LPG cylinders, PM Modi, International Women's Day: ಅಡುಗೆ ಅನಿಲ ಸಿಲಿಂಡರ್ ದರ ನೂರು ರೂ. ಇಳಿಕೆ ; ಮಹಿಳಾ ದಿನಾಚರಣೆಗೆ ಮಹಿಳೆಯರಿಗೆ ಮೋದಿ ಗಿಫ್ಟ್ ! ಲೋಕಸಭೆ ಚುನಾವಣೆಗೂ ಮುನ್ನ ಮಹತ್ವದ ಘೋಷಣೆ 

08-03-24 02:15 pm       HK News Desk   ದೇಶ - ವಿದೇಶ

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರ ಜನಸಾಮಾನ್ಯರ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 100 ರೂಪಾಯಿ ಇಳಿಕೆ ಮಾಡಿದೆ.

ನವದೆಹಲಿ, ಮಾ.8: ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರ ಜನಸಾಮಾನ್ಯರ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 100 ರೂಪಾಯಿ ಇಳಿಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಗಿಫ್ಟ್ ನೀಡಿದ್ದಾರೆ. 

ಈಗಾಗಲೇ ಉಜ್ವಲ ಯೋಜನೆಯಡಿ ಬಡ ಕುಟುಂಬಕ್ಕೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ಸರಕಾರ 300 ರೂ. ಸಬ್ಸಿಡಿ ನೀಡುತ್ತಿದೆ. ಸಬ್ಸಿಡಿ ಯೋಜನೆಯನ್ನು ಏಪ್ರಿಲ್ 1ರಿಂದ ಆರಂಭಿಸಿ ಮುಂದಿನ ಒಂದು ವರ್ಷದ ವರೆಗೆ ವಿಸ್ತರಿಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಎಕ್ಸ್‌'ನಲ್ಲಿ ಈ ಬಗ್ಗೆ ಫೋಸ್ಟ್‌ ಹಾಕಿರುವ ಪ್ರಧಾನಿ ನರೇಂದ್ರ ಮೋದಿ, ಇದು ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ. ವಿಶೇಷವಾಗಿ ಮಹಿಳೆಯರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ. 

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಪ್ರತಿ ವರ್ಷಕ್ಕೆ 12 ಸಿಲಿಂಡರ್​ಗಳಿಗೆ ಅಂದರೆ 14.2 ಕೆಜಿ ತೂಕದ ಸಿಲಿಂಡರ್‌ಗಳಿಗೆ 200 ರೂ.ಗಳಿಂದ 300 ರೂ.ಗೆ ಸಬ್ಸಿಡಿ ಹೆಚ್ಚಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಿಲಿಂಡರ್‌ಗೆ 300 ರೂ. ಸಬ್ಸಿಡಿ ನೀಡಲಾಗಿದ್ದು, ಇದು ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ. 

ಸದ್ಯ ಕೇಂದ್ರ ಸರ್ಕಾರ ಪ್ರತಿ ಸಿಲಿಂಡರ್​ಗೆ 300 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಈಗ ಮತ್ತೆ 100 ರೂ. ಸಬ್ಸಿಡಿ ಘೋಷಣೆ ಮಾಡಿರುವುದರಿಂದ ಒಟ್ಟಾರೆ ಒಂದು ಸಿಲಿಂಡರ್​ಗೆ 400 ರೂಪಾಯಿ ಸಬ್ಸಿಡಿ ಸಿಗಲಿದೆ. ಸಬ್ಸಿಡಿ ಹೊರತು ಪಡಿಸಿ ಸಿಲಿಂಡರ್ ಬೆಲೆ 555 ರೂಪಾಯಿ ಇದ್ದು, ಒಂದೊಮ್ಮೆ ಸಬ್ಸಿಡಿ ತೆಗೆದು ಹಾಕಿದರೆ ಒಂದು ಸಿಲಿಂಡರ್​ಗೆ 955 ರೂ. ನೀಡಬೇಕಾಗುತ್ತದೆ.

On the occasion of International Women's Day, Prime Minister Narendra Modi announced a reduction of Rs 100 in the prices of LPG cylinders. The revised prices will come into effect beginning midnight, government sources said.