Madhya Pradesh, Shivraj Singh Chouhan: ತನಗಾಗಿ ಏನನ್ನಾದ್ರೂ ಕೇಳುವುದಕ್ಕಿಂತ ಸಾಯುವುದೇ ಮೇಲು ; ನೋವು ಹೇಳಿಕೊಂಡ ಶಿವರಾಜ್ ಸಿಂಗ್ ಚೌಹಾಣ್ 

12-12-23 10:05 pm       HK News Desk   ದೇಶ - ವಿದೇಶ

ತನಗಾಗಿ ಏನನ್ನೂ ಕೇಳುವುದಕ್ಕಾಗಿ ದೆಹಲಿಗೆ ಹೋಗಲ್ಲ. ಹಾಗೆ ಕೇಳಿಕೊಂಡು ಹೋಗುವುದಕ್ಕಿಂತ ಸಾಯುವುದೇ ಲೇಸು ಎಂದು ಮಧ್ಯಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. 

ಭೋಪಾಲ್, ಡಿ.12: ತನಗಾಗಿ ಏನನ್ನೂ ಕೇಳುವುದಕ್ಕಾಗಿ ದೆಹಲಿಗೆ ಹೋಗಲ್ಲ. ಹಾಗೆ ಕೇಳಿಕೊಂಡು ಹೋಗುವುದಕ್ಕಿಂತ ಸಾಯುವುದೇ ಲೇಸು ಎಂದು ಮಧ್ಯಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. 

ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಬಳಿಕ ತನ್ನ ವಿದಾಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಗದ್ಗದಿತರಾಗಿಯೇ ಉತ್ತರಿಸಿದರು. ಮೋಹನ್‌ ಯಾದವ್ ಅವರನ್ನು ಸಿಎಂ ಆಯ್ಕೆ ಮಾಡಿರುವ ಬಿಜೆಪಿ ಕೇಂದ್ರ ನಾಯಕರ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು. 

Women supporters get emotional as they meet outgoing Madhya Pradesh Chief Minister Shivraj Singh Chouhan in Bhopal on December 12, 2023.Women supporters get emotional as they meet outgoing Madhya Pradesh Chief Minister Shivraj Singh Chouhan in Bhopal on December 12, 2023.Women supporters get emotional as they meet outgoing Madhya Pradesh Chief Minister Shivraj Singh Chouhan in Bhopal on December 12, 2023.Women supporters get emotional as they meet outgoing Madhya Pradesh Chief Minister Shivraj Singh Chouhan in Bhopal on December 12, 2023.Women supporters get emotional as they meet outgoing Madhya Pradesh Chief Minister Shivraj Singh Chouhan in Bhopal on December 12, 2023.BJP made me CM for 18 years, where's the injustice, asks Chouhan - The Hindu

ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನನ್ನ ಅವಧಿಯಲ್ಲಿ ಕೈಗೊಂಡ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ಮೂಲಕ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಮಧ್ಯಪ್ರದೇಶವು ಹೊಸ ಛಾಪು ಮೂಡಿಸುತ್ತದೆ. ಇದಕ್ಕಾಗಿ ನಾನು ಅವರನ್ನು ಬೆಂಬಲಿಸುತ್ತೇನೆ ಎಂದರು. ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ. 2005 ರಲ್ಲಿ ಮುಖ್ಯಮಂತ್ರಿಯಾಗಿದ್ದೆ. ಉಮಾಭಾರತಿ ಅವರ ಕಠಿಣ ಪರಿಶ್ರಮದಿಂದ ಅಂದು ಸರ್ಕಾರ ರಚನೆಯಾಗಿತ್ತು. ನಾನು ಈಗ ನನಗಾಗಿ ಏನನ್ನಾದರೂ ಬಯಸುವುದಕ್ಕಿಂತ ಸಾಯುವುದೇ ಮೇಲು. ಇವತ್ತು ನಾನು ಇಲ್ಲಿಂದ ವಿದಾಯ ಹೇಳುತ್ತಿದ್ದೇನೆ. ನನ್ನ ಹೃದಯ ಸಂತೋಷ ಮತ್ತು ತೃಪ್ತಿಯಿಂದ ತುಂಬಿದೆ ಎಂದು ಹೇಳಿದರು.

ಚೌಹಾಣ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಸೋಮವಾರ ಅವರ ಮಹಿಳಾ ಅಭಿಮಾನಿಗಳು ಭೇಟಿಯಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ನಿಮಗೆ ಮತ ನೀಡಿದ್ದೇವೆ, ನೀವು ರಾಜೀನಾಮೆ ನೀಡಬಾರದು ಎಂದು ಕಣ್ಣೀರು ಹಾಕಿದರು. ಈ ವೇಳೆ ಚೌಹಾಣ್‌ ಅವರು ಮಹಿಳಾ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Bhopal, Outgoing Madhya Pradesh Chief Minister Shivraj Singh Chouhan on Tuesday said he will "rather die" than asking something for himself from his party. He will carry out whatever task the Bharatiya Janata Party gives him, said the four-term chief minister who would soon be replaced by Mohan Yadav following the party's resounding victory in the last month's assembly elections.