Karachi fire mall: ಕರಾಚಿ ; ಶಾಪಿಂಗ್ ಮಾಲ್‌ನಲ್ಲಿ ಅಗ್ನಿ ಅವಘಡ, ಕನಿಷ್ಠ 11 ಮಂದಿ ಸಜೀವ ದಹನ 

25-11-23 02:58 pm       HK News Desk   ದೇಶ - ವಿದೇಶ

ಬಹುಮಹಡಿ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಕನಿಷ್ಠ 11 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ಶನಿವಾರ ನಡಿದಿದೆ. 

ಕರಾಚಿ, ನ 25: ಬಹುಮಹಡಿ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಕನಿಷ್ಠ 11 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ಶನಿವಾರ ನಡಿದಿದೆ. 

ಕರಾಚಿಯ ರಶೀದ್ ಮಿನ್ಹಾಸ್ ರಸ್ತೆಯಲ್ಲಿರುವ ಆರ್‌ಜೆ ಶಾಪಿಂಗ್ ಮಾಲ್‌ನಲ್ಲಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷದಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ 50 ಮಂದಿಯನ್ನು ರಕ್ಷಣೆ ಮಾಡಿದೆ. ಆದರೆ ಕಟ್ಟಡದಲ್ಲಿ ಇನ್ನು ಅನೇಕ ಜನ ಸಿಲುಕಿಕೊಂಡಿದ್ದಾರೆ.

Karachi shopping mall kills 11, many feared trapped - India Today

ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಬೆಂಕಿಯಲ್ಲಿ ಗಾಯಗೊಂಡ ಹಲವಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಜಿಯೋ ವರದಿ ಮಾಡಿದೆ.

At least 11 people were killed and many others were feared trapped after a massive fire erupted in a multi-storey shopping mall in Pakistan's Karachi on Saturday.