Petrol, Diesel Price; ಲೋಕಸಭಾ ಚುನಾವಣೆ ಹಿನ್ನೆಲೆ ;  ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ ಗೆ 2 ರೂ. ಕಡಿತ !

14-03-24 11:20 pm       HK NEWS   ದೇಶ - ವಿದೇಶ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ದೇಶದ ಜನರಿಗೆ ಗಿಫ್ಟ್ ಕೊಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತಲಾ 2 ರೂ.ಗಳಂತೆ ಇಳಿಕೆ ಮಾಡಿ ಪ್ರಕಟಣೆ ಹೊರಡಿಸಿದೆ.

ನವದೆಹಲಿ, ಮಾ 14: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ದೇಶದ ಜನರಿಗೆ ಗಿಫ್ಟ್ ಕೊಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತಲಾ 2 ರೂ.ಗಳಂತೆ ಇಳಿಕೆ ಮಾಡಿ ಪ್ರಕಟಣೆ ಹೊರಡಿಸಿದೆ. ಮಾ. 15ರ ಬೆಳಗ್ಗೆ 6 ಗಂಟೆಯಿಂದ ಹೊಸ ದರಗಳು ಜಾರಿಯಾಗುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಎಲ್ ಪಿಜಿ ಗ್ಯಾಸ್ ಹಾಗೂ ಸಿಎನ್ ಜಿ ಇಂಧನಗಳ ಬೆಲೆಯನ್ನು ಕೇಂದ್ರ ಸರ್ಕಾರ ಅಲ್ಪ ಇಳಿಸಿತ್ತು. ಅದರ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳೂ ಇಳಿಮುಖವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆ ನಿರೀಕ್ಷೆಯೀಗ ನಿಜವಾಗಿದೆ.

ಬೆಂಗಳೂರಿನಲ್ಲಿ ಮಾ. 13- 14ರ ಪೆಟ್ರೋಲ್ ದರ ಪ್ರತಿ ಲೀಟರಿಗೆ 101.94 ರೂ.ಇದ್ದು, ಪರಿಷ್ಕತರ ದರಗಳು ಅನ್ವಯವಾದ ನಂತರ ಮಾ. 14ರ ಮಧ್ಯರಾತ್ರಿಯಿಂದ ಪ್ರತಿ ಲೀಟರಿಗೆ 99.94 ರೂ. ಆಗಲಿದೆ. ಇನ್ನು, ಮಾ. 13- 14ರಂದು ಪೆಟ್ರೋಲ್ ನ ದರ ಪ್ರತಿ ಲೀಟರ್ ಗೆ 87.89 ಇದ್ದು, ಇದರ ದರ ಪ್ರತಿ ಲೀಟರ್ ಗೆ 85.89 ರೂ. ಆಗಲಿದೆ.

The Centre reduced petrol and diesel prices by ₹ 2, Union Minister for Petroleum and Natural Gas, Hardeep Singh Puri, said on X. The announcement comes weeks ahead of the Lok Sabha elections.