ಬ್ರೇಕಿಂಗ್ ನ್ಯೂಸ್
16-12-23 10:14 pm HK News Desk ದೇಶ - ವಿದೇಶ
ನವದೆಹಲಿ, ಡಿ.16: ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿರುವ ಲಲಿತ್ ಮೋಹನ್ ಝಾ ಪೊಲೀಸರ ವಿಚಾರಣೆಯಲ್ಲಿ ಸ್ಫೋಟಕ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಅಸಲಿಗೆ ಸಂಸತ್ತಿನಲ್ಲಿ ಒಳಗೆ ಮತ್ತು ಹೊರಗೆ ಮೈಗೆ ಬೆಂಕಿ ಹಚ್ಚಿಕೊಳ್ಳಲು ಪ್ಲಾನ್ ಮಾಡಿದ್ದರಂತೆ. ಆದರೆ, ಬೆಂಕಿಯಿಂದ ಗಾಯ ಆಗದಂತೆ ತಡೆಯುವ ಮೈಗೆ ಹಚ್ಚಿಕೊಳ್ಳುವ ಜೆಲ್ ಲಭ್ಯವಾಗದ ಕಾರಣ ಹೊಗೆ ಸಿಡಿಸುವುದಕ್ಕೆ ಮುಂದಾಗಿದ್ದರು ಎನ್ನುವ ಮಾಹಿತಿ ನೀಡಿದ್ದಾನೆ.
ಆರೋಪಿಗಳು ಪ್ಲಾನ್ ಎ ಮತ್ತು ಪ್ಲಾನ್ ಬಿ ಎಂಬ ಎರಡು ಐಡಿಯಾಗಳನ್ನು ಮಾಡಿಕೊಂಡಿದ್ದರು. ಪ್ಲಾನ್ ಎ ಪ್ರಕಾರ, ಮೈಗೆ ಹಚ್ಚಿಕೊಳ್ಳುವುದಕ್ಕೆ ಆದ್ಯತೆ ಇತ್ತು. ಸೂಕ್ತ ಸಂದರ್ಭದಲ್ಲಿ ಜೆಲ್ ಲಭ್ಯವಾಗದ ಕಾರಣ ಪ್ಲಾನ್ ಬಿ ಅನುಸರಿಸಿದ್ದರು. ಪ್ಲಾನ್ ಬಿ ಪ್ರಕಾರ, ಕಲರ್ ಹೊಗೆ ಸಿಡಿಸುವ ಕ್ಯಾನಿಸ್ಟರ್ ಬಳಸುವುದು ಯೋಜನೆ ಇತ್ತು. ಅದನ್ನೇ ಆರೋಪಿಗಳು ಅನುಸರಿಸಿದ್ದಾರೆ ಎಂಬುದು ಲಲಿತ್ ಝಾ ನೀಡಿರುವ ಮಾಹಿತಿ.

ನಾಲ್ವರು ಆರೋಪಿಗಳ ಮೊಬೈಲ್ ಫೋನ್ಗಗಳು ಲಲಿತ್ ಝಾನಲ್ಲಿಯೇ ಇದ್ದವು. ಆದರೆ ಅವನ್ನು ಸುಟ್ಟು ಹಾಕಿದ್ದಾನೆ ಎನ್ನಲಾಗುತ್ತಿದ್ದು, ಹೀಗೆ ಯಾಕೆ ಮಾಡಿದೆ ಎಂದು ಕೇಳಿದ ಪ್ರಶ್ನೆಗೆ, ಅದೇ ಮಾಸ್ಟರ್ ಪ್ಲಾನ್ ಎಂದು ಲಲಿತ್ ಝಾ ತಿಳಿಸಿದ್ದಾನಂತೆ. ಇದಲ್ಲದೆ, ಲಲಿತ್ ಝಾ ತನಿಖೆಗೆ ಸರಿಯಾಗಿ ಸಹಕರಿಸದೆ, ಪ್ರತಿ ಬಾರಿ ತನ್ನ ಹೇಳಿಕೆಯನ್ನು ಬದಲಿಸುತ್ತಿದ್ದಾನಂತೆ. ಆಮೂಲಕ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.13ರಂದು ಸಂಸತ್ ದಾಳಿಯ 22ನೇ ವಾರ್ಷಿಕ ದಿನದಂದೇ ನಾಲ್ವರು ಆರೋಪಿಗಳು ಸಂಸತ್ತಿನ ಒಳಗೆ ಮತ್ತು ಹೊರಗಡೆ ಹೊಗೆ ಬಾಂಬ್ ಸಿಡಿಸಿ ಭದ್ರತಾ ಉಲ್ಲಂಘನೆ ಮಾಡಿದ್ದರು. ಅಧಿವೇಶನ ನಡೆಯುತ್ತಿದ್ದಾಗಲೇ ಈ ರೀತಿ ಮಾಡುವ ಮೂಲಕ ಭಾರೀ ಭದ್ರತಾ ಲೋಪ ಎಸಗಿದ್ದರು. ಲೋಕಸಭೆಯ ಗ್ಯಾಲರಿಯಲ್ಲಿದ್ದ ಮನೋರಂಜನ್ ಮತ್ತು ಸಾಗರ್ ಶರ್ಮಾ ಅಲ್ಲಿಂದ ನೇರವಾಗಿ ಸಂಸದರು ಕುಳಿತಿದ್ದ ಅಂಗಣಕ್ಕೆ ಹಾರಿದ್ದ ಇಬ್ಬರು ಕಲರ್ ಬಾಂಬ್ ಸಿಡಿಸಿದ್ದಾರೆ.
As Delhi Police continues to investigate Parliament security breach conspiracy, key conspirator Lalit Mohan Jha made some shocking revelations during the interrogation and said that he and other members of the group had originally planned to immolate themselves inside and outside Parliament.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm