ಬ್ರೇಕಿಂಗ್ ನ್ಯೂಸ್
11-12-23 09:08 pm HK News Desk ದೇಶ - ವಿದೇಶ
ಭೋಪಾಲ್, ಡಿ.11: ಅಚ್ಚರಿ ಬೆಳವಣಿಗೆಯಲ್ಲಿ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಉಜ್ಜೈನಿ ಕ್ಷೇತ್ರದ ಮೂರು ಬಾರಿಯ ಶಾಸಕ ಮೋಹನ್ ಯಾದವ್ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಆಮೂಲಕ ನಿರೀಕ್ಷೆಯಂತೆ, 18 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬದಿಗೆ ಸರಿಸಿದೆ.
ದಲಿತ ನೇತಾರ ಜಗದೀಶ್ ದೇವ್ಡಾ ಮತ್ತು ಬ್ರಾಹ್ಮಣ ವರ್ಗದ ರಾಜೇಂದ್ರ ಶುಕ್ಲಾ ಇಬ್ಬರು ಉಪ ಮುಖ್ಯಮಂತ್ರಿ ಸ್ಥಾನಕ್ಕೇರಲಿದ್ದು, ಮಾಜಿ ಕೇಂದ್ರ ಸಚಿವ, ಈ ಬಾರಿ ಮುಖ್ಯಮಂತ್ರಿ ಆಗುತ್ತಾರೆಂದು ಬಿಂಬಿತವಾಗಿದ್ದ ನರೇಂದ್ರ ಸಿಂಗ್ ತೋಮರ್ ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಹೊಸ ಸ್ಪೀಕರ್ ಆಗಲಿದ್ದಾರೆ. ಕೇಂದ್ರ ಸಚಿವರಾಗಿದ್ದ ತೋಮರ್, ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ರಾಜಧಾನಿ ಭೋಪಾಲದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮೋಹನ್ ಯಾದವ್ ಹೆಸರು ಸೂಚಿಸಿದ್ದಾರೆ. ಕೇಂದ್ರದ ವೀಕ್ಷಕರಾಗಿ ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಉಪಸ್ಥಿತಿಯಲ್ಲಿ ಹೊಸ ಮುಖ್ಯಮಂತ್ರಿ ಹೆಸರನ್ನು ಘೋಷಣೆ ಮಾಡಲಾಗಿದೆ. ಜಾತಿ ಸಮೀಕರಣದಡಿ ಹಿಂದುಳಿದ ವರ್ಗದ ಮುಖ್ಯಮಂತ್ರಿ, ದಲಿತ ಮತ್ತು ಬ್ರಾಹ್ಮಣರನ್ನು ಡಿಸಿಎಂ ಸ್ಥಾನಕ್ಕೆ ತರಲಾಗಿದೆ.
ಮೊದಲ ಬಾರಿ ಸಚಿವನಾಗಿದ್ದ ಯಾದವ್
2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಮೋಹನ್ ಯಾದವ್ 2018ರಲ್ಲಿ ಅದೇ ಕ್ಷೇತ್ರದಲ್ಲಿ ಮರು ಆಯ್ಕೆಯಾಗಿದ್ದರು. ಶಿವರಾಜ್ ಸಿಂಗ್ ಚೌಹಾಣ್ ಸರಕಾರದಲ್ಲಿ 2020ರಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದರು. ಅಲ್ಲದೆ, ಇಡೀ ರಾಜ್ಯದಲ್ಲಿ ತನ್ನ ಪ್ರಭಾವ ವಿಸ್ತರಣೆ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮೋಹನ್ ಯಾದವ್, 12,941 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಹ್ಯಾಟ್ರಿಕ್ ಗೆಲುವು ಕಂಡಿದ್ದರು. 2003ರಲ್ಲಿ ಹಿಂದುಳಿದ (ಓಬಿಸಿ) ವರ್ಗದ ಉಮಾಭಾರತಿ ಬಿಜೆಪಿ ಮುಖ್ಯಮಂತ್ರಿಯಾಗಿದ್ದರು. ಆನಂತರ, ಅದೇ ವರ್ಗದ ಬಾಬುಲಾಲ್ ಗೌರ್, ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದರು. ಈಗ ಓಬಿಸಿಯ ನಾಲ್ಕನೇ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಆಯ್ಕೆಗೊಂಡಿದ್ದಾರೆ.
ಜಗದೀಶ್ ದೇವ್ಡಾ ಬಹುದೊಡ್ಡ ದಲಿತ ನಾಯಕ
ಎಂಟು ಬಾರಿ ಶಾಸಕರಾಗಿ, ಹಲವು ಬಾರಿ ಸಚಿವರಾಗಿರುವ ಜಗದೀಶ್ ದೇವ್ಡಾ ಮಧ್ಯಪ್ರದೇಶದಲ್ಲಿ ಬಿಜೆಪಿ ಪಾಲಿನ ಬಹುದೊಡ್ಡ ದಲಿತ ನಾಯಕ. ಈ ಹಿಂದೆ ಉಮಾ ಭಾರತಿ ಸರಕಾರದಲ್ಲಿ ಆನಂತರ ಶಿವರಾಜ್ ಸಿಂಗ್ ಚೌಹಾಣ್ ಸರಕಾರದಲ್ಲಿ ವಿತ್ತ ಮಂತ್ರಿ ಸೇರಿದಂತೆ ಪ್ರಮುಖ ಖಾತೆಗಳನ್ನು ಜಗದೀಶ್ ದೇವ್ಡಾ ನಿಭಾಯಿಸಿದ್ದಾರೆ. ಈ ಬಾರಿ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೂ ಕೇಳಿಬಂದಿತ್ತು. ರಾಜ್ಯದಲ್ಲಿ ಓಬಿಸಿ ವರ್ಗದ ಪ್ರಭಾವ ಹೆಚ್ಚಿರುವುದರಿಂದ ಶಿವರಾಜ್ ಸಿಂಗ್ ಅವರಿಂದ ತೆರವಾಗುವ ಸ್ಥಾನಕ್ಕೆ ಅದೇ ಸಮುದಾಯದ ಮೋಹನ್ ಯಾದವ್ ಅವರನ್ನು ತರಲಾಗಿದೆ. ಜಗದೀಶ್ ದೇವ್ಡಾ 1979ರ ಕಾಲದಿಂದಲೂ ಜನಸಂಘ ಮತ್ತು ಬಿಜೆಪಿಯಲ್ಲಿ ಸಕ್ರಿಯರಾಗಿದ್ದು ಮಧ್ಯಪ್ರದೇಶದಲ್ಲಿ ಬಿಜೆಪಿ ಪಾಲಿನ ಬಹುದೊಡ್ಡ ದಲಿತ ನಾಯಕರಾಗಿ ಗಮನಸೆಳೆದವರು.
ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 162 ಸ್ಥಾನಗಳೊಂದಿಗೆ ಭರ್ಜರಿ ವಿಜಯ ದಾಖಲಿಸಿತ್ತು. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಐದನೇ ಬಾರಿಗೆ ದಾಖಲೆಯ ವಿಜಯ ಸಿಕ್ಕಿತ್ತು. ಆದರೆ, ರಾಜ್ಯದಲ್ಲಿ ಹೊಸ ನಾಯಕರನ್ನು ಬೆಳೆಸುವ ಉದ್ದೇಶದಲ್ಲಿ ಈ ಬಾರಿ ಶಿವರಾಜ್ ಸಿಂಗ್ ಅವರನ್ನು ಬದಲಿಸಲಾಗುತ್ತೆ ಎಂದೇ ಹೇಳಲಾಗಿತ್ತು. ಆರೆಸ್ಸೆಸ್ ಹಿನ್ನೆಲೆಯ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.
Ujjain BJP MLA Mohan Yadav to be new Madhya Pradesh Chief Minister. The decision was taken after a meeting of senior BJP leaders and newly elected MLAs took place on Monday.
29-12-24 06:29 pm
HK News Desk
Mandya Police Assult, Slap, Video: ತನ್ನ ಕಪಾಳಕ...
29-12-24 12:31 pm
SIT, Munirathna, rape, honeytrap, AIDS: ಶಾಸಕ...
29-12-24 11:51 am
Grace Ministry Bangalore Christmas 2024 : ಗ್ರ...
28-12-24 06:57 pm
Bidar Contractor suicide, Priyank Kharges, Ra...
27-12-24 04:07 pm
29-12-24 10:23 pm
HK News Desk
South Korea Flight Crash: ದಕ್ಷಿಣ ಕೊರಿಯಾದಲ್ಲಿ...
29-12-24 02:35 pm
ಮನಮೋಹನ್ ಸಿಂಗ್ ಸ್ಮಾರಕದ ಹೆಸರಲ್ಲಿ ವಿವಾದ ; ನರಸಿಂಹ...
28-12-24 09:46 pm
Manmohan Singh Wiki Kannada; ಪಾಕ್ನಲ್ಲಿ ಜನನ,...
27-12-24 10:38 am
Manmohan Singh Death; ಆರ್ಥಿಕ ಕ್ರಾಂತಿಯ ಹರಿಕಾರ...
27-12-24 10:15 am
29-12-24 11:08 pm
Mangalore Correspondent
Someshwara Beach Drowning, Bangalore: ಸೋಮೇಶ್ವ...
29-12-24 10:02 pm
Mangalore Kambala 2024: ರಾಮ ಲಕ್ಷ್ಮಣ ಜೋಡುಕರೆ ಕ...
29-12-24 09:56 pm
Mangalore Manjanady gas explosion; ಮಂಜನಾಡಿ ಗ್...
29-12-24 03:22 am
Prosecution, Munirathna, U T Khader, Mangalor...
28-12-24 10:49 pm
29-12-24 10:50 pm
Mangalore Correspondent
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm