ಬ್ರೇಕಿಂಗ್ ನ್ಯೂಸ್
12-11-23 04:23 pm Giridhar Shetty, Mangaluru Corresopondent ದೇಶ - ವಿದೇಶ
ಕಾಸರಗೋಡು, ನ.12: ಅನಂತಪುರ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಸುದ್ದಿ ಕೇಳಿ ಭಾರೀ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಭಾನುವಾರ ದೀಪಾವಳಿ ದಿವಸವೇ ಬೆಳಗ್ಗಿನಿಂದಲೇ ಭಕ್ತರು ತಂಡೋಪತಂಡವಾಗಿ ಬರತೊಡಗಿದ್ದು, ಮತ್ತೊಂದು ದೇವರ ಮೊಸಳೆ ಬಂದಿದೆಯೇ ಎಂದು ಅಚ್ಚರಿಯಿಂದ ಕೆರೆಗೆ ಇಣುಕಲು ಆರಂಭಿಸಿದ್ದಾರೆ.
ದೇವರ ಮೊಸಳೆಯೆಂದೇ ಖ್ಯಾತಿ ಎತ್ತಿದ್ದ ಬಬಿಯಾ ಒಂದು ವರ್ಷದ ಹಿಂದೆ 2022ರ ಅಕ್ಟೋಬರ್ 9ರಂದು ಇಹಲೋಕ ತ್ಯಜಿಸಿತ್ತು. ದೇವಸ್ಥಾನದ ಧಾರ್ಮಿಕ ವಿಧಿಗಳ ಮೂಲಕ ಬಬಿಯಾಳನ್ನು ಅಂತ್ಯಕ್ರಿಯೆ ಮಾಡಲಾಗಿತ್ತು. ಆನಂತರ, ಜ್ಯೋತಿಷ್ಯ ವಿಜ್ಞಾನದಲ್ಲಿ ತಿಳಿದು ಬಂದ ಪ್ರಕಾರ, ದೇವಸ್ಥಾನದ ಕೆರೆಗೆ ಅಂತಹುದೇ ಮೊಸಳೆ ಬರಲಿದೆ ಎಂದು ಹೇಳಲಾಗಿತ್ತು. ಅದರಂತೆ, ಇತ್ತೀಚೆಗೆ ದೇಗುಲದ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡ ಬಗ್ಗೆ ವದಂತಿ ಹಬ್ಬಿತ್ತು. ಬೇಕಲ ಮೂಲದ ಯುವಕನೊಬ್ಬ ಬಂದಿದ್ದಾಗ ಮೊದಲ ಬಾರಿಗೆ ಮೊಸಳೆ ಕಂಡಿದ್ದಾಗಿ ಹೇಳಿದ್ದ. ಆನಂತರ, ಕಾಞಂಗಾಡಿನ ಕುಟುಂಬವೊಂದು ಬಂದಿದ್ದಾಗ, ಮೊಸಳೆಯನ್ನು ಕಂಡಿದ್ದರಂತೆ.
ಈ ವಿಷಯ ಅರಿತ ದೇವಸ್ಥಾನದ ಸಿಬಂದಿ ಶನಿವಾರ ಮಧ್ಯಾಹ್ನ ಗಮನಿಸಿದಾಗ, ಮೊದಲ ಬಾರಿಗೆ ಮೊಸಳೆ ದರ್ಶನವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಮಹಾಲಿಂಗೇಶ್ವರ ಭಟ್, ನ.7ರಂದು ಮೊದಲ ಬಾರಿಗೆ ಕಾಞಂಗಾಡಿನ ಕುಟುಂಬ ಮೊಸಳೆ ಕಂಡಿದ್ದಾಗಿ ಹೇಳಿದ್ದರು. ಆದರೆ, ನಾವು ಅದನ್ನು ನಂಬಿರಲಿಲ್ಲ. ನಾವು ನೋಡಿರಲೂ ಇಲ್ಲ. ನಿನ್ನೆ ದಿವಸ ಕಾಞಂಗಾಡಿನ ಕುಟುಂಬ ದೇವಸ್ಥಾನಕ್ಕೆ ಬಂದಿದ್ದು ಮತ್ತೆ ಮೊಸಳೆ ಗೋಚರಿಸಿದೆ. ಆ ಸಂದರ್ಭದಲ್ಲಿ ನಾವು, ಅರ್ಚಕರೆಲ್ಲ ನೋಡಿದ್ದೇವೆ. ದೇವಸ್ಥಾನದ ಐತಿಹ್ಯದಂತೆ ಮತ್ತೆ ಮೊಸಳೆ ಪ್ರತ್ಯಕ್ಷವಾಗಿರುವುದು ಕಂಡು ನಾವೆಲ್ಲ ಪುಳಕಿತರಾಗಿದ್ದೇವೆ ಎಂದರು.
ಈ ಹಿಂದೆ ಇದ್ದ ಬಬಿಯಾ ಹೆಸರಿನ ಮೊಸಳೆ ಪೂರ್ತಿ ಸಸ್ಯಾಹಾರಿ ಎನ್ನುವಂತೆ ಇಲ್ಲಿ ಜೀವಿಸಿತ್ತು. ಸುಮಾರು 70 ವರ್ಷಗಳಿಂದಲೂ ಇಲ್ಲಿತ್ತು. ಕೆರೆಯಲ್ಲಿ ಇಷ್ಟೊಂದು ಮೀನುಗಳಿದ್ದರೂ, ಅದನ್ನು ತಿಂದು ಮುಗಿಸಿದ್ದಿರಲಿಲ್ಲ. ಅದು ದೇಗುಲದ ಅಂಗಣಕ್ಕೆ ಬಂದರೂ ಯಾರಿಗೂ ಹಾನಿ ಮಾಡಿದ್ದಿಲ್ಲ. ಸಾಮಾನ್ಯವಾಗಿ ಮೊಸಳೆ ಕ್ರೂರ ಪ್ರಾಣಿಯಾಗಿದ್ದರೂ, ದೇವರ ಮೊಸಳೆ ಯಾರಿಗೂ ತೊಂದರೆ ಮಾಡಿಲ್ಲ. ಇಲ್ಲಿದ್ದ ಮೊಸಳೆಯನ್ನು ಬಬಿಯಾ ಎಂದು ಕರೆದರೆ ಮೇಲೆ ಬಂದು ಮುಖ ಕಾಣಿಸಿ ಹಿಂತಿರುಗುತ್ತಿತ್ತು. ಇದೀಗ ಮತ್ತೆ ಅಂಥದ್ದೇ ಜಾತಿಯ ಮೊಸಳೆ ಕಾಣಿಸಿಕೊಂಡಿದ್ದು, ನಾವು ವನ್ಯಜೀವಿ ಇಲಾಖೆ ಮತ್ತು ಅರಣ್ಯ ವಿಭಾಗಕ್ಕೆ ಮಾಹಿತಿ ನೀಡಿದ್ದೇವೆ ಎಂದು ಮಹಾಲಿಂಗೇಶ್ವರ ಭಟ್ ತಿಳಿಸಿದ್ದಾರೆ.
ದೇವಸ್ಥಾನ ಕಮಿಟಿ ಹಾಲಿ ಅಧ್ಯಕ್ಷ ಉದಯ ಕುಮಾರ್ ಗಟ್ಟಿ ಪ್ರತಿಕ್ರಿಯಿಸಿ, ನಾವು ಈ ಬಗ್ಗೆ ದೇವಸ್ಥಾನಂ ಬೋರ್ಡ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರ ನಿರ್ದೇಶನದ ಪ್ರಕಾರ ನಡೆದುಕೊಳ್ಳುತ್ತೇವೆ. ಅನಂತಪುರ ದೇವಸ್ಥಾನ ಸರ್ಕಾರಕ್ಕೆ ಸೇರಿದ್ದಾಗಿದ್ದು, ಹಿಂದಿನ ರೀತಿಯದ್ದೇ ಮೊಸಳೆ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದೇವೆ. ಪಿಲಿಕುಳದ ಅಧಿಕಾರಿಗಳು ಕೂಡ ಮೊಸಳೆಯ ಚಿತ್ರ ಗಮನಿಸಿ, ಹಿಂದಿನ ಬಬಿಯಾ ಜಾತಿಯದ್ದೇ ಮೊಸಳೆ ಎಂಬುದನ್ನು ದೃಢಪಡಿಸಿದ್ದಾರೆ ಎಂದರು.
ಭಾನುವಾರ ಕರ್ನಾಟಕ ಗಡಿಭಾಗ ಮತ್ತು ಕೇರಳದ ಕಣ್ಣೂರು, ಕಾಸರಗೋಡು, ಬೇಕಲ ಭಾಗದಿಂದ ಹಲವಾರು ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಒಂದು ವರ್ಷದಿಂದ ಮೊಸಳೆ ಇಲ್ಲದೆ ಭಕ್ತರ ಸಂದಣಿಯೂ ಕಡಿಮೆಯಿತ್ತು. ಆನಂತರ ಈಗಲೇ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಎಂದು ಹೇಳುತ್ತಾರೆ, ಸ್ಥಳೀಯರು. ಭಾನುವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೂ ಬಹಳಷ್ಟು ಜನರು ಮೊಸಳೆ ಕಾಣಿಸುತ್ತಾ ಎಂದು ಕೆರೆಯ ಸುತ್ತ ಇಣುಕುತ್ತಿದ್ದರೂ, ಯಾರ ಕಣ್ಣಿಗೂ ಕಂಡಿರಲಿಲ್ಲ. ಇಬ್ಬರು ಯುವಕರು ಮಾತ್ರ ಬೆಳಗ್ಗೆ 9 ಗಂಟೆ ವೇಳೆಗೆ ತಾವು ಕೆರೆಯ ಮಧ್ಯದಲ್ಲೇ ನೋಡಿದೆವು ಎಂದು ಹೇಳುತ್ತಿದ್ದಂತೆ, ಮೊಸಳೆ ಅಲ್ಲಿಂದ ಮರೆಯಾಗಿತ್ತು. ಜನ ಹೆಚ್ಚು ಸೇರಿದರೆ ಮೊಸಳೆ ಕಾಣಿಸುವುದಿಲ್ಲವಂತೆ. ಸೈಲಂಟ್ ಇದ್ದಾಗ ಮಾತ್ರ ಮೊಸಳೆ ನೀರಿನ ಮೇಲ್ಭಾಗಕ್ಕೆ ಬರುವುದಂತೆ ಎಂದು ಅಲ್ಲಿನ ಜನ ಹೇಳುತ್ತಿದ್ದರು.
People throng to see second crocodile spotted at Ananthapura Lake Temple in Kasaragod. Little over a year after the demise of the revered crocodile ‘Babiya’, another one has been sighted in the lake at Sree Ananthapadmanabha Swamy Temple here. Devotees expressed surprise at this unexpected occurrence.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 08:20 pm
Mangalore Correspondent
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am