ್ಸನ್ ಕ್ಯಾಮೆಲಿ ಅವರ ಪತ್ರಿಕಾ ಕಚೇರಿ ತಿಳಿಸಿದೆ. ವಿಮಾನ ಅಪಘಾತದ ನಂತರ ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಕಾಡಿನಲ್ಲಿ ಬೆಂಕಿ ಹೊತ್ತಿರುವುದು ಕಾಣಬಹುದಾಗಿದೆ.

Twelve people including a baby, aboard a small aircraft died following a crash in Brazil’s Amazon region on Sunday morning. As per the statement of government of the northwestern state of Acre, the plane, a single engine Cessna Caravan went down near the main airport in Rio Branco, the capital of Acre state, shortly after taking off. The statement further said that ten passengers, including nine adults and an infant, as well as the pilot and co-pilot died on spot.