ಬಿಜೆಪಿ ರಾಜ್ಯ ಉಸ್ತುವಾರಿಗಳ ನೇಮಕ ; ಸಿಟಿ ರವಿಗೆ ತಮಿಳುನಾಡು ಹೊಣೆ, ಮುರಲೀಧರ್ ರಾವ್ ಗೆ ಮಧ್ಯಪ್ರದೇಶ 

14-11-20 01:54 pm       Headline Karnataka News Network   ದೇಶ - ವಿದೇಶ

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ ರಾಷ್ಟ್ರೀಯ ಪದಾಧಿಕಾರಿ ಹುದ್ದೆಗಳಿಗೆ ಕೆಲವು ಹೊಸ ನೇಮಕಾತಿಗಳನ್ನು ಮಾಡಿದ್ದಾರೆ. 

ನವದೆಹಲಿ, ನವೆಂಬರ್ 14: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ ರಾಷ್ಟ್ರೀಯ ಪದಾಧಿಕಾರಿ ಹುದ್ದೆಗಳಿಗೆ ಕೆಲವು ಹೊಸ ನೇಮಕಾತಿಗಳನ್ನು ಮಾಡಿದ್ದಾರೆ. 

ಇತ್ತೀಚೆಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದ್ದ ಪಿ. ಮುರಳೀಧರ್ ರಾವ್ ಅವರನ್ನು ಮಧ್ಯಪ್ರದೇಶದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಹೊಸತಾಗಿ ನೇಮಕಗೊಂಡಿದ್ದ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್ ಅವರನ್ನು ಜಮ್ಮು ಕಾಶ್ಮೀರ, ಲಡಾಖ್ ಹಾಗೂ ತೆಲಂಗಾಣ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಕರ್ನಾಟಕದ ಸಿಟಿ ರವಿ ಅವರಿಗೆ ಮಹಾರಾಷ್ಟ್ರ, ಗೋವಾ ಹಾಗೂ ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ತಮಿಳುನಾಡಿನ ಪಕ್ಷದ ಉಸ್ತುವಾರಿ ವಹಿಸಲಾಗಿದೆ. ಡಿ. ಪುರಂದೇಶ್ವರಿ ಅವರಿಗೆ ಛತ್ತೀಸಗಢ ಮತ್ತು ಒಡಿಶಾ ಜವಾಬ್ದಾರಿ ನೀಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಅವರಿಗೆ ದಿಲ್ಲಿ ಹಾಗೂ ಚುನಾವಣೆ ನಡೆಯಲಿರುವ ಅಸ್ಸಾಂ ಜವಾಬ್ದಾರಿ ವಹಿಸಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಪೈಕಿ ದಲಿತ ನಾಯಕರಾಗಿರುವ ದುಷ್ಯಂತ್ ಕುಮಾರ್ ಗೌತಮ್ ಅವರಿಗೆ ಪಂಜಾಬ್, ಚಂಡೀಗಢ ಮತ್ತು ಉತ್ತರಾಖಂಡದ ಜವಾಬ್ದಾರಿ ನೀಡಲಾಗಿದೆ.

ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಬಿಜೆಪಿ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಉಸ್ತುವಾರಿಯನ್ನಾಗಿ ಮಾಡಲಾಗಿದೆ.  ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದ  ಬಿಜೆಪಿ ಉಸ್ತುವಾರಿಯಾಗಿ ಕೈಲಾಶ್ ವಿಜಯ್ ವರ್ಗಿಯಾ ಅವರನ್ನು ಉಳಿಸಿಕೊಳ್ಳಲಾಗಿದೆ.

BJP leader Baijayant Panda has been made in charge of Assam and Delhi. Meanwhile, C.T Ravi - ex-Karnataka minister and the national general secretary has been given the leadership of three states - Goa, Maharashtra, and the crucial poll-bound Tamil Nadu.