ಬ್ರೇಕಿಂಗ್ ನ್ಯೂಸ್
09-11-23 11:05 am HK News Desk ದೇಶ - ವಿದೇಶ
ತಿರುವನಂತಪುರ, ನ 09: ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಪಿ. ಬಾಲಸುಬ್ರಮಣಿಯನ್ ಮೆನನ್ ಎನ್ನುವ ವ್ಯಕ್ತಿಯೊಬ್ಬರು ತಮ್ಮ 97ನೇ ವಯಸ್ಸಿನಲ್ಲಿಯೂ ವಕೀಲರಾಗಿ ಕೆಲಸ ಮಾಡುವ ಮೂಲಕ ‘ದೀರ್ಘಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಪುರುಷ’ ಎನ್ನುವ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
2023ರ ಸೆಪ್ಟೆಂಬರ್ 11 ಕ್ಕೆ ಬಾಲಸುಬ್ರಮಣಿಯನ್ ಅವರು ವಕೀಲರಾಗಿ ವೃತ್ತಿ ಆರಂಭಿಸಿ ಬರೋಬ್ಬರಿ 73 ವರ್ಷ 60 ದಿನಗಳಾಗುತ್ತವೆ ಎಂದು ಗಿನ್ನಿಸ್ ವಿಶ್ವ ದಾಖಲೆ ತಿಳಿಸಿದೆ.
97 ವರ್ಷ ವಯಸ್ಸಾದರೂ ಬಾಲಸುಬ್ರಮಣಿಯನ್ ಅವರು ವೃತ್ತಿ ಜೀವನದಲ್ಲಿ ಸಕ್ರಿಯರಾಗಿದ್ದು, ಪ್ರತಿದಿನ ಕಚೇರಿಗೆ ಮತ್ತು ನ್ಯಾಯಾಲಯಕ್ಕೆ ತೆರಳಿ ಕಕ್ಷಿದಾರರನ್ನು ಭೇಟಿ ಮಾಡುತ್ತಾರೆ.
‘ಕಕ್ಷಿದಾರರು ನನ್ನ ಬಳಿ ಪ್ರಕರಣದ ಪ್ರಸ್ತಾವ ಇಟ್ಟಿದ್ದಾರೆ ಎಂದರೆ, ಅವರಿಗೆ ನನ್ನ ಮೇಲೆ ನಂಬಿಕೆ ಇದೆ ಎಂದರ್ಥ, ಹೀಗಾಗಿ ಅವರಿಗೆ ಎಷ್ಟು ನೆರವಾಗಲು ಸಾಧ್ಯವೋ ಅಷ್ಟು ಮಾಡುತ್ತೇನೆ’ ಎನ್ನುತ್ತಾರೆ.
ಪಾಲಕ್ಕಾಡ್ನ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಇವರು, ನ್ಯಾಯಾಲಯಗಳಲ್ಲಿ ಹೆಚ್ಚು ವಾದಿಸುವುದರಲ್ಲಿ ನಂಬಿಕೆಯಿಲ್ಲ ಎನ್ನುತ್ತಾರೆ. ಅಲ್ಲದೆ ಅವರ ವಾದ ಮತ್ತು ಅಡ್ಡ ಪರೀಕ್ಷೆಗಳು ಕೂಡ ಯಾವಾಗಲೂ ಚಿಕ್ಕದಾಗಿರುತ್ತವೆ.
ಕಾನೂನಿನಲ್ಲಿ ಪದವಿ ಪಡೆದ ಬಳಿಕ ಬಾಲಸುಬ್ರಮಣಿಯನ್ ಅವರು 1950ರಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ‘ನೀವು ಯಾವಾಗ ನಿವೃತ್ತಿಯಾಗುತ್ತೀರಿ? ಎಂದು ಕೇಳಿದರೆ, ‘ಎಲ್ಲಿಯವರೆಗೆ ನನ್ನ ಆರೋಗ್ಯ ಸಹಕರಿಸುವುದೋ ಅಲ್ಲಿಯವರೆಗೆ ನನ್ನ ಕಕ್ಷಿದಾರರನ್ನು ಭೇಟಿಯಾಗುತ್ತೇನೆ’ ಎನ್ನುತ್ತಾರೆ.
Thiruvananthapuram: P Balasubramanian Menon, a distinguished lawyer in northern Palakkad district of Kerala, has achieved a significant milestone in the legal field. At the age of 97, Menon has secured a place in the Guinness Book of World Records as the longest serving advocate with an impressive career spanning 73 years and 60 days.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm