ಬ್ರೇಕಿಂಗ್ ನ್ಯೂಸ್
10-02-24 09:12 pm HK News Desk ದೇಶ - ವಿದೇಶ
ನವದೆಹಲಿ, ಫೆ.10: ಉತ್ತರಾಖಂಡ ರಾಜ್ಯದ ಹಲ್ದ್ ವಾನ್ ಜಿಲ್ಲೆಯ ಬನ್ ಭೂಲ್ ಪುರ ಪ್ರದೇಶದಲ್ಲಿ ಸದ್ಯ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಿಂಸಾಪೀಡಿತ ಜಾಗ ಹೊರತುಪಡಿಸಿ ಹೊರಭಾಗದಲ್ಲಿ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ. ಸರಕಾರಿ ಜಾಗದಲ್ಲಿ ಕಟ್ಟಲಾಗಿದ್ದ ಮದ್ರಸಾ ಕಟ್ಟಡ ತೆರವುಗೊಳಿಸಲು ಪೊಲೀಸ್ ಭದ್ರತೆಯೊಂದಿಗೆ ತೆರಳಿದ್ದಾಗ ಹಿಂಸಾಚಾರ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಐದು ಮಂದಿ ಸಾವಿಗೀಡಾಗಿದ್ದು, ನೂರಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲದೆ, ಪತ್ರಕರ್ತರು, ಅಧಿಕಾರಿಗಳು ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಬೆಂಗಳೂರಿನ ಕೆಜೆ ಹಳ್ಳಿಯಲ್ಲಿ ಯಾವ ರೀತಿ ನಡೆದಿತ್ತೋ ಅದೇ ರೀತಿ ಪೂರ್ವ ಯೋಜಿತ ಎನ್ನುವಂತೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಸಿಆರ್ ಪಿಎಫ್ ಸೇರಿದಂತೆ ಕೇಂದ್ರೀಯ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. 50ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 5 ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಹಿಂಸಾಚಾರ ನಡೆಸಿದ್ದಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೃತ್ಯದ ಹಿನ್ನೆಲೆಯಲ್ಲಿ ಹಲ್ದ್ ವಾನಿ ಮತ್ತು ಬನ್ ಭೂಲ್ ಪುರ ಪ್ರದೇಶಕ್ಕೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಭೇಟಿ ನೀಡಿದ್ದು, ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದ್ದಾರೆ. ಅಲ್ಲದೆ, ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಸರಕಾರ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ನಿರ್ಧಾರ ಕೈಗೊಂಡ ಎರಡೇ ದಿನದಲ್ಲಿ ಕೃತ್ಯ ನಡೆದಿರುವುದರಿಂದ ಹತಾಶ ಕಿಡಿಗೇಡಿಗಳಿಂದ ಘಟನೆ ಆಗಿರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಡಿಜಿಪಿ ಅಭಿನವ್ ಕುಮಾರ್ ಕೂಡ ಪೂರ್ವಯೋಜಿತ ಕೃತ್ಯದಂತೆ ತೋರುತ್ತಿದೆ, ನಾವು ಕಿಡಿಗೇಡಿಗಳನ್ನು ಪತ್ತೆ ಮಾಡುತ್ತಿದ್ದೇವೆ ಎಂದು ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮುಸ್ಲಿಮರದ್ದೇ ಬಾಹುಳ್ಯ, ಸರಕಾರಿ ಜಾಗ ಒತ್ತುವರಿ
ಬನ್ ಭೂಲ್ ಪುರ ಎನ್ನುವ ಈ ಪ್ರದೇಶ ಪೂರ್ತಿ ಮುಸ್ಲಿಮರೇ ಬಹುಸಂಖ್ಯಾತರಿರುವ ಜಾಗ. ಅಧಿಕಾರಿಗಳ ಪ್ರಕಾರ, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಮರದ್ದೇ ಮನೆಗಳು ಇಲ್ಲಿವೆಯಂತೆ. ಪಕ್ಕದ ಉತ್ತರ ಪ್ರದೇಶದ ಪಟ್ಟಣಗಳಾದ ಸ್ವಾರ್, ತಾಂಡಾ, ಬಹೇದಿ ಕಡೆಗಳಿಂದ ಸಾವಿರಾರು ಮುಸ್ಲಿಮರು ವಲಸೆ ಬಂದು ಹಲ್ದ್ ವಾನಿ ನಗರದ ಬನ್ ಭೂಲ್ ಪುರ ಪ್ರದೇಶದಲ್ಲಿ ನೆಲೆಸಿದ್ದರು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಅಲ್ಲಿ ವಿಪರೀತವಾಗಿ ಹೆಚ್ಚಿತ್ತು. ಅಲ್ಲದೆ, ಹೆಚ್ಚಿನ ಸರಕಾರಿ ಜಾಗಗಳಲ್ಲಿ ಮನೆ, ಕಟ್ಟಡಗಳನ್ನು ಕಟ್ಟಿಕೊಂಡಿದ್ದರು.
ಕೆಲವು ಕಡೆ ಸರಕಾರಿ ಜಾಗವನ್ನು ಬೇರೆಯವರಿಗೆ ಮಾರಲಾಗದು ಎನ್ನುವ ಷರತ್ತಿನೊಂದಿಗೆ ಪಡೆದಿದ್ದ ಜಾಗಗಳನ್ನೂ ಖರೀದಿಸಿ ಮುಸ್ಲಿಮರು ನೆಲೆಸಿದ್ದರು. ಬನ್ ಭೂಲ್ ಪುರ ಪಟ್ಟಣದಲ್ಲಿಯೇ 30 ಎಕರೆ ಜಾಗವನ್ನು ಅಕ್ರಮ ಎಂದು ಹಲ್ದ್ ವಾನಿ ಜಿಲ್ಲಾಡಳಿತ ಗುರುತಿಸಿತ್ತು. ಅಲ್ಲದೆ, ಅವನ್ನು ಕೋರ್ಟ್ ಆದೇಶದಂತೆ ತೆರವು ಮಾಡಲು ಮುಂದಾಗಿತ್ತು. ಈ ಪೈಕಿ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡಿದ್ದ ರೈಲ್ವೇ ಇಲಾಖೆಗೆ ಸೇರಿದ್ದ ಜಾಗದಲ್ಲಿ ಕಟ್ಟಲಾಗಿದ್ದ ಮಸೀದಿ ಮತ್ತು ಮದ್ರಸ ತೆರವುಗೊಳಿಸಲು ಒಂದು ವರ್ಷದ ಹಿಂದೆ ಹೈಕೋರ್ಟ್ ಆದೇಶ ಮಾಡಿತ್ತು. ಹೈಕೋರ್ಟ್ ಆದೇಶ ಹೊರಬಿದ್ದಾಗಲೂ ಬನ್ ಭೂಲ್ ಪುರ ಪ್ರದೇಶದ ಜನರು ಶಸ್ತ್ರ ಹಿಡಿದು ಪೊಲೀಸರ ಮುಂದೆ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಆಬಳಿಕ ಸ್ಥಳೀಯರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿ ಹೈಕೋರ್ಟ್ ಆದೇಶಕ್ಕೆ ತಡೆ ತಂದಿದ್ದರು.
ಮೊನ್ನೆ ಫೆ.8ರಂದು ರೈಲ್ವೇ ಇಲಾಖೆಗೆ ಸೇರಿದ್ದ ಅದೇ ಜಾಗದ ಬಗ್ಗೆ ಕೋರ್ಟ್ ಆದೇಶ ಜಾರಿಗೊಳಿಸಲು ಹಲ್ದ್ ವಾನಿ ಜಿಲ್ಲಾಡಳಿತ ಮುಂದಾಗಿತ್ತು. ನಗರಾಡಳಿತದ ಅಧಿಕಾರಿಗಳು ಸಾಕಷ್ಟು ಪೊಲೀಸರ ಭದ್ರತೆಯೊಂದಿಗೆ ಬುಲ್ಡೋಜರ್ ನುಗ್ಗಿಸಲು ಬಂದಿದ್ದರು. ಆದರೆ ದಿಢೀರ್ ಎನ್ನುವಂತೆ ಪೆಟ್ರೋಲ್ ಬಾಂಬ್ ತೂರಾಟದಿಂದಾಗಿ ಹಿಂಸಾಚಾರ ಭುಗಿಲೆದ್ದಿತ್ತು. ಬನ್ ಭೂಲ್ ಪುರ ಮತ್ತು ಹಲ್ದ್ ವಾನಿ ಪಟ್ಟಣದಲ್ಲಿ ಎಷ್ಟರ ಮಟ್ಟಿಗೆ ಸರಕಾರಿ ಜಾಗದ ಅತಿಕ್ರಮಣ ಆಗಿದೆಯೆಂದರೆ, ಇಂಥ ಅತಿಕ್ರಮಿತ ಜಾಗಗಳಿಗೆ ಪ್ರತ್ಯೇಕ ಹೆಸರನ್ನೇ ಇಟ್ಟುಕೊಂಡಿದ್ದರು. ಮಾಲಿಕ್ ಕಾ ಬಗೀಚಾ, ಕಾಬುಲ್ ಕಾ ಬಗೀಚಾ, ಸಫ್ದರ್ ಕಾ ಬಗೀಚಾ, ನಜಾಕತ್ ಖಾನ್ ಕಾ ಬಗೀಚಾ ಇತ್ಯಾದಿ ಅಲ್ಲಿನ ಪ್ರಮುಖರದ್ದೋ, ಎಲ್ಲಿಂದ ಬಂದು ನೆಲೆಸಿದ್ದರೋ ಅಂಥ ಕುಟುಂಬಸ್ಥರ ಹೆಸರುಗಳನ್ನೇ ಇಟ್ಟಿದ್ದರು. ಇದೇ ರೀತಿ ಹಲ್ದ್ ವಾನಿ ನಗರದಲ್ಲಿ ಹಲವಾರು ಕಡೆ ನಾಝೂಲ್ ಕಾ ಲ್ಯಾಂಡ್ (ಸರಕಾರಿ ಜಾಗ) ಇತ್ತು. ಹಾಗಂದ್ರೆ, ಸರಕಾರಿ ಜಾಗವನ್ನು ಲೀಸ್ ಮೇರೆಗೆ ನಿರ್ದಿಷ್ಟ ಉದ್ದೇಶಕ್ಕೆ ಇಂತಿಷ್ಟು ವರ್ಷಗಳಿಗೆಂದು ಕೊಡಲಾಗುತ್ತದೆ. ಅದನ್ನು ಇನ್ಯಾರಿಗೂ ಹಸ್ತಾಂತರ ಮಾಡುವಂತಿಲ್ಲ. ಆದರೆ ವಲಸೆ ಬಂದಿದ್ದ ಮುಸ್ಲಿಮರು ಇಂಥ ಜಾಗಗಳನ್ನೂ ಕಬಳಿಸಿಕೊಂಡಿದ್ದರು. ಇಂಥ ಜಾಗಗಳನ್ನು ಮರಳಿ ಪಡೆಯುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಉತ್ತರಾಖಂಡ ಪರಿವರ್ತನ್ ಪಾರ್ಟಿ ಅಧ್ಯಕ್ಷ ಪಿ.ಸಿ. ತಿವಾರಿ ಹೇಳುವ ಪ್ರಕಾರ, ನಾಝೂಲ್ ಲ್ಯಾಂಡ್ ಹಲ್ದ್ ವಾನಿ ಪಟ್ಟಣವಲ್ಲದೆ ರಾಜ್ಯದ ಬೇರೆ ಕಡೆಯೂ ಇದೆ. ಇವನ್ನೆಲ್ಲ ಸರಕಾರ ಮರಳಿ ಪಡೆಯುವುದು ಸಾಧ್ಯವೇ ಇಲ್ಲದ ಸ್ಥಿತಿ ಇದೆಯಂತೆ. ಬನ್ ಭೂಲ್ ಪುರದಲ್ಲಿ ಅತಿ ಹೆಚ್ಚು ಮುಸ್ಲಿಮರೇ ಇರುವುದರಿಂದ ರಾಜಕೀಯ ತುಷ್ಟೀಕರಣ ಹೆಚ್ಚಿರುವುದು ಅದಕ್ಕೆ ಕಾರಣ ಎಂದವರು ಹೇಳಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣದಿಂದಲೇ ಪ್ರತಿ ಬಾರಿ ಗೆಲ್ಲುವುದು ಮತ್ತು ಇಂಥ ಸರಕಾರಿ ಜಾಗದ ಒತ್ತುವರಿಗಳನ್ನು ತೆರವುಗೊಳಿಸುವುದಕ್ಕೆ ಆ ಶಾಸಕರೇ ಅಡ್ಡಿಯಾಗಿರುವುದು ದೊಡ್ಡ ಹಿನ್ನಡೆಯಾಗಿದೆ.
ಗುಪ್ತಚರ ವೈಫಲ್ಯ ಕಾರಣವೇ ?
ಹಿಂಸಾಚಾರ ಘಟನೆಗೆ ಗುಪ್ತಚರ ವೈಫಲ್ಯವೂ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಏಕರೂಪದ ನಾಗರಿಕ ಸಂಹಿತೆಯನ್ನು ಸಂಪುಟದಲ್ಲಿ ಜಾರಿಗೊಳಿಸಿದ ಎರಡೇ ದಿನದಲ್ಲಿ ಹಿಂಸೆ ಹೊತ್ತಿಕೊಂಡಿರುವುದು ಹತಾಶ ಜನರ ಕೃತ್ಯ ಆಗಿರಬಹುದು ಎನ್ನುವ ಮಾತು ಕೇಳಿಬಂದಿದೆ. ಉತ್ತರಾಖಂಡ್ ಪೊಲೀಸ್ ಇಲಾಖೆಯ ವಕ್ತಾರ ಆನಂದ್ ಭಾರ್ನೆ, ಗುಪ್ತಚರ ವೈಫಲ್ಯವೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ. (ಮೂಲ-ನ್ಯೂಸ್ 18 ಇಂಗ್ಲಿಷ್)
Uttarakhand’s security forces are keeping a strict vigil in Haldwani after violent clashes broke out between police and locals in the Banbhoolpura area on Thursday evening as the administration, in a bid to evict encroachers, bulldozed an “illegal” Madrasa.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm