ಬ್ರೇಕಿಂಗ್ ನ್ಯೂಸ್
30-11-23 09:40 pm HK News Desk ದೇಶ - ವಿದೇಶ
ನವದೆಹಲಿ, ನ.30: ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಅಧಿಕಾರ ಹಿಡಿಯಲು ತೀವ್ರ ಕಸರತ್ತು ನಡೆಸಿದ್ದು, ಎರಡೂ ಪಾರ್ಟಿಗಳಿಗೆ ಗರಿಷ್ಠ ಸ್ಥಾನ ಸಿಗುವ ಅಂದಾಜು ಇದೆ. ಬಹುತೇಕ ಸಮೀಕ್ಷೆಗಳು ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಬಗ್ಗೆ ಹೇಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವ ಅಂಶ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಮಧ್ಯಪ್ರದೇಶದಲ್ಲಿ ಮತ್ತೆ ಕಮಲಕ್ಕೇ ಬಹುಪರಾಕ್
ಹಾಲಿ ಬಿಜೆಪಿ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರ ಉಳಿಸಿಕೊಳ್ಳುತ್ತಾ ಅನ್ನುವ ಕುತೂಹಲ ಇದೆ. ಒಟ್ಟು 230 ಸೀಟುಗಳ ಪೈಕಿ ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಬಿಜೆಪಿ 140ರಿಂದ 162 ಸೀಟು ಗಳಿಸಿದ್ದರೆ, ಕಾಂಗ್ರೆಸ್ 68-90 ರಷ್ಟು ಸ್ಥಾನ ಪಡೆಯಲಿದೆ ಎಂದು ಹೇಳಿದೆ. ಟುಡೇಸ್ ಚಾಣಕ್ಯ ಸಮೀಕ್ಷೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದ್ದರೆ, ಕಾಂಗ್ರೆಸ್ 70 ಆಸುಪಾಸು ಸ್ಥಾನ ಗಳಿಸುವ ಭರವಸೆ ನೀಡಲಾಗಿದೆ. ಇದೇ ವೇಳೆ, ದೈನಿಕ್ ಭಾಸ್ಕರ್ ನಡೆಸಿದ ಸಮೀಕ್ಷೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ 95-115, ಕಾಂಗ್ರೆಸ್ 105-120 ಸ್ಥಾನಗಳನ್ನು ಪಡೆಯುವುದಾಗಿ ಹೇಳಿದೆ. ಇಂಡಿಯಾ ಟಿವಿ- ಸಿಎನ್ಎಕ್ಸ್ ಸಮೀಕ್ಷೆಯಲ್ಲಿ ಬಿಜೆಪಿ 140-159, ಕಾಂಗ್ರೆಸ್ 70-89 ಸೀಟುಗಳನ್ನು ಪಡೆಯುವುದಾಗಿ ಹೇಳಿದೆ. ರಿಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಬಿಜೆಪಿ 118-130 ಮತ್ತು ಕಾಂಗ್ರೆಸ್ 97-107 ಸ್ಥಾನ ಪಡೆಯಲಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್- ಬಿಜೆಪಿ ಬಿಗ್ ಫೈಟ್
ಹಾಲಿ ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನದಲ್ಲಿ ಒಟ್ಟು 200 ಸೀಟುಗಳಿದ್ದು, ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಬಿಜೆಪಿ 90, ಕಾಂಗ್ರೆಸ್ 96 ಸ್ಥಾನ ಪಡೆಯುವ ಬಗ್ಗೆ ಹೇಳಲಾಗಿದೆ. ಟೈಮ್ಸ್ ನೌ – ಇಟಿಜಿ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ 108-128 ಮತ್ತು ಕಾಂಗ್ರೆಸ್ 56-72 ಸ್ಥಾನ ಪಡೆಯುವುದಾಗಿ ಹೇಳಿದೆ. ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ 100-122 ಮತ್ತು ಕಾಂಗ್ರೆಸ್ 62-85, ಇತರರು 15 ಸ್ಥಾನ ಪಡೆಯಲಿದ್ದಾರೆ. ಇಂಡಿಯಾ ಟಿವಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 80-90, ಕಾಂಗ್ರೆಸ್ 94-104, ಇತರರು 18 ಸ್ಥಾನ ಗಳಿಸಲಿದ್ದಾರೆ. ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಕಾಂಗ್ರೆಸ್ 62-85 ಮತ್ತು ಬಿಜೆಪಿ 100-122 ಸ್ಥಾನ ಗಳಿಸಲಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಪಕ್ಕಾ
ಒಟ್ಟು 119 ಸದಸ್ಯ ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರ ಹಿಡಿಯುವುದಾಗಿ ಹೇಳಿದೆ. ಸಿಎನ್ಎನ್ ಸಮೀಕ್ಷೆಯಲ್ಲಿ ಕಾಂಗ್ರೆಸ್ 56, ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ ಎಸ್ 48 ಮತ್ತು ಬಿಜೆಪಿ 10 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ ಅಧಿಕಾರ ಹಿಡಿದರೆ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ಚಂದ್ರಶೇಖರ್ ರಾವ್ ಅಧಿಕಾರ ತ್ಯಜಿಸಲಿದ್ದಾರೆ. ಟುಡೇಸ್ ಚಾಣಕ್ಯ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 71, ಬಿಜೆಪಿ 7, ಬಿಆರ್ ಎಸ್ 33 ಸ್ಥಾನಗಳನ್ನು ಗಳಿಸಲಿದೆ. ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಕಾಂಗ್ರೆಸ್ 48-64, ಬಿಆರ್ ಎಸ್ 40-55, ಬಿಜೆಪಿ 7-13, ಎಐಎಂಎಂ 4-7 ಸ್ಥಾನ ಗಳಿಸಲಿದೆ.
ಛತ್ತೀಸ್ಗಢದಲ್ಲಿ ಬಹುತೇಕ ಕಾಂಗ್ರೆಸ್ ಗೆಲುವು
ಛತ್ತೀಸ್ಗಢದಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಕಂಡುಬಂದಿದೆ. ಒಟ್ಟು 90 ಸೀಟುಗಳ ಪೈಕಿ ಎಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 36-46 ಮತ್ತು ಕಾಂಗ್ರೆಸ್ 40-50 ಸ್ಥಾನಗಳನ್ನು ಗಳಿಸುವುದಾಗಿ ಹೇಳಿದೆ. ಟಿವಿ 5 ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ 29-39 ಮತ್ತು ಕಾಂಗ್ರೆಸ್ 54-66 ಸ್ಥಾನ ಪಡೆಯಲಿದೆ. ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ 34-45, ಕಾಂಗ್ರೆಸ್ 43-53 ಸ್ಥಾನ ಗಳಿಸಲಿದೆ. ಟುಡೇಸ್ ಚಾಣಕ್ಯ ತಂಡ ಬಿಜೆಪಿ 38 ಪ್ಲಸ್ ಮತ್ತು ಕಾಂಗ್ರೆಸ್ 57 ಪ್ಲಸ್ ಸ್ಥಾನ ಗೆಲ್ಲುವುದಾಗಿ ಹೇಳಿದೆ. ಇಂಡಿಯಾ ಟಿವಿ – ಸಿಎನ್ಎಕ್ಸ್ ಸಮೀಕ್ಷೆಯಲ್ಲಿ ಬಿಜೆಪಿ 30-40, ಕಾಂಗ್ರೆಸ್ 46-56 ಸ್ಥಾನ ಗಳಿಸುವುದಾಗಿ ಹೇಳಿದೆ. ಎಬಿಪಿ- ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ 36-48, ಕಾಂಗ್ರೆಸ್ 41-53 ಸ್ಥಾನ ಗಳಿಸಲಿದೆ.
ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 40 ಸ್ಥಾನಗಳಿದ್ದು ರಿಪಬ್ಲಿಕ್ ಸಮೀಕ್ಷೆ ಎಂಎನ್ಎಫ್ 17-22, ಜೆಡ್ ಪಿಎಮ್ 7-12, ಕಾಂಗ್ರೆಸ್ 7-10 ಸ್ಥಾನ ಗಳಿಸಲಿದೆ. ಎಬಿಪಿ –ಸಿ ವೋಟರ್ ಸಮೀಕ್ಷೆಯಲ್ಲಿ ಎಂಎನ್ಎಫ್ 15-21, ಜೆಡ್ ಪಿಎಮ್ 12-18, ಕಾಂಗ್ರೆಸಿಗೆ 2-8 ಸ್ಥಾನ ಲಭಿಸಲಿದೆ. ಟೈಮ್ಸ್ ನೌ- ಇಟಿಜಿ ಸಮೀಕ್ಷೆಯಲ್ಲಿ ಎಂಎನ್ಎಫ್ 14-18, ಜೆಡ್ ಪಿಎಮ್ 10-14, ಕಾಂಗ್ರೆಸ್ 9-13 ಗಳಿಸಲಿದೆ.
My India exit poll results for all five states including, Madhya Pradesh, Rajasthan, Telangana, Chhattisgarh, and Mizoram have started coming out. The polling process has concluded in all the five states with Telangana being the last. The final result is set to be announced on December 3 (Sunday). A direct electoral confrontation between the Bharatiya Janata Party (BJP) and Congress is anticipated in states like Rajasthan, Madhya Pradesh and Chhattisgarh, with regional parties playing a significant role in the electoral landscape of Telangana and Mizoram
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm