ಬಹರೈನ್‌ನ ನೂತನ ಪ್ರಧಾನಿಯಾಗಿ ಯುವರಾಜ ಹಾಮದ್ ಅಲ್-ಖಲೀಫ

13-11-20 11:19 am       Headline Karnataka News Network   ದೇಶ - ವಿದೇಶ

ಬಹರೈನ್‌ನ ಯುವರಾಜ ಶೇಖ್ ಸಲ್ಮಾನ್ ಬಿನ್ ಹಾಮದ್ ಅಲ್-ಖಲೀಫರನ್ನು ದೇಶದ ನೂತನ ಪ್ರಧಾನಿಯಾಗಿ ಬುಧವಾರ ನೇಮಿಸಲಾಗಿದೆ.

ಮನಾಮ (ಬಹರೈನ್), ನ. 12: ಬಹರೈನ್‌ನ ಯುವರಾಜ ಶೇಖ್ ಸಲ್ಮಾನ್ ಬಿನ್ ಹಾಮದ್ ಅಲ್-ಖಲೀಫರನ್ನು ದೇಶದ ನೂತನ ಪ್ರಧಾನಿಯಾಗಿ ಬುಧವಾರ ನೇಮಿಸಲಾಗಿದೆ. 1971ರಿಂದಲೂ ದೇಶದ ಪ್ರಧಾನಿಯಾಗಿದ್ದ, ಅವರ ಅಜ್ಜ ರಾಜಕುಮಾರ ಖಲೀಫ ಬಿನ್ ಸಲ್ಮಾನ್ ಅಲ್-ಖಲೀಫರ ನಿಧನದ ಬಳಿಕ ನೂತನ ಪ್ರಧಾನಿಯ ನೇಮಕ ನಡೆದಿದೆ.

ಖಲೀಫ ಬಿನ್ ಸಲ್ಮಾನ್ ಅಲ್-ಖಲೀಫ ಜಗತ್ತಿನ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಪ್ರಧಾನಿಯಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 84 ವರ್ಷದ ದಿವಂಗತ ಪ್ರಧಾನಿ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.

ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಶಿಕ್ಷಣ ಪಡೆದಿರುವ ನೂತನ ಪ್ರಧಾನಿ ಶೇಖ್ ಸಲ್ಮಾನ್ ಬಿನ್ ಹಾಮದ್ ಅಲ್-ಖಲೀಫ ಪ್ರಥಮ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಅವರು ಬಹರೈನ್ ರಕ್ಷಣಾ ಪಡೆಯ ಉಪ ಮುಖ್ಯ ಸೇನಾಪತಿಯಾಗಿದ್ದಾರೆ.

Bahrain's crown prince, Sheikh Salman bin Hamad al-Khalifa, was appointed prime minister on Wednesday after the death of his great uncle, who had held the post since independence in 1971.