ಬ್ರೇಕಿಂಗ್ ನ್ಯೂಸ್
25-11-23 01:16 pm HK News Desk ದೇಶ - ವಿದೇಶ
ಲಕ್ನೋ, ನ.25: ಹಲಾಲ್ ಪ್ರಮಾಣಪತ್ರ, ಏಜನ್ಸಿಗಳಿಗೆ ಮತ್ತು ಅಂತಹ ಆಹಾರ ಪದಾರ್ಥಗಳಿಗೆ ಉತ್ತರ ಪ್ರದೇಶ ಸರ್ಕಾರ ನಿಷೇಧ ವಿಧಿಸಿದ ಕ್ರಮವನ್ನು ಮುಸ್ಲಿಂ ಧಾರ್ಮಿಕ ಮುಖಂಡರು ಸ್ವಾಗತಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಬರೇಲಿ ನಗರದಲ್ಲಿ ಇರುವ ಆಲಾ ಹಜರತ್ ದರ್ಗಾದ ಮೌಲಾನಾ ಶಹಾಬುದ್ದೀನ್ ಉತ್ತರ ಪ್ರದೇಶ ಸರ್ಕಾರದ ನಿಷೇಧ ಕ್ರಮ ಸರಿ ಎಂದಿದ್ದಾರೆ. ಆಲಾ ಹಜರತ್ ದರ್ಗಾಗೆ ಉತ್ತರ ಪ್ರದೇಶ ಮಾತ್ರವಲ್ಲ, ದೇಶಾದ್ಯಂತ ಅಪಾರ ಸಂಖ್ಯೆಯ ಅನುಯಾಯಿಗಳಿದ್ದು ದರ್ಗಾದ ಮುಖ್ಯಸ್ಥರೇ ಸರ್ಕಾರದ ಕ್ರಮವನ್ನು ಸಮರ್ಥಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹಲಾಲ್ ಪ್ರಮಾಣ ಪತ್ರದ ಮುದ್ರೆಯೊಂದಿಗೆ ಆಹಾರ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟದ ಮೇಲೆ ನಿರ್ಬಂಧ ವಿಧಿಸಿ ಆದೇಶ ಮಾಡಿದೆ. ಸರಕಾರದ ಕ್ರಮವನ್ನು ಮೌಲಾನಾ ಅವರು ಸಮರ್ಥಿಸಿಕೊಂಡಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಹಲಾಲ್ ಪ್ರಮಾಣ ಪತ್ರವು ಷರಿಯಾ ನಿಯಮಾವಳಿಗಳನ್ನು ಪೂರ್ಣಗೊಳಿಸೋದಿಲ್ಲ ಎಂದು ಮೌಲಾನಾ ಶಹಾಬುದ್ದೀನ್ ಅವರು ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಮೌಲಾನಾ ಅವರು, ಹಲಾಲ್ ಪ್ರಮಾಣ ಪತ್ರ ಅನ್ನೋದು ಕೇವಲ ಮಾರುಕಟ್ಟೆ ತಂತ್ರಗಾರಿಕೆ. ಹಲಾಲ್ ಪ್ರಮಾಣ ಪತ್ರ ಮುಂದಿಟ್ಟು ತಮ್ಮ ಉತ್ಪನ್ನಗಳ ಮಾರಾಟ ಹೆಚ್ಚಿಸಿಕೊಳ್ಳುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಲಾಲ್ ಪ್ರಮಾಣ ಪತ್ರವನ್ನು ಉತ್ಪನ್ನಗಳ ಮೇಲೆ ಮುದ್ರಿಸಿ ದಂಧೆಕೋರರು ಹಣ ಮಾಡುತ್ತಿದ್ದಾರೆ. ಈ ತಂತ್ರಗಾರಿಕೆ ಮೂಲಕ ಅಲ್ಪಸಂಖ್ಯಾತರ ಭಾವನೆಗಳ ಜೊತೆ ಆಟವಾಡಿ ಅವರಿಗೆ ಮೋಸ ಮಾಡಲಾಗುತ್ತಿದೆ ಎಂದು ಮೌಲಾನಾ ಶಹಾಬುದ್ದೀನ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ. ಹಲಾಲ್ ಪ್ರಮಾಣ ಪತ್ರವನ್ನು ಸಾಮಾನ್ಯವಾಗಿ ಮಾಂಸಹಾರ ಉತ್ಪನ್ನಗಳಿಗೆ ನೀಡಲಾಗುತ್ತದೆ. ಆದರೆ ಕೆಲವರು ಹಲಾಲ್ ಚಿಹ್ನೆಯನ್ನು ಜೇನು ತುಪ್ಪ, ಬಿಸ್ಕೇಟ್, ತರಕಾರಿ ಹಾಗೂ ಇನ್ನಿತರ ವಸ್ತುಗಳ ಮೇಲೂ ಮುದ್ರಿಸುತ್ತಿದ್ದಾರೆ. ಇದು ಖಡಾ ಖಂಡಿತವಾಗಿ ತಪ್ಪು ಎಂದು ಮೌಲಾನಾ ಅವರು ಹೇಳಿದ್ದಾರೆ.
Maulana Shahabuddin welcomed Yogi Adityanath government’s decision to ban halal products in Uttar Pradesh. Maulana Shahabuddin is the head priest of Ala Hazrat Dargah in Bareilly, UP. Maulana Shahabuddin says that Halar certification is a business trick and it is not in compliance with Sharia law.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm