ಬ್ರೇಕಿಂಗ್ ನ್ಯೂಸ್
29-11-23 09:33 pm HK News Desk ದೇಶ - ವಿದೇಶ
ನವದೆಹಲಿ, ನ.29: ಜರ್ಮಿನಿಯ ಮ್ಯೂನಿಚ್ ನಗರದಿಂದ ಥಾಯ್ಲೆಂಡ್ನ ಬ್ಯಾಂಕಾಕ್ ನಗರಕ್ಕೆ ಹೊರಟಿದ್ದ ಲುಫ್ಥಾನ್ಸ ವಿಮಾನವು ‘ವಿಚಿತ್ರ ಕಾರಣ’ಕ್ಕಾಗಿ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದೆ. ಈ ವಿಮಾನದಲ್ಲಿದಲ್ಲಿ ಪ್ರಯಾಣಿಸುತ್ತಿರುವ ಗಂಡ-ಹೆಂಡತಿ ಜಗಳಕ್ಕೆ ಬೇಸತ್ತ ಪೈಲಟ್, ಅಂತಿಮವಾಗಿ ವಿಮಾನವನ್ನು ದಿಲ್ಲಿಯಲ್ಲಿ ಲ್ಯಾಂಡ್ ಮಾಡಿ, ಅವರನ್ನು ವಿಮಾನದಿಂದ ಹೊರಹಾಕಿದ್ದಾರೆ.
ನವೆಂಬರ್ 27, ಬುಧವಾರ ಮ್ಯೂನಿಚ್ನಿಂದ ಬ್ಯಾಂಕಾಕ್ಗೆ ಹೊರಟಿದ್ದ LH772 ವಿಮಾನವನ್ನು ಅಶಿಸ್ತಿನ ಪ್ರಯಾಣಿಕರ ಕಾರಣ ದೆಹಲಿಯತ್ತು ತರಲಾಯಿತು. ಜಗಳ ಮಾಡುತ್ತಿದ್ದ ದಂಪತಿಯ ಪೈಕಿ ಗಂಡನನ್ನು ದಿಲ್ಲಿಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಬ್ಯಾಂಕಾಕ್ಗೆ ವಿಮಾನವು ಸಣ್ಣ ವಿಳಂಬಗಳೊಂದಿಗೆ ನಂತರ ಮುಂದುವರಿಯುವ ನಿರೀಕ್ಷೆಯಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವಿಮಾನದಲ್ಲಿ ಸುರಕ್ಷತೆ ಮತ್ತು ಭದ್ರತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನದಲ್ಲಿ ನಡೆದಿದ್ದೇನು?
ಗಂಡ-ಹೆಂಡತಿ ಜಗಳ ಉಂಡು ಮಲಗೋತನಕ ಎಂಬುದು ಗಾದೆ ಮಾತು. ಆದರೆ, ಈ ದಂಪತಿಯ ಜಗಳ ವಿಮಾನ ಹತ್ತಿದ್ರೂ ಮುಗಿದಿಲ್ಲ. ಜರ್ಮನಿಯ ಗಂಡ ಮತ್ತು ಥಾಯ್ ಹೆಂಡತಿಯ ಮಧ್ಯೆ, ವಿಮಾನದಲ್ಲಿ ಜಗಳ ಶುರುವಾಗಿದೆ. ಈ ಜಗಳವನ್ನು ಸಿಬ್ಬಂದಿಯ ಸರಿಪಡಿಸಲು ಮುಂದಾಗಿದ್ದಾರೆ. ಜಗಳ ಮತ್ತಷ್ಟು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪೈಲಟ್ ಅಂತಿಮವಾಗಿ ದಿಲ್ಲಿಯಲ್ಲಿ ವಿಮಾನ ಇಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ತನ್ನ ಗಂಡ ಜಗಳ ಮಾಡುತ್ತಿರುವ ಬಗ್ಗೆ ಹೆಂಡತಿಯ ಮೊದಲಿಗೆ ಪೈಲಟ್ಗೆ ದೂರು ನೀಡಿದ್ದಾಳೆ. ಗಂಡ ತನಗೆ ಬೆದರಿಕೆ ಹಾಕುತ್ತಿದ್ದಾನೆ. ದಯವಿಟ್ಟು ಮಧ್ಯ ಪ್ರವೇಶಿಸಿ ಎಂದು ಆಕೆ, ಪೈಲಟ್ಗೆ ಮನವಿ ಮಾಡಿಕೊಂಡಿದ್ದಾಳೆ. ಇಷ್ಟಾದರೂ 53 ವರ್ಷದ ಜರ್ಮನಿಯ ಗಂಡನ ಜಗಳದ ವರ್ತನೆ ನಿಂತಿಲ್ಲ. ಹೆಂಡತಿಯತ್ತ ಆಹಾರ ಎಸೆದಿದ್ದಾನೆ. ಅಲ್ಲದೇ, ಲೈಟರ್ ಮೂಲ ಬ್ಲಾಂಕೆಟ್ಗೆ ಬೆಂಕಿ ಹಚ್ಚಲು ಮುಂದಾಗಿದ್ದಾನೆ. ನಿರಂತರವಾಗಿ ಹೆಂಡತಿ ಮೇಲೆ ರೇಗಾಡಿದ್ದಾನೆ. ವಿಮಾನ ಸಿಬ್ಬಂದಿ ಜಗಳ ಬಿಡಿಸಲು ಎಷ್ಟೇ ಪ್ರಯತ್ನ ಮಾಡಿದರು, ಫಲಿ ಕೊಡಲಿಲ್ಲ.
ಈ ಕಾರಣಕ್ಕಾಗಿ, ಬ್ಯಾಂಕಾಕ್ಗೆ ಹೊರಟಿದ್ದ ವಿಮಾನವನ್ನು ಪೈಲಟ್ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಿದ್ದಾರೆ. ಹೆಂಡತಿಯು ಪ್ರತ್ಯೇಕ ಪಿಎನ್ಆರ್ ಟಿಕೆಟ್ ಹೊಂದಿದ್ದು, ಅದೇ ವಿಮಾನದಲ್ಲಿ ಪ್ರಯಾಣ ಮುಂದುವರಿಸುವುದಾಗಿ ಹೇಳಿದ್ದಾಳೆ. ಆದರೆ, ಆಕೆಯ ಗಂಡನನ್ನು ದಿಲ್ಲಿಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಒಪ್ಪಿಸಲಾಗಿದೆ. ಆದರೆ, ತನ್ನ ವರ್ತನೆಗೆ ಆತ ಕ್ಷಮೆ ಕೇಳಿದ್ದಾನೆ ಎನ್ನಲಾಗಿದೆ. ಆದರೂ, ಆತನನ್ನು ವಾಪಸ್ ಜರ್ಮನಿಗೆ ಕಳುಹಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎನ್ನಲಾಗಿದೆ. ಈ ಮಧ್ಯೆ, ಪೈಲಟ್ ಅವರು ಮೊದಲಿಗೆ ವಿಮಾನವನ್ನು ಪಾಕಿಸ್ತಾನದ ಹತ್ತಿರದ ಏರ್ಪೋರ್ಟ್ನತ್ತ ತಿರುಗಿಸಲು ಅನುಮತಿ ಕೇಳಿದ್ದರು. ಆದರೆ, ಕಾರಣ ನೀಡದೇ ಅನುಮತಿ ಸಿಗದಿದ್ದರಿಂದ ಅಂತಿಮವಾಗಿ ವಿಮಾನವನ್ನು ದಿಲ್ಲಿ ಏರ್ಪೋರ್ಟ್ಗೆ ತರಲಾಯಿತು ಎಂದು ತಿಳಿದು ಬಂದಿದೆ.
On Wednesday, a marital dispute between a husband and wife reportedly compelled a flight to make an unscheduled landing at Delhi's Indira Gandhi International (IGI) airport.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm