Sudha Murty, Rajya Sabha, PM Modi, Womens Day: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನ ; ವೀರೇಂದ್ರ ಹೆಗ್ಗಡೆ ಬಳಿಕ ಮತ್ತೊಬ್ಬ ಕನ್ನಡಿಗರಿಗೆ ರಾಜ್ಯಸಭೆ ಗೌರವ 

08-03-24 02:28 pm       HK News Desk   ದೇಶ - ವಿದೇಶ

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರಪತಿ ಮೂಲಕ ರಾಜ್ಯಸಭೆ ಸ್ಥಾನಕ್ಕೆ ಸುಧಾಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿದೆ. 

ನವದೆಹಲಿ, ಮಾ.8: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರಪತಿ ಮೂಲಕ ರಾಜ್ಯಸಭೆ ಸ್ಥಾನಕ್ಕೆ ಸುಧಾಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿದೆ. 

ಮಹಿಳಾ ದಿನಾಚರಣೆ ದಿನವೇ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಸುಧಾಮೂರ್ತಿ ಅವರ ಹಾಜರಿಯು ನಮ್ಮ 'ನಾರಿ ಶಕ್ತಿ'ಗೆ ಸಾಕ್ಷಿಯಾಗಲಿದೆ ಎಂದು ಬಣ್ಣಿಸಿದ್ದಾರೆ. ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಬಲ ಹಾಗೂ ಸಾಮರ್ಥ್ಯಕ್ಕೆ ಸುಧಾಮೂರ್ತಿ ಉದಾಹರಣೆಯಾಗಿದ್ದಾರೆ.‌ ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿ ನಮ್ಮ 'ನಾರಿ ಶಕ್ತಿ' ಘೋಷಣೆಗೆ  ಶಕ್ತಿಶಾಲಿ ಪುರಾವೆಯಾಗಲಿದೆ. ಫಲಪ್ರದ ಸಂಸದೀಯ ಅಧಿಕಾರಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ" ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮೋದಿ ತಿಳಿಸಿದ್ದಾರೆ. 

Sudha Murty nominated to Rajya Sabha, announces PM Modi | Latest News India  - Hindustan Times

ಸಂಸತ್ತಿನ ಮೇಲ್ಮನೆಗೆ 12 ಸದಸ್ಯರನ್ನು ರಾಷ್ಟ್ರಪತಿ ನೇರವಾಗಿ ನಾಮನಿರ್ದೇಶನ ಮಾಡುತ್ತಾರೆ. ಕಲೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ಸಲ್ಲಿಸಿದವರಿಗೆ ಈ ಗೌರವ ನೀಡಲಾಗುತ್ತದೆ. ಪ್ರಸ್ತುತ ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರ ಒಂದು ಸ್ಥಾನ ಖಾಲಿ ಇತ್ತು. ಆ ಸ್ಥಾನಕ್ಕೆ ಸುಧಾ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕರ್ನಾಟಕದಿಂದ ನಾಮನಿರ್ದೇಶನಗೊಂಡ ಮತ್ತೊಬ್ಬ ರಾಜ್ಯಸಭೆ ಸದಸ್ಯರು.

Infosys founder Narayana Murthy's wife Sudha Murty is nominated to Rajya Sabha by President Droupadi Murmu, Prime Minister Narendra Modi announces on Women's Day in a social media post.