ಬ್ರೇಕಿಂಗ್ ನ್ಯೂಸ್
16-02-24 03:38 pm HK News Desk ದೇಶ - ವಿದೇಶ
ಕ್ಯಾಲಿಫೋರ್ನಿಯಾ, ಫೆ 16: ಕೇರಳ ಮೂಲದ ಕುಟುಂಬವೊಂದರ ಸದಸ್ಯರು ಅಮೆರಿಕದ ಕ್ಯಾಲಿಫೋರ್ನಿಯಾದ ಮನೆಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಅವರ ಪತ್ನಿ ಅಲೈಸ್ ಪ್ರಿಯಾಂಕಾ (40) ಹಾಗೂ 4 ವರ್ಷದ ಅವಳಿ ಮಕ್ಕಳಾದ ನೋಹ್ ಮತ್ತು ನೀತನ್ ಎಂದು ಗುರುತಿಸಲಾಗಿದೆ. ಇದು ಕೊಲೆ- ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ಮನೆಯಲ್ಲಿ ಯಾರೂ ಫೋನ್ ಕರೆಗಳಿಗೆ ಸ್ಪಂದಿಸದ ಕಾರಣ ಅನುಮಾನಗೊಂಡ ಕುಟುಂಬದ ಸಂಬಂಧಿಕರು, ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮೃತದೇಹಗಳು ಪತ್ತೆಯಾಗಿವೆ.
ಇಂಡಿಯನ್- ಅಮೆರಿಕನ್ ದಂಪತಿ ಆನಂದ್ ಮತ್ತು ಅಲೈಸ್ ಅವರು ತಮ್ಮ ಸ್ನಾನದ ಕೋಣೆಯಲ್ಲಿ ಗುಂಡೇಟಿನ ಗಾಯದಿಂದ ಮೃತಪಟ್ಟಿದ್ದಾರೆ. ಅವರ ಇಬ್ಬರು ಮಕ್ಕಳ ಶವಗಳು ಬೆಡ್ ರೂಂನಲ್ಲಿ ಪತ್ತೆಯಾಗಿವೆ. ಅವರ ಸಾವಿನ ಕುರಿತಾದ ತನಿಖೆ ಇನ್ನೂ ನಡೆಯುತ್ತಿದೆ.
"ಮನೆಗೆ ಆಗಮಿಸಿದ ಪೊಲೀಸರಿಗೆ ಒಳಗಿನಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಅವರು ಮನೆಯ ಹೊರಗಿನ ಭಾಗಗಳನ್ನು ತಪಾಸಣೆ ನಡೆಸಿದರು. ಯಾರೂ ಬಲವಂತವಾಗಿ ಪ್ರವೇಶಿಸಿದ ಸುಳಿವು ಇರಲಿಲ್ಲ. ಚಿಲಕ ಹಾಕದ ಕಿಟಕಿಯನ್ನು ಕಂಡ ಪೊಲೀಸರು, ಮನೆ ಒಳಗೆ ಪ್ರವೇಶಿಸಿದರು. ಅಲ್ಲಿ ಒಳಗೆ ನಾಲ್ವರ ಶವಗಳು ಕಂಡುಬಂದಿವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
9 ಎಂಎಂ ಪಿಸ್ತೂಲು ಮತ್ತು ಲೋಡೆಡ್ ಮ್ಯಾಗಜಿನ್ ಬಾತ್‌ರೂಂನಲ್ಲಿ ದೊರಕಿವೆ. 2020ರಲ್ಲಿ 2.1 ಮಿಲಿಯನ್ ಡಾಲರ್‌ಗೆ ಈ ಮನೆಯನ್ನು ದಂಪತಿ ಖರೀದಿಸಿದ್ದರು.
ಇದು ಕೊಲೆ- ಆತ್ಮಹತ್ಯೆ ಪ್ರಕರಣದಂತೆ ಕಂಡುಬರುತ್ತಿದೆ. ಆದರೆ ಯಾವುದೇ ಇತರೆ ಸಾಧ್ಯತೆಗಳನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುಟುಂಬ ಕೇರಳ ಮೂಲದ್ದಾಗಿದ್ದು, ಕಳೆದ 9 ವರ್ಷಗಳಿಂದ ಅಮೆರಿಕದಲ್ಲಿ ವಾಸವಿತ್ತು. ಆನಂದ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಅವರ ಪತ್ನಿ ಅಲೈಸ್ ಸೀನಿಯರ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರು ನ್ಯೂಜೆರ್ಸಿಯಿಂದ ಸ್ಯಾನ್ ಮಾಟೆಯೊ ಕೌಂಟಿಗೆ ಸ್ಥಳಾಂತರವಾಗಿದ್ದರು.
ಕೋರ್ಟ್ ದಾಖಲೆಗಳ ಪ್ರಕಾರ, ಪತ್ನಿಯಿಂದ ವಿಚ್ಛೇದನ ಪಡೆಯಲು ಆನಂದ್ 2016ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಬೇರ್ಪಡುವಿಕೆಯನ್ನು ಕೋರ್ಟ್ ಮಾನ್ಯ ಮಾಡಿರಲಿಲ್ಲ. ಇದರ ಬಳಿಕ ಅವರಿಗೆ ಅವಳಿ ಮಕ್ಕಳು ಜನಿಸಿದ್ದರು.
ಮೆಟಾದಲ್ಲಿ ಕೆಲಸ ಮಾಡುತ್ತಿದ್ದ ಆನಂದ್, ಕಳೆದ ವರ್ಷದ ಜೂನ್‌ನಲ್ಲಿ ಅದರಿಂದ ಹೊರಬಂದು, ಲಾಜಿಟ್ಸ್ ಎನ್ನುವ ಸ್ವಂತ ಕೃತಕ ಬುದ್ಧಿಮತ್ತೆಯ ಕಂಪೆನಿಯನ್ನು ಹುಟ್ಟುಹಾಕಿದ್ದರು.
An Indian-origin techie is suspected of killing his wife and four-year-old twins before turning the gun on himself in a gruesome murder-suicide in California, police said today. The statement comes days after Anand Sujith Henry, 42, his wife Alice Priyanka, 40, and their twin sons Noah and Neithan were found dead at their $2.1 million home in California's San Mateo.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm