Gujarat, Ahmedabad, attack foreign students: ಗುಜರಾತ್ ವಿ.ವಿಯಲ್ಲಿ ನಮಾಜ್ ಮಾಡುತ್ತಿದ್ದ ಐವರು ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಮನಬಂದಂತೆ ಹಲ್ಲೆ, ಹಾಸ್ಟೆಲ್ ಒಳಗೆ ನುಗ್ಗಿ ದಾಂದಲೆ, ಓವೈಸಿ ಖಂಡನೆ, ಇಬ್ಬರ ಸೆರೆ !

17-03-24 09:41 pm       HK News Desk   ದೇಶ - ವಿದೇಶ

ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ರಾತ್ರಿ ಕ್ಯಾಂಪಸ್ ಒಳಗೆ ನುಗ್ಗಿದ ಗುಂಪೊಂದು, ಆಫ್ರಿಕಾ, ಅಫ್ಘಾನಿಸ್ತಾನ್ ಮತ್ತು ಉಜ್ಬೇಕಿಸ್ತಾನ ದೇಶಗಳ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ  ಘಟನೆ ವರದಿಯಾಗಿದೆ.

ಅಹಮದಾಬಾದ್, ಮಾ 17: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ರಾತ್ರಿ ಕ್ಯಾಂಪಸ್ ಒಳಗೆ ನುಗ್ಗಿದ ಗುಂಪೊಂದು, ಆಫ್ರಿಕಾ, ಅಫ್ಘಾನಿಸ್ತಾನ್ ಮತ್ತು ಉಜ್ಬೇಕಿಸ್ತಾನ ದೇಶಗಳ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ  ಘಟನೆ ವರದಿಯಾಗಿದೆ. ಈ ದಾಳಿಯಲ್ಲಿ ಐವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಅಹಮದಾಬಾದ್ ಪೊಲೀಸರು ಈ ಬಗ್ಗೆ  ಮಾಹಿತಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ಮತ್ತು ಹಾಸ್ಟೆಲ್ ಕೊಠಡಿಗಳನ್ನು ಧ್ವಂಸ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.

A group of unknown miscreants attacked foreign students at Gujarat University Block A hostel campus in Ahmedabad. Police are taking action against the perpetrators. (Image: X)

Five foreign students injured in mob attack at Gujarat University: Police |  Latest News India - Hindustan Times

International Students From Africa, Afghanistan, Uzbekistan Studying in Gujarat  University Assaulted for Offering Taraweeh Namaz in Hostel Campus, Videos  of Attack Surface | 📰 LatestLY

ಶನಿವಾರ ತಡರಾತ್ರಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಐವರು ವಿದೇಶಿ ವಿದ್ಯಾರ್ಥಿಗಳು ತಾವು ತಂಗಿದ್ದ ಕೊಠಡಿಯಲ್ಲಿ ನಮಾಜ್ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. 20ಕ್ಕಿಂತ ಹೆಚ್ಚಿನ ಜನರ ಗುಂಪು ಆವರಣಕ್ಕೆ ನುಗ್ಗಿ ಧಾರ್ಮಿಕ ಘೋಷಣೆಗಳನ್ನು ಕೂಗಿದ್ದರಿಂದ ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

Gujarat: Students from Africa, Afghanistan, Sri Lanka attacked at Gujarat  University while offering prayers – India TV

Gujarat University international students attacked by mob in hostel; Stones  pelted & vehicles vandalised

ಐವರು ವಿದ್ಯಾರ್ಥಿಗಳು ಉಜ್ಬೇಕಿಸ್ತಾನ್, ಅಫ್ಘಾನಿಸ್ತಾನ್, ತಜಕಿಸ್ತಾನ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಿಂದ ಬಂದವರು. ಎ-ಬ್ಲಾಕ್ ಹಾಸ್ಟೆಲ್‌ನಲ್ಲಿ ನಡೆದ ಘಟನೆಯ ನಂತರ ಶ್ರೀಲಂಕಾದಿಂದ ಮತ್ತು ಇನ್ನೊಬ್ಬ ತಜಕಿಸ್ತಾನ್‌ನಿಂದ ಬಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಷಯವನ್ನು ತಿಳಿಯುತ್ತಿದ್ದಂತೆ ಪೊಲೀಸರು 20-25 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಘಟನೆಯ ತನಿಖೆಗಾಗಿ ಒಂಬತ್ತು ತಂಡಗಳನ್ನು ರಚಿಸಿದ್ದಾರೆ.

"ಸುಮಾರು 20-25 ಜನರು ಹಾಸ್ಟೆಲ್ ಆವರಣಕ್ಕೆ ಪ್ರವೇಶಿಸಿದರು ಮತ್ತು ಅಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮಸೀದಿಯಲ್ಲಿ ನಮಾಜ್ ಮಾಡುತ್ತಿರುವುದನ್ನು ವಿರೋಧಿಸಿದರು. ಅವರು ಈ ವಿಚಾರದ ಬಗ್ಗೆ ಜಗಳವಾಡಿದರು, ಅವರ ಮೇಲೆ ಹಲ್ಲೆ ನಡೆಸಿದರು ಮತ್ತು ಕಲ್ಲು ತೂರಿದರು. ಅವರು ಅವರ ಕೊಠಡಿಗಳನ್ನೂ ಧ್ವಂಸಗೊಳಿಸಿದರು," ಎಂದು ಪೊಲೀಸ್ ಆಯುಕ್ತರು ಜಿಎಸ್ ಮಲಿಕ್ ಮಾಹಿತಿ ನೀಡಿದ್ದಾರೆ.

ವಿವಿ ಆವರಣದಲ್ಲಿ ಯಾವುದೇ ಮಸೀದಿ ಇಲ್ಲ. ಹೀಗಾಗಿ ರಂಜಾನ್ ಮಾಸದ ರಾತ್ರಿ ವೇಳೆ ನಡೆಸುವ ನಮಾಜ್ ತರವೀಹ್‌ ಸಲ್ಲಿಸಲು ಹಾಸ್ಟೆಲ್ ಒಳಗೆ ತಾವು ಗುಂಪು ಸೇರಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕೆಲವೇ ಸಮಯದಲ್ಲಿ ದೊಣ್ಣೆಗಳು ಹಾಗೂ ಚಾಕುಗಳನ್ನು ಹಿಡಿದ ಶಸ್ತ್ರಧಾರಿಗಳ ಗುಂಪು ಹಾಸ್ಟೆಲ್ ಒಳಗೆ ನುಗ್ಗಿ, ಅವರ ಮೇಲೆ ದಾಳಿ ನಡೆಸಿದೆ. ಅವರ ಕೊಠಡಿಗಳನ್ನು ಧ್ವಂಸಗೊಳಿಸಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಗುಂಪನ್ನು ತಡೆಯಲು ಹಾಸ್ಟೆಲ್‌ನ ಭದ್ರತಾ ಕಾವಲುಗಾರ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಘೋಷಣೆಗಳನ್ನು ಕೂಗಿದ ಗುಂಪು, ಹಾಸ್ಟೆಲ್ ಒಳಗೆ ನಮಾಜ್ ನಡೆಸಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿತು ಎಂಬುದಾಗಿ ಅಫ್ಘಾನಿಸ್ತಾನದ ವಿದ್ಯಾರ್ಥಿ ತಿಳಿಸಿದ್ದಾನೆ. "ಕೊಠಡಿಗಳ ಒಳಗೂ ಅವರು ನಮ್ಮ ಮೇಲೆ ಹಲ್ಲೆ ನಡೆಸಿದರು. ನಮ್ಮ ಲ್ಯಾಪ್‌ಟಾಪ್‌ಗಳು, ಫೋನ್‌ಗಳನ್ನು ಒಡೆದು ಹಾಕಿದರು. ಜತೆಗೆ ಬೈಕ್‌ಗಳಿಗೂ ಹಾನಿ ಮಾಡಿದರು" ಎಂದು ಹೇಳಿದ್ದಾನೆ.

ಓವೈಸಿ ಖಂಡನೆ ;.

ಘಟನೆಯನ್ನು ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇದರಲ್ಲಿ ಮಧ್ಯಪ್ರವೇಶ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಎಂತಹ ನಾಚಿಕೆಗೇಡು. ನಿಮ್ಮ ಭಕ್ತಿ ಹಾಗೂ ಧಾರ್ಮಿಕ ಘೋಷಣೆಗಳು ಮುಸ್ಲಿಮರು ಶಾಂತಯುತವಾಗಿ ತಮ್ಮ ಧರ್ಮವನ್ನು ಪಾಲಿಸುವಾಗ ಮಾತ್ರ ಹೊರಬರುತ್ತವೆ. ಮುಸ್ಲಿಮರನ್ನು ಕಂಡಾಗ ನೀವು ಅಷ್ಟೊಂದು ಕೋಪಗೊಳ್ಳುವುದು ಏಕೆ. ಇದು ಸಾಮೂಹಿಕ ತೀವ್ರಗಾಮಿಯನವಲ್ಲವೇ? ಇದು ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ತವರು ರಾಜ್ಯ. ಅವರು ಕಠಿಣ ಸಂದೇಶ ರವಾನಿಸಲು ಮಧ್ಯ ಪ್ರವೇಶ ಮಾಡುತ್ತಾರೆಯೇ? ದೇಶಿ ಮುಸ್ಲಿಂ ವಿರೋಧಿ ದ್ವೇಷವು ಭಾರತದ ಒಳ್ಳೆಯತನವನ್ನು ನಾಶ ಮಾಡುತ್ತಿದೆ" ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಸಹ ಟ್ಯಾಗ್ ಮಾಡಿ ಓವೈಸಿ ಟ್ವೀಟ್ ಮಾಡಿದ್ದಾರೆ.

Two men were arrested on Sunday after four foreign students at Gujarat University’s international boys’ hostel in Ahmedabad sustained injuries after they were attacked by a mob late on Saturday night reportedly over offering namaaz during Ramzan, officials said.