Kasaragod, Rs 7 crore face value seized: ಕಾಸರಗೋಡು ; ಮನೆಯಲ್ಲಿ ಬಚ್ಚಿಟ್ಟಿದ್ದ ಎರಡು ಸಾವಿರ ಮುಖಬೆಲೆಯ 7.25 ಕೋಟಿ ಮೌಲ್ಯದ ನೋಟು ಪತ್ತೆ 

21-03-24 07:58 pm       HK News Desk   ದೇಶ - ವಿದೇಶ

ಕಾಸರಗೋಡು ಜಿಲ್ಲೆಯ ಗುರುಪುರಂ ಅಂಬಲತ್ತರ ಎಂಬಲ್ಲಿನ ಮನೆಯೊಂದರಲ್ಲಿ ಅಮಾನ್ಯಗೊಂಡಿರುವ 2000 ರೂ. ಮುಖಬೆಲೆಯ ಬರೋಬ್ಬರಿ 7.25  ಕೋಟಿ ರೂ. ಮೌಲ್ಯದ ನೋಟುಗಳ ರಾಶಿ ಪತ್ತೆಯಾಗಿವೆ.

ಕಾಸರಗೋಡು, ಮಾ.21: ಕಾಸರಗೋಡು ಜಿಲ್ಲೆಯ ಗುರುಪುರಂ ಅಂಬಲತ್ತರ ಎಂಬಲ್ಲಿನ ಮನೆಯೊಂದರಲ್ಲಿ ಅಮಾನ್ಯಗೊಂಡಿರುವ 2000 ರೂ. ಮುಖಬೆಲೆಯ ಬರೋಬ್ಬರಿ 7.25  ಕೋಟಿ ರೂ. ಮೌಲ್ಯದ ನೋಟುಗಳ ರಾಶಿ ಪತ್ತೆಯಾಗಿವೆ.

ರಹಸ್ಯ ಮಾಹಿತಿ ಮೇರೆಗೆ ಅಂಬಲತ್ತರ ಸಿಐ ಕೆ.ಪರ್ಜೀಶ್ ಮತ್ತು ತಂಡ ಮನೆ ಮೇಲೆ ದಾಳಿ ನಡೆಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕೆ.ಪಿ. ಬಾಬುರಾಜ್ ಎನ್ನುವವರ ಒಡೆತನದ ಮನೆಯನ್ನು ಅಬ್ದುಲ್ ರಜಾಕ್ ಎಂಬವರಿಗೆ ತಿಂಗಳಿಗೆ 7,500 ರೂ.ಗೆ ಬಾಡಿಗೆ ನೀಡಲಾಗಿತ್ತು. ಹೊಟೇಲ್ ವ್ಯಾಪಾರ ಮಾಡುವುದಾಗಿ ಹೇಳಿಕೊಂಡಿದ್ದ ರಜಾಕ್ ತನ್ನ ಕುಟುಂಬ ಸಮೇತ ಅಲ್ಲಿಯೇ ವಾಸವಿದ್ದರು. ಮೂರು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದೆ ಮುಚ್ಚಲಾಗಿತ್ತು. 

ಅಮಾನ್ಯಗೊಂಡ ನೋಟುಗಳನ್ನು ಪೂಜಾ ಕೊಠಡಿ, ಬೆಡ್ ರೂಂ ಗಳಲ್ಲಿ ಥರ್ಮಾಕೋಲ್ ಬಾಕ್ಸ್, ಕಾರ್ಡ್‌ ಬೋರ್ಡ್ ಮತ್ತು ಗೋಣಿ ಚೀಲದಲ್ಲಿ ಬಚ್ಚಿಟ್ಟಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ವಶಪಡಿಸಿಕೊಂಡ ನೋಟುಗಳ ಕ್ರಮ ಸಂಖ್ಯೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ರಜಾಕ್‌ಗೆ ಯಾರಾದರೂ ಸಹಚರರು ಇದ್ದಾರೆಯೇ ಎಂದು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.

The police confiscated withdrawn currency notes of Rs 7 crore face value from a closed house in Gurupuram, Ambalathara here. Based on the secret information received by District Police Chief P B Joy, Ambalathara CI K Parjeesh raided the house and retrieved Rs 2,000 banknotes.