ಬ್ರೇಕಿಂಗ್ ನ್ಯೂಸ್
07-12-23 05:22 pm HK News Desk ದೇಶ - ವಿದೇಶ
ಕಾಸರಗೋಡು, ಡಿ.7: ಮಹಿಳೆಯರು ಸಾಮಾನ್ಯವಾಗಿ ದಿನವಿಡೀ ಅಡುಗೆ ಕೆಲಸ ಮಾಡಬೇಕು, ಮನೆಯವರಿಗೆಲ್ಲ ನಾವೇ ತಿನ್ನುವುದಕ್ಕೆ ಮಾಡಿ ಹಾಕಬೇಕು ಎಂದು ಮೂಗು ಮುರಿಯುತ್ತಾರೆ. ಆದರೆ, ಇಲ್ಲಿನ ಮೂವರು ಗೃಹಿಣಿಯರು ಪುರುಷರೇ ಪಾರಮ್ಯ ಹೊಂದಿರುವ ಗ್ಯಾರೇಜ್ ಕೆಲಸವನ್ನೂ ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ತಾವೇ ಪ್ರತ್ಯೇಕವಾಗಿ ಮಹಿಳಾ ಟು ವೀಲರ್ ಗ್ಯಾರೇಜ್ ಶಾಪ್ ಒಂದನ್ನು ಆರಂಭಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಕಾಸರಗೋಡಿನ ಮೂವರು ಮಹಿಳೆಯರ ಈ ಸಾಧನೆ ರಾಜ್ಯದ ಗಮನ ಸೆಳೆದಿದೆ. ಯಾಕಂದ್ರೆ, ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರೇ ಸೇರಿಕೊಂಡು ಟು ವೀಲರ್ ಗ್ಯಾರೇಜ್ ಆರಂಭಿಸಿದ್ದಾರೆ. ಬಿನ್ಸಿ, ಮರ್ಸಿ ಮತ್ತು ಬಿಂಟು ಎಂಬ ಕಾಸರಗೋಡು ನಗರದ ಮೂವರು ಮಹಿಳೆಯರು ಸೇರಿಕೊಂಡು ದ್ವಿಚಕ್ರ ವಾಹನಗಳ ಗ್ಯಾರೇಜ್ ತೆರೆದಿದ್ದಾರೆ. ಕೇರಳ ಸರಕಾರದ ಕುಟುಂಬಶ್ರೀ ಯೋಜನೆಯಡಿ ದ್ವಿಚಕ್ರ ವಾಹನಗಳ ರಿಪೇರಿ ತರಬೇತಿ ಪಡೆದ ಈ ಮಹಿಳೆಯರು ಈಗ ಸ್ವಂತ ಗ್ಯಾರೇಜ್ ಆರಂಭಿಸಿದ್ದಾರೆ.
ತಮ್ಮ ಓರಗೆಯ ಮಹಿಳೆಯರು ಮನೆಯಲ್ಲಿ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಇವರು ಮಾತ್ರ ವರ್ಕ್ ಶಾಪ್ ನಲ್ಲಿ ಸ್ಪಾನರ್ ಹಿಡಿದು ನಟ್, ಬೋಲ್ಟ್ ತಿರುಗಿಸಲು ಆರಂಭಿಸಿದ್ದಾರೆ. ಕಾಸರಗೋಡು ನಗರದಲ್ಲಿ ಸಿಗ್ನೋರಾ ಹೆಸರಿನ ವರ್ಕ್ ಶಾಪ್ ತೆರೆದಿರುವುದು ಓರಗೆಯ ಮಹಿಳೆಯರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಸದಾ ಅಡುಗೆ ಕೆಲಸದಲ್ಲೇ ಬಿಝಿಯಾಗಿದ್ದವರು ಈಗ ಈ ಕೆಲಸದಲ್ಲಿ ತೊಡಗಿಸಿದ್ದು ತುಂಬ ಸಂತೋಷ ಕೊಟ್ಟಿದೆ. ವಿಭಿನ್ನ ರೀತಿಯ ಕೆಲಸದ ಬಗ್ಗೆ ಹೆಮ್ಮೆಯಿದೆ. ಬೇರೆಯವರ ಕೈಕೆಳಗೆ ಕೆಲಸ ಮಾಡುವ ಬದಲು ನಾವು ಮೂವರು ಸೇರಿ ನಮ್ಮದೇ ವರ್ಕ್ ಶಾಪ್ ತೆರೆದಿದ್ದೇವೆ ಎಂದು ಮರ್ಸಿ ತಿಳಿಸಿದ್ದಾರೆ.
ಇಂತಹದ್ದೊಂದು ಕನಸಿತ್ತು. ಕನಸನ್ನು ಈಡೇರಿಸಿಕೊಂಡ ಬಗ್ಗೆ ಹೆಮ್ಮೆ ಇದೆ. ನಾವು ಈ ಫೀಲ್ಡ್ ನಲ್ಲಿ ಕೆಲಸ ಮಾಡಿ ತೋರಿಸಬೇಕೆಂಬ ಗುರಿ ಇದೆ. ಆಮೂಲಕ ಪುರುಷನಿಗಿಂತ ನಾವೇನು ಕಮ್ಮಿಯಿಲ್ಲ ಎಂದು ತೋರಿಸುತ್ತೇವೆ ಎಂದಿದ್ದಾರೆ, ಬಿನ್ಸಿ. ಮಹಿಳೆಯರೇ ಸೇರಿಕೊಂಡು ಮಾಡಿರುವ ಈ ಗ್ಯಾರೇಜ್ ಕೇರಳದಲ್ಲಿ ಭಾರೀ ಸುದ್ದಿಯಾಗಿದೆ.
It was a dream come true for three Kasargod women, who pulled themselves out of the kitchen to the street only to become proud partners of Kerala's first all-women two-wheeler workshop.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 03:26 pm
Bangalore Correspondent
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm