ಬಸ್ ಮೇಲೆ ಬಂದೂಕುಧಾರಿಗಳಿಂದ ದಾಳಿ: 34 ಮಂದಿ ಸಾವು

16-11-20 12:02 pm       Headline Karnataka News Network   ದೇಶ - ವಿದೇಶ

ಇಥಿಯೋಪಿಯಾದ ಪೂರ್ವ ಭಾಗದಲ್ಲಿ ಶನಿವಾರ ರಾತ್ರಿ ಬಸ್‌ ಮೇಲೆ ದಾಳಿ ನಡೆಸಿದ ಬಂದೂಕುಧಾರಿಗಳು ಕನಿಷ್ಠ 34 ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಇಥಿಯೋಪಿಯಾ, ನವೆಂಬರ್ 16: ಇಥಿಯೋಪಿಯಾದ ಪೂರ್ವ ಭಾಗದಲ್ಲಿ ಶನಿವಾರ ರಾತ್ರಿ ಬಸ್‌ ಮೇಲೆ ದಾಳಿ ನಡೆಸಿದ ಬಂದೂಕುಧಾರಿಗಳು ಕನಿಷ್ಠ 34 ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ.

ಉತ್ತರ ಭಾಗದಲ್ಲಿ ಸೇನಾ ಪಡೆಯು ಸಮರದಲ್ಲಿ ನಿರತರಾಗಿರುವ ನಡುವೆ ಇಥಿಯೋಪಿಯಾದಲ್ಲಿ ಮತ್ತಷ್ಟು ಭದ್ರತೆಯ ಕುರಿತಾದ ಭೀತಿ ಆವರಿಸಿದೆ. ಬೆನಿಶಂಗುಲ್-ಗುಮುಜ್ ಪ್ರಾಂತ್ಯದಲ್ಲಿ ಪ್ರಯಾಣಿಕ ಬಸ್‌ ಮೇಲೆ ನಡೆದ ಹೇಯ ದಾಳಿ ಇದು ಎಂದು ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗ ತಿಳಿಸಿದ್ದು, ಘಟನೆಯಲ್ಲಿ ಬಲಿಯಾದವರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದಿದೆ. ಈ ಭಾಗದ ಇತರೆ ಸ್ಥಳಗಳಲ್ಲಿಯೂ ಇದೇ ರೀತಿಯ ದಾಳಿಗಳು ನಡೆದ ವರದಿಯಾಗಿದ್ದು, ಜನರಲ್ಲಿ ತೀವ್ರ ಭಯ ಉಂಟಾಗಿದೆ ಎಂದು ಅದು ಹೇಳಿದೆ.

ಬೆನಿಶಂಗುಲ್-ಗುಮುಜ್ ಪ್ರಾಂತ್ಯದಲ್ಲಿ ಪದೇ ಪದೇ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶ ಮತ್ತು ಫೆಡರಲ್ ಆಡಳಿತವು ಇಲ್ಲಿ ಭದ್ರತೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಡೇನಿಯಲ್ ಬೆಕೆಲೆ ಒತ್ತಾಯಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಇದೇ ಜಾಗದಲ್ಲಿ ನಡೆದಿದ್ದ ಸಶಸ್ತ್ರ ಭಯೋತ್ಪಾದಕರು ನಡೆಸಿದ ದಾಳಿಗೆ ಕನಿಷ್ಠ 45 ಮಂದಿ ಬಲಿಯಾಗಿದ್ದರು.

ಇಥಿಯೋಪಿಯಾ ಸರ್ಕಾರ ಮತ್ತು ದೇಶದ ಉತ್ತರ ಭಾಗದ ಟಿಗ್ರೇ ಪ್ರದೇಶದ ನಡುವೆ 12 ದಿನಗಳಿಂದ ಯುದ್ಧ ನಡೆಯುತ್ತಿದೆ. ಈ ಸಂಘರ್ಷವು ಇತರೆ ಮೂಲ ಗುಂಪುಗಳನ್ನು ಮತ್ತಷ್ಟು ಉದ್ರೇಕಿಸುವ ಮೂಲಕ ಇನ್ನಷ್ಟು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬ ಆತಂಕ ಉಂಟಾಗಿದೆ. ಟಿಗ್ರೇ ಪ್ರದೇಶದಲ್ಲಿ ಸೇನಾ ಪಡೆಗಳನ್ನು ಮರು ನಿಯೋಜನೆ ಮಾಡುತ್ತಿರುವುದು ಇತರೆ ಪ್ರದೇಶಗಳಲ್ಲಿ ಜನರು ಭದ್ರತೆಯಿಂದ ವಂಚಿತರಾಗುವಂತೆ ಮಾಡಿದೆ.

Gunmen have killed dozens of people in a “gruesome” attack on a bus carrying civilians in western Ethiopia, according to the country’s human rights body.