Jagadguru Rambhadracharya, Jnanpith Award: ಉರ್ದು ಕವಿ, ಖ್ಯಾತ ಗೀತ ರಚನೆಕಾರ ಗುಲ್ಜಾರ್‌, ಸಂಸ್ಕೃತ ವಿದ್ವಾಂಸ, 22 ಭಾಷೆಗಳ ಪಂಡಿತ ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ 

18-02-24 01:34 pm       HK News Desk   ದೇಶ - ವಿದೇಶ

ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಗೌರವ ‘ಜ್ಞಾನಪೀಠ’ ಪ್ರಶಸ್ತಿಗೆ ಉರ್ದು ಕವಿ ಹಾಗೂ ಗೀತ ರಚನೆಕಾರ ಗುಲ್ಜಾರ್‌ ಹಾಗೂ ಸಂಸ್ಕೃತ ಸೇರಿ 22 ಭಾಷೆಗಳ ಪಂಡಿತ, ಜಗದ್ಗುರು ರಾಮಭದ್ರಾಚಾರ್ಯ ಪಾತ್ರರಾಗಿದ್ದಾರೆ.

ನವದೆಹಲಿ, ಫೆ.18: ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಗೌರವ ‘ಜ್ಞಾನಪೀಠ’ ಪ್ರಶಸ್ತಿಗೆ ಉರ್ದು ಕವಿ ಹಾಗೂ ಗೀತ ರಚನೆಕಾರ ಗುಲ್ಜಾರ್‌ ಹಾಗೂ ಸಂಸ್ಕೃತ ಸೇರಿ 22 ಭಾಷೆಗಳ ಪಂಡಿತ, ಜಗದ್ಗುರು ರಾಮಭದ್ರಾಚಾರ್ಯ ಪಾತ್ರರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಾಹಿತಿ ಪ್ರತಿಭಾ ರೇ ಅಧ್ಯಕ್ಷತೆಯಲ್ಲಿ ಈ ಆಯ್ಕೆ ಮಾಡಲಾಗಿದೆ. 

ಸಂಸ್ಕೃತ ಲೇಖಕರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಎರಡನೇ ಬಾರಿ. ಗುಲ್ಜಾರ್‌ ಈ ಮಹೋನ್ನತ ಪ್ರಶಸ್ತಿ ಗಳಿಸುತ್ತಿರುವ ಉರ್ದು ಸಾಹಿತಿಗಳಲ್ಲಿ ಐದನೆಯವರು. ಇದು 11 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಮತ್ತು ವಾಗ್ದೇವಿಯ ಪ್ರತಿಮೆಯನ್ನು ಒಳಗೊಂಡಿದೆ. ಸಂಪೂರಣ್‌ ಸಿಂಗ್‌ ಕಲ್ರಾ(90) ಎಂಬ ಮೂಲ ಹೆಸರಿನ ಇವರು ಸಾಹಿತ್ಯ ಕ್ಷೇತ್ರದಲ್ಲಿ ‘ಗುಲ್ಜಾರ್‌’ ಎಂದೇ ಪ್ರಸಿದ್ಧರು. ‘ಸ್ಲಮ್‌ ಡಾಗ್‌ ಮಿಲಿಯನೇರ್‌’ ಎಂಬ ಚಿತ್ರಕ್ಕೆ ‘ಜೈ ಹೋ’ ಎಂಬ ಗೀತೆ ರಚಿಸಿದ್ದು ಖ್ಯಾತಿ ಗಳಿಸಿತ್ತು. ಇದಕ್ಕಾಗಿ 2009ರಲ್ಲಿ ಆಸ್ಕರ್‌ ಪ್ರಶಸ್ತಿ ಗಳಿಸಿದ್ದರು. ಇವರು ಕವಿ, ನಾಟಕಕಾರ, ಚಿತ್ರಕತೆಗಾರ, ನಿರ್ದೇಶಕರಾಗಿದ್ದಾರೆ. 

ಉರ್ದು ಭಾಷೆಯಲ್ಲಿ ತ್ರಿಪದಿ ಚಂದೋಪ್ರಕಾರವನ್ನು ಮೊದಲ ಬಾರಿಗೆ ಪರಿಚಯಿಸಿದವರು. ಮಕ್ಕಳ ಕಾವ್ಯದಲ್ಲೂ ಅಳಿಸಲಾರದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಗುಲ್ಜಾರ್‌ ಅವರಿಗೆ 2002 ರಲ್ಲಿ ಸಾಹಿತ್ಯ ಅಕಾಡೆಮಿ ಮತ್ತು 2004 ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಇದಲ್ಲದೆ, 2013ರಲ್ಲಿ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಅವರಿಗೆ ಒಲಿದಿದೆ. 

ಜಗದ್ಗುರು ರಾಮಭದ್ರಾಚಾರ್ಯರು ಬಹುಶ್ರುತ ವಿದ್ವಾಂಸರು. ಕವಿ, ವ್ಯಾಖ್ಯಾನಕಾರ, ತತ್ವಜ್ಞಾನಿ, ಗಾಯಕ, ಕಥಾ ವಿದ್ವಾನ್‌, ಗೀತರಚನೆಕಾರ. ದೃಷ್ಟಿಯಿಂದ ಅಂಧರಾದರೂ ಬಹುಮುಖ ಪ್ರತಿಭೆಯುಳ್ಳವರು. ಉತ್ತರಪ್ರದೇಶದ ಜೌನ್‌ಪುರದ ಖಾಂಡಿ ಖುದ್‌ರ್‍ ಗ್ರಾಮದಲ್ಲಿ ಜನನ. ಎರಡು ತಿಂಗಳು ಶಿಶುವಾಗಿದ್ದಾಗಲೇ ಕಣ್ಣಿನಲ್ಲಿ ಟ್ರಕೋಮಾ ಕಾಣಿಸಿಕೊಂಡಿತ್ತು. ಹಳ್ಳಿ ವೈದ್ಯರು ಕಣ್ಣಿಗೆ ಔಷಧಿ ಹಾಕಿದ್ದರಿಂದ ಕಣ್ಣುಗಳು ಶಾಶ್ವತವಾಗಿ ನಿಸ್ತೇಜವಾಗಿದ್ದವು. ಆದರೆ ಈ ಬಾಲಕ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದಿದ್ದರು. 

ರಮಾನಂದ ಪಂಥದ ಪ್ರಸ್ತುತ ನಾಲ್ವರು ಜಗದ್ಗುರುಗಳಲ್ಲಿ ಒಬ್ಬರು. ಚಿತ್ರಕೂಟ ಮೂಲದ ಸಂತ ತುಳಸಿದಾಸರ ಹೆಸರಿನ ಸೇವಾ ಸಂಸ್ಥೆ ತುಳಸಿ ಪೀಠದ ಸ್ಥಾಪಕ ಅಧ್ಯಕ್ಷರು. 22 ಭಾಷೆಗಳ ತಜ್ಞ. ಈ ಕಾರಣಕ್ಕೆ ಸಂಸ್ಕೃತ, ಹಿಂದಿ, ಅವಧಿ ಮತ್ತು ಮೈಥಿಲಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಲೇಖಕರು. ನಾಲ್ಕು ಮಹಾಕಾವ್ಯಗಳು (ಸಂಸ್ಕೃತದಲ್ಲಿ ಎರಡು ಮತ್ತು ಹಿಂದಿಯಲ್ಲಿ ಎರಡು), ರಾಮಚರಿತಮಾನಸದ ಬಗ್ಗೆ ಹಿಂದಿ ವ್ಯಾಖ್ಯಾನ, ಅಷ್ಟಾಧ್ಯಾಯ ಬಗ್ಗೆ ಕಾವ್ಯಾತ್ಮಕ ಸಂಸ್ಕೃತ ವ್ಯಾಖ್ಯಾನ ಮತ್ತು ಪ್ರಸ್ಥಾನತ್ರಯಿ (ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಪ್ರಧಾನ ಉಪನಿಷತ್ತುಗಳು) ಸೇರಿದಂತೆ 240 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.

The Jnanpith Award, India’s most prestigious literary accolade, has announced its recipients for the year 2023, marking a momentous occasion in the annals of Indian literature. This year, the honour is bestowed upon two luminaries from the world of letters: celebrated Urdu poet and Bollywood personality Gulzar, and the distinguished Sanskrit scholar and spiritual leader Jagadguru Rambhadracharya. Their selection for the 58th edition of the award underscores the rich diversity and depth of Indian literary traditions, spanning the classical to the contemporary.