Rajasthan, chief minister, Bhajan Lal Sharma: ರಾಜಸ್ಥಾನ ಸಿಎಂ ಸ್ಥಾನಕ್ಕೆ ಬಿಜೆಪಿ ಅಚ್ಚರಿ ಆಯ್ಕೆ ; ಅವ್ರನ್ನು ಇವ್ರನ್ನು ಬಿಟ್ಟು ರೇಸಿನಲ್ಲೇ ಇಲ್ಲದ ಶಾಸಕನಿಗೆ ಮುಖ್ಯಮಂತ್ರಿ ಪಟ್ಟ

12-12-23 06:06 pm       HK News Desk   ದೇಶ - ವಿದೇಶ

ಬಿಜೆಪಿ ಹೈಕಮಾಂಡ್ ರಾಜಸ್ಥಾನ ಪಾಲಿಗೆ ಮತ್ತೊಂದು ಶಾಕಿಂಗ್ ಸುದ್ದಿ ನೀಡಿದೆ. ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಕಳೆದೊಂದು ವಾರದಿಂದ ನಡೆಸುತ್ತಿದ್ದ ಹೊಯ್ದಾಟಕ್ಕೆ ತೆರೆಹಾಕಿದ್ದು, ಮೊದಲ ಬಾರಿಗೆ ಶಾಸಕನಾಗಿರುವ ಭಜನ್ ಲಾಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಜೈಪುರ, ಡಿ.12: ಬಿಜೆಪಿ ಹೈಕಮಾಂಡ್ ರಾಜಸ್ಥಾನ ಪಾಲಿಗೆ ಮತ್ತೊಂದು ಶಾಕಿಂಗ್ ಸುದ್ದಿ ನೀಡಿದೆ. ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಕಳೆದೊಂದು ವಾರದಿಂದ ನಡೆಸುತ್ತಿದ್ದ ಹೊಯ್ದಾಟಕ್ಕೆ ತೆರೆಹಾಕಿದ್ದು, ಮೊದಲ ಬಾರಿಗೆ ಶಾಸಕನಾಗಿರುವ ಭಜನ್ ಲಾಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಮಂಗಳವಾರ ನಡೆದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ ಅವರೇ ಭಜನಲಾಲ್ ಅವರ ಹೆಸರನ್ನು ಸೂಚಿಸಿದ್ದಾರೆ. ಪಕ್ಷದ ಸಭೆಯಲ್ಲಿ ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ರಾಜನಾಥ್ ಸಿಂಗ್, ಭಜನ್ ಲಾಲ್ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಘೋಷಣೆ ಮಾಡಿದ್ದಾರೆ. ಅಲ್ಲದೆ, ರಜಪೂತ ವಂಶಸ್ಥೆ ದಿಯಾ ಕುಮಾರಿ ಮತ್ತು ಪರಿಶಿಷ್ಟ ಜಾತಿಯ ಪ್ರೇಮಚಂದ್ ಬೈರ್ವಾ ಅವರನ್ನು ಡಿಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

Bhajanlal Sharma: कौन हैं राजस्थान के नए मुख्यमंत्री भजनलाल शर्मा, जानिए  इनके बारे में - who is bhajan lal sharma rajasthan new cm brahmin face MLA  from Sanganer seat

Bhajan Lal Sharma to be Chief Minister of Rajasthan - The Hindu

Bhajan Lal Sharma First Reaction After Elected New Rajasthan Chief Minister  Sanganer BJP MLA | Bhajan Lal Sharma: सीएम के एलान के बाद भजन लाल शर्मा की  पहली प्रतिक्रिया, जानें- क्या कहा?

Bhajan Lal Sharma Rajasthan New CM Know Why His Name Selected For This Post  ANN | Bhajan Lal Sharma: न वुसंधरा न दीया...कई दिग्गजों में से पहली बार के  MLA भजन लाल

ಮುಖ್ಯಮಂತ್ರಿ ಸ್ಥಾನಕ್ಕೆ ವಸುಂಧರಾ ರಾಜೇ, ಗಜೇಂದ್ರ ಶೇಖಾವತಿ, ಮಹಾಂತ ಬಾಲಕನಾಥ್ ಸೇರಿದಂತೆ ಹಲವರ ಹೆಸರು ಕೇಳಿಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಭಜನಲಾಲ್ ಹೆಸರು ಸಿಎಂ ಸ್ಥಾನದ ರೇಸಿನಲ್ಲಿ ಇರಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನಿಕಟವರ್ತಿ ಮತ್ತು ರಾಜಸ್ಥಾನದಲ್ಲಿ ನಾಲ್ಕು ಬಾರಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಭಜನ್ ಲಾಲ್ ಅವರನ್ನು ಅಚ್ಚರಿಯ ಆಯ್ಕೆಯಾಗಿ ಘೋಷಣೆ ಮಾಡಲಾಗಿದೆ.

ಬ್ರಾಹ್ಮಣ ಸಮುದಾಯದ ಭಜನಲಾಲ್ ಶರ್ಮಾ ಈ ಬಾರಿಯ ಚುನಾವಣೆಯಲ್ಲಿ ಸಂಗನೇರ್ ಕ್ಷೇತ್ರದಿಂದ 48 ಸಾವಿರ ಮತಗಳ ಅಂತರದಿಂದ ಗೆದ್ದು ಗಮನಸೆಳೆದಿದ್ದರು. ಭಜನಲಾಲ್ ಅವರಿಗೆ 1,45,162 ಮತಗಳು ಬಿದ್ದಿದ್ದರೆ, ಪ್ರತಿಸ್ಪರ್ಧಿ ಕಾಂಗ್ರೆಸಿನ ಪುಷ್ಪೇಂದ್ರ ಭಾರದ್ವಾಜ್ 97081 ಮತಗಳನ್ನು ಪಡೆದಿದ್ದರು. ಭರತ್ ಪುರ ಮೂಲದ ಭಜನಲಾಲ್, ಬ್ರಾಹ್ಮಣ ಮತಗಳೇ ಹೆಚ್ಚಿರುವ ಸಂಗನೇರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಭಜನಲಾಲ್ ಆರೆಸ್ಸೆಸ್ ಮತ್ತು ಎಬಿವಿಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ್ದು ಪಕ್ಷದಲ್ಲಿ ಸುದೀರ್ಘ ಕಾಲದಲ್ಲಿ ಸಕ್ರಿಯರಾಗಿದ್ದಾರೆ.

The Bharatiya Janata Party on Tuesday selected Bhajan Lal Sharma as the new chief minister of Rajasthan. Former chief minister Vasundhara Raje, who was among the frontrunners for the post, reportedly proposed Sharma's name in the meeting of BJP's legislature party. The Bharatiya Janata Party has named Diya Kumari and Prem Chand Bairwa as Sharma's deputy chief ministers.