ಬ್ರೇಕಿಂಗ್ ನ್ಯೂಸ್
06-12-23 06:27 pm HK News Desk ದೇಶ - ವಿದೇಶ
ನವದೆಹಲಿ, ಡಿ.6: ಪಾಕಿಸ್ತಾನದಲ್ಲಿ ಮತ್ತೊಬ್ಬ ನಟೋರಿಯಸ್ ಉಗ್ರನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಸಾಯಿಸಿದ್ದಾರೆ. 2015ರ ಜಮ್ಮು ಕಾಶ್ಮೀರದ ಉಧಂಪುರ್ ದಾಳಿಯ ರೂವಾರಿ, ಲಷ್ಕರ್ ಇ- ತೈಬಾ ಸಂಘಟನೆಯ ಉಗ್ರ ಹನ್ಝ್ಲಾ ಅದ್ನಾನ್ ಎಂಬಾತ ಅಪರಿಚಿತರ ಗುಂಡೇಟು ಬಿದ್ದು ಕೊಲೆಯಾಗಿದ್ದಾನೆ.
ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ನಿಕಟವರ್ತಿಯಾಗಿದ್ದ ಅದ್ನಾನ್ ಡಿ.2 ಮತ್ತು 3ರ ನಡುವಿನ ರಾತ್ರಿ ವೇಳೆ ತನ್ನ ಮನೆಯಲ್ಲಿದ್ದಾಗಲೇ ಬಂದೂಕುಧಾರಿಗಳ ಗುಂಡೇಟಿಗೆ ಒಳಗಾಗಿದ್ದಾನೆ, ನಾಲ್ಕು ಗುಂಡುಗಳು ಆತನ ದೇಹ ಸೇರಿದ್ದವು. ಗಂಭೀರ ಸ್ಥಿತಿಯಲ್ಲಿದ್ದ ಹನ್ಝ್ಲಾನನ್ನು ಪಾಕಿಸ್ತಾನದ ಮಿಲಿಟರಿ ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿತ್ತು. ಡಿ.5ರಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಇತ್ತೀಚೆಗೆ ರಾವಲ್ಪಿಂಡಿಯಿಂದ ಕರಾಚಿಯನ್ನು ಕಾರಸ್ಥಾನ ಮಾಡಿಕೊಂಡು ಲಷ್ಕರ್ ಉಗ್ರವಾದಿ ಕಾರ್ಯಾಚರಣೆಯನ್ನು ಅದ್ನಾನ್ ಮುಂದುವರಿಸಿದ್ದ.

2015ರ ಉಧಂಪುರ್ ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಮೃತಪಟ್ಟು 12 ಮಂದಿ ಯೋಧರು ಗಾಯಗೊಂಡಿದ್ದರು. 2016ರಲ್ಲಿ ಜಮ್ಮು ಕಾಶ್ಮೀರದ ಪಾಂಪೋರ್ ಏರಿಯಾದಲ್ಲಿ ಲಷ್ಕರ್ ಉಗ್ರರ ದಾಳಿಗೆ ಎಂಟು ಸಿಆರ್ ಪಿಎಫ್ ಯೋಧರು ಬಲಿಯಾಗಿದ್ದರು. ಇವರೆಡೂ ಕೃತ್ಯದ ಹಿಂದೆ ಉಗ್ರ ಹನ್ಝ್ಲಾ ಅದ್ನಾನ್ ಮಾಸ್ಟರ್ ಮೈಂಡ್ ಆಗಿದ್ದ ಅನ್ನುವುದನ್ನು ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ಪತ್ತೆ ಮಾಡಿದ್ದರು. ಡಿ.2ರಂದು ಐಎಸ್ಐ ಪರವಾಗಿ ಕೆಲಸ ಮಾಡುತ್ತಿದ್ದ ಖಲೀಸ್ತಾನಿ ಉಗ್ರನೊಬ್ಬ ಕರಾಚಿಯಲ್ಲಿ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ.

ಮತ್ತೊಬ್ಬ ಉಗ್ರವಾದಿಗೆ ಗುಂಡೇಟು
ಅಹ್ಲೇ ಸುನ್ನತ್ ವಾಲೇ ಜಮಾತ್ ಎನ್ನುವ ನಿಷೇಧಿತ ಸಂಘಟನೆಯ ಸ್ಥಳೀಯ ನಾಯಕನಾಗಿದ್ದ ಬಿಲಾಲ್ ಮುರ್ಶಿದ್ ಎಂಬಾತನಿಗೆ ಡಿ.6ರಂದು ಬೈಕಿನಲ್ಲಿ ಬಂದಿದ್ದ ಇಬ್ಬರು ಗುಂಡು ಹಾರಿಸಿದ್ದಾರೆ. ಬಿಲಾಲ್ ಮುರ್ಶಿದ್ ದೇಹಕ್ಕೆ ಐದಾರು ಗುಂಡುಗಳು ಹೊಕ್ಕಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ. ಬಂದೂಕುಧಾರಿಗಳು ಬೈಕಿನಲ್ಲಿ ಬಂದು ಬಿಲಾಲನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆಂದು ಪತ್ರಿಕೆ ಬರೆದಿದೆ.
Adnan Ahmed, considered to be a close aide of Lashkar-e-Taiba (LeT) founder and 26/11 Mumbai terror attacks mastermind Hafiz Saeed, was shot dead in Pakistan’s Karachi city.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm