Farooq Abdullah, Jammu and Kashmir, Pakistan: ಮಾತುಕತೆಯಾಗದ ಹೊರತು ಜಮ್ಮು ಕಾಶ್ಮೀರವೂ ಭವಿಷ್ಯದ ಗಾಜಾಪಟ್ಟಿ ಆಗಲಿದೆ ; ಫಾರೂಕ್ ಅಬ್ದುಲ್ಲಾ ಆತಂಕ

26-12-23 07:12 pm       HK News Desk   ದೇಶ - ವಿದೇಶ

ಪಾಕಿಸ್ತಾನ - ಭಾರತ ನಡುವೆ ಮಾತುಕತೆಯಾಗದ ಹೊರತು ಇಸ್ರೇಲ್ - ಪ್ಯಾಲೆಸ್ತೀನ್ ನಡುವಿನ ಗಾಜಾದಂತೆಯೇ ಜಮ್ಮು ಕಾಶ್ಮೀರವೂ ಆಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಎಚ್ಚರಿಕೆ ನೀಡಿದ್ದಾರೆ. 

ನವದೆಹಲಿ, ಡಿ.26: ಪಾಕಿಸ್ತಾನ - ಭಾರತ ನಡುವೆ ಮಾತುಕತೆಯಾಗದ ಹೊರತು ಇಸ್ರೇಲ್ - ಪ್ಯಾಲೆಸ್ತೀನ್ ನಡುವಿನ ಗಾಜಾದಂತೆಯೇ ಜಮ್ಮು ಕಾಶ್ಮೀರವೂ ಆಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಎಚ್ಚರಿಕೆ ನೀಡಿದ್ದಾರೆ. 

ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಾಯಕರು ತಮ್ಮ ದ್ವಿಪಕ್ಷೀಯ ಸಮಸ್ಯೆಗಳಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಹೇಳಿದ್ದಾರೆ. 

ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ ನಮ್ಮ ನೆರೆಹೊರೆಯವರನ್ನಲ್ಲ. ನೆರೆಹೊರೆಯವರೊಂದಿಗೆ ಸ್ನೇಹದಿಂದ ಇದ್ದರೆ, ಇಬ್ಬರೂ ಪ್ರಗತಿ ಹೊಂದುತ್ತಾರೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು ಎಂಬುದನ್ನು ನೆನಪಿಸಿದ ಫಾರೂಕ್ ಅಬ್ದುಲ್ಲಾ, ಯುದ್ಧವು ಈಗ ಆಯ್ಕೆಯಾಗಿಲ್ಲ ಮತ್ತು ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕೂಡ ಹೇಳಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. 

ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳದಿದ್ದರೆ, ಇಸ್ರೇಲ್‌ನಿಂದ ಬಾಂಬ್ ದಾಳಿಗೆ ಒಳಗಾಗಿರುವ ಗಾಜಾ ಮತ್ತು ಪ್ಯಾಲೆಸ್ಟೀನ್‌ನಂತೆಯೇ ನಾವೂ (ಕಾಶ್ಮೀರ) ಭವಿಷ್ಯದಲ್ಲಿ ಅದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದವರು ಆತಂಕ ವ್ಯಕ್ತಪಡಿಸಿದರು.

Speaking to reporters, the former Jammu and Kashmir chief minister said if India remains with its neighbour (Pakistan), both countries will progress. He also referred to former Prime Minister Atal Bihari Vajpayee’s statement on India-Pakistan relations that “we can change our friends but not our neighbours”.