ಬ್ರೇಕಿಂಗ್ ನ್ಯೂಸ್
15-02-24 11:27 am HK News Desk ದೇಶ - ವಿದೇಶ
ಅಬುಧಾಬಿ, ಫೆ.15: ಏಶ್ಯಾದ ಅತಿದೊಡ್ಡ ಮತ್ತು ವಿಶ್ವದ ಮೂರನೇ ಅತಿದೊಡ್ಡ ಹಿಂದು ದೇಗುಲ ಎಂದೆನಿಸಿರುವ, ಅರಬ್ ಸಂಯುಕ್ತ ಸಂಸ್ಥಾನದ(ಯುಎಇ) ಅಬುಧಾಬಿಯಲ್ಲಿ ನಿರ್ಮಾಣಗೊಂಡ ಮೊಟ್ಟಮೊದಲ ಬೃಹತ್ ಹಿಂದು ಮಂದಿರ, ಸ್ವಾಮಿ ನಾರಾಯಣ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ಭಾರತದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಜಗತ್ತಿನ ಮತ್ತೊಂದು ಭವ್ಯ ದೇಗುಲವನ್ನು ಸ್ವತಃ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿರುವುದು ವಿಶೇಷ. ಬೋಚಾಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥಾ ಎಂದು ಕರೆಯಲ್ಪಡುವ ಸಂಸ್ಥೆ (ಬಿಎಪಿಎಸ್) ಈ ಮಂದಿರವನ್ನು ಸ್ಥಾಪಿಸಿದ್ದು, ಸುಮಾರು 27 ಎಕರೆ ವ್ಯಾಪ್ತಿಯನ್ನು ಹೊಂದಿದೆ. ದೇಗುಲ ಸಂಕೀರ್ಣವೇ 14 ಎಕರೆಯಲ್ಲಿದ್ದರೆ, ಇನ್ನಿತರ ವಸತಿ, ಸಭಾಂಗಣ ಕಟ್ಟಡಗಳು 14 ಎಕರೆಯಲ್ಲಿದೆ. ಮದ್ಯಪ್ರಾಚ್ಯದಲ್ಲಿ ಕಲ್ಲುಗಳಿಂದ ನಿರ್ಮಿಸಿದ ಮೊದಲ ಹಿಂದು ಮಂದಿರ ಇದೆನಿಸಿದೆ.
ಅಬುಧಾಬಿ- ದುಬೈ ಹೆದ್ದಾರಿಯ ರಹ್ಬಾ ಪ್ರದೇಶದ ಅಬು ಮುರೇಖಾದಲ್ಲಿರುವ ಮಂದಿರವು ಹಿಂದು- ಮುಸ್ಲಿಂ ಭಾವೈಕ್ಯತೆ, ಸಾಮರಸ್ಯದ ಕೊಂಡಿಯಾಗಿ ಜಗತ್ತಿಗೆ ಕಾಣಿಸಿಕೊಳ್ಳಲಿದೆ. 2019ರಲ್ಲಿ ಮಂದಿರ ನಿರ್ಮಾಣದ ಕೆಲಸ ಆರಂಭಗೊಂಡಿದ್ದು 2024ರಲ್ಲಿ ದೇಗುಲ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡಿದೆ. ಏಕಕಾಲದಲ್ಲಿ ಹತ್ತು ಸಾವಿರ ಜನರು ದೇಗುಲ ದರ್ಶನ ಮಾಡುವಷ್ಟು ವ್ಯವಸ್ಥೆ ಇದೆ. ದೇವಸ್ಥಾನದಲ್ಲಿ ಸ್ವಾಮಿ ನಾರಾಯಣ, ಪುರುಷೋತ್ತಮ, ರಾಧಾಕೃಷ್ಣ, ರಾಮಸೀತೆ, ಲಕ್ಷ್ಮಣ, ಹನುಮಂತ, ಶಿವ ಪಾರ್ವತಿ, ಗಣೇಶ ಕಾರ್ತಿಕೇಯ, ಪದ್ಮಾವತಿ ವೆಂಕಟೇಶ್ವರ, ಜಗನ್ನಾಥ, ಅಯ್ಯಪ್ಪ ಸ್ವಾಮಿ ಸೇರಿದಂತೆ ಭಾರತದಲ್ಲಿ ಪೂಜೆಗೊಳ್ಳುವ ಪ್ರಮುಖ 27 ದೇವರುಗಳ ಮೂರ್ತಿಗಳನ್ನು ಪ್ರತಿಷ್ಠೆ ಮಾಡಲಾಗಿದೆ. ಆಮೂಲಕ ಅರಬ್ಬರ ನಾಡಿನಲ್ಲಿ ಭಾರತೀಯ ಪ್ರಣೀತ ಹಿಂದು ದೈವೀ ಪರಂಪರೆಗಳಿಗೆ ಪೂಜಿಸಲು ಆಸ್ಪದ ಸಿಕ್ಕಂತಾಗಿದೆ.
ಇದಲ್ಲದೆ, ದೇಗುಲ ವ್ಯಾಪ್ತಿಯಲ್ಲಿ ಏಳು ಗೋಪುರಗಳನ್ನು ನಿರ್ಮಿಸಿದ್ದು, ಅರು ಯುಎಇ ರಾಜವಂಶಸ್ಥರ ಮನೆತನಗಳನ್ನು ಬಿಂಬಿಸಲಿದೆ ಎನ್ನಲಾಗುತ್ತಿದೆ. ಹಿಂದು ವಾಸ್ತುಶಿಲ್ಪ ಮತ್ತು ಅರಬ್ ಶೈಲಿ ಎರಡೂ ಮೇಳೈಸಿದ್ದು ಒಳಾಂಗಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ಸೇರಿ ರಾಮಾಯಣ, ಮಹಾಭಾರತ, ಪುರಾಣ ಗ್ರಂಥಗಳ ಕಥೆಗಳನ್ನು ಕೆತ್ತನೆ ಮೂಲಕ ತೋರಿಸಿದ್ದಾರೆ. ವಿಶೇಷ ಅಂದ್ರೆ, ದೇಗುಲ ನಿರ್ಮಾಣದಲ್ಲಿ ಯಾವುದೇ ಕಡೆ ಕಬ್ಬಿಣ ಅಥವಾ ಸಿಮೆಂಟ್ ಬಳಸಿಕೊಂಡಿಲ್ಲ. ಬದಲಿಗೆ, ಅಮೃತಶಿಲೆ, ಇಟ್ಟಿಗೆಯನ್ನಷ್ಟೇ ಬಳಸಿದ್ದಾರೆ. ಹಳೆಕಾಲದಲ್ಲಿ ಭಾರತದಲ್ಲಿ ನಿರ್ಮಿಸಲಾಗುತ್ತಿದ್ದ ದೇಗುಲ ರಚನೆಯ ಪರಿಕಲ್ಪನೆ ಆಧಾರವಾಗಿಟ್ಟು ಈ ದೇವಸ್ಥಾನವನ್ನು ಅಪೂರ್ವ ರೀತಿಯಲ್ಲಿ ನಿರ್ಮಿಸಲಾಗಿದೆ.
With Prime Minister Narendra Modi inaugurating the first Hindu temple in Abu Dhabi on Wednesday, India joined the United Arab Emirates (UAE) to call the shrine a celebration of the friendship between the two nations. “This temple will be a symbol of unity and harmony,” Modi said after inaugurating the temple built by Bochasanwasi Shri Akshar Purushottam Swaminarayan Sanstha (BAPS) headquartered in Gujarat.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm