Lok Sabha polls, Kumaraswamy, Amit Shah: ಲೋಕಸಮರ ; ಜೆಡಿಎಸ್ ಗೆ ಮೂರು ಸೀಟು ಬಿಟ್ಟುಕೊಟ್ಟ ಬಿಜೆಪಿ ಹೈಕಮಾಂಡ್, ದೆಹಲಿಯಲ್ಲಿ ಕುಮಾರಸ್ವಾಮಿ- ಅಮಿತ್ ಷಾ ಮಾತುಕತೆ, ಮಂಡ್ಯದಲ್ಲಿ ರೆಬಲ್ ಆಗುತ್ತಾರಾ ಸುಮಲತಾ ? 

22-02-24 04:35 pm       HK News Desk   ದೇಶ - ವಿದೇಶ

ಲೋಕಸಮರಕ್ಕೆ ದಿನ ಗಣನೆ ಇರುವಾಗಲೇ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ. ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್​ ಷಾ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. 

ನವದೆಹಲಿ, ಫೆ.22: ಲೋಕಸಮರಕ್ಕೆ ದಿನ ಗಣನೆ ಇರುವಾಗಲೇ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ. ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್​ ಷಾ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಮೂಲಗಳ ಪ್ರಕಾರ ಜೆಡಿಎಸ್​ಗೆ 3 ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್​ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಡಲು ತೀರ್ಮಾನಿಸಿದೆ. ಜೆಡಿಎಸ್, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಕ್ಷೇತ್ರಗಳನ್ನೂ ತಮಗೆ ನೀಡಬೇಕೆಂದು ಬೇಡಿಕೆ ಇಟ್ಟಿತ್ತು. ಸದ್ಯ 3 ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದ್ದು, ಉಳಿದಂತೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ನಿರ್ಧಾರಕ್ಕೆ ಬರಲು ಸಹಮತ ತೋರಲಾಗಿದೆ. 

ಕರ್ನಾಟಕದ ಜನಸಂಖ್ಯೆಯ ಸುಮಾರು 16 ಶೇ.ದಷ್ಟಿರುವ ಒಕ್ಕಲಿಗ ಮತವನ್ನು ಪರಿಗಣಿಸಿ ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿಗೆ ಮುಂದಾಗಿದೆ. ಜೆಡಿಎಸ್ ಬೇಡಿಕೆ ಇಟ್ಟಿರುವ ಎಲ್ಲ ಕ್ಷೇತ್ರಗಳು ಒಕ್ಕಲಿಗರ ಭದ್ರಕೋಟೆಗಳಾಗಿವೆ. ಹೀಗಾಗಿ ಆ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಾಪಿಸುವ ಇರಾದೆಯಲ್ಲಿ ಜೆಡಿಎಸ್ ಇದೆ. ಆದರೆ ಈ ಪೈಕಿ ಮೂರು ಕ್ಷೇತ್ರಗಳನ್ನು ಬಿಜೆಪಿ ಬಿಟ್ಟು ಕೊಡಲು ಮುಂದಾಗಿದೆ. ಇದೇ ಫೈನಲ್ ಆದಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಬಿಜೆಪಿ ಟಿಕೆಟ್ ಸಿಗದೆ ಮತ್ತೆ ಬಂಡಾಯ ಸಾರುವ ಸಾಧ್ಯತೆಯಿದೆ.

Former Chief Minister and Karnataka JD (S) President H.D. Kumaraswamy met Union Home Minister Amit Shah in New Delhi on Thursday and held a meeting for 30 minutes at his office.Sources stated that Kumaraswamy met Amit Shah in the wake of taking a final decision on seat-sharing between the parties, and also regarding rise of dissent against JD (S) from certain BJP leaders in the state. Sources further explained that Kumaraswamy insisted with Amit Shah to allow JD (S) candidates to contest from Mandya, Hassan and Bengaluru Rural or Kolar Lok Sabha seats.